Asianet Suvarna News Asianet Suvarna News

ಆಹಾರ ಮಳಿಗೆಯ ಬೋರ್ಡ್‌ಗಳಲ್ಲಿ ಮಾಲೀಕರ ಹೆಸರು ಕಡ್ಡಾಯಕ್ಕೆ ಸುಪ್ರೀಂ ಮಧ್ಯಂತರ ತಡೆ

ಕನ್ವರ್‌ಯಾತ್ರೆ ಸಾಗುವ ಮಾರ್ಗಗಗಳಲ್ಲಿ ಆಹಾರ ಮಳಿಗೆ ಸ್ಥಾಪಿಸುವ ವ್ಯಾಪಾರಿಗಳು ತಮ್ಮ ಅಂಗಡಿಗಳ  ಬೋರ್ಡ್ ಮೇಲೆ ಮಾಲೀಕರ ಹೆಸರನ್ನು ಕಡ್ಡಾಯವಾಗಿ ಹಾಕಬೇಕು ಎಂಬ ಮುಜಾಫರ್‌ಪುರ ಪೊಲೀಸರ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರದವರೆಗೆ ಮಧ್ಯಂತರ ತಡೆ ನೀಡಿದೆ.

Supreme Court interim stay on mandatory name of owner on the boards of food stalls along the routes of Kanwar Yatra akb
Author
First Published Jul 22, 2024, 2:11 PM IST | Last Updated Jul 22, 2024, 2:20 PM IST

ನವದೆಹಲಿ: ಕನ್ವರ್‌ಯಾತ್ರೆ ಸಾಗುವ ಮಾರ್ಗಗಗಳಲ್ಲಿ ಆಹಾರ ಮಳಿಗೆ ಸ್ಥಾಪಿಸುವ ವ್ಯಾಪಾರಿಗಳು ತಮ್ಮ ಅಂಗಡಿಗಳ  ಬೋರ್ಡ್ ಮೇಲೆ ಮಾಲೀಕರ ಹೆಸರನ್ನು ಕಡ್ಡಾಯವಾಗಿ ಹಾಕಬೇಕು ಎಂಬ ಮುಜಾಫರ್‌ಪುರ ಪೊಲೀಸರ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರದವರೆಗೆ ತಡೆ ನೀಡಿದೆ. ಈ ಆದೇಶದ ಪರಿಣಾಮವೂ ವಿವಿಧ ರಾಜ್ಯಗಳಿಗೆ ಹಬ್ಬಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ ಸರ್ಕಾರವೂ ಕೂಡ ಸೂಚನೆ ನೀಡಲಿ ಅಲ್ಲಿಯವರೆಗೆ ಈ ಆದೇಶವನ್ನು ಕಾರ್ಯರೂಪಕ್ಕೆ ತರುವಂತಿಲ್ಲ ಸುಪ್ರೀಂಕೋರ್ಟ್ ಸೂಚಿಸಿದೆ. 

ಹೀಗಾಗಿ ಮುಂದಿನ ಶುಕ್ರವಾರದವರೆಗೆ ಮುಜಾಫರ್‌ಪುರ ಪೊಲೀಸರ ನಿರ್ದೇಶನಗಳನ್ನು ಜಾರಿಗೊಳಿಸುವುದನ್ನು ನಿಷೇಧಿಸುವ ಮಧ್ಯಂತರ ಆದೇಶವನ್ನು ನೀಡುವುದು ಸೂಕ್ತವೆಂದು  ಪರಿಗಣಿಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆಹಾರ ಮಾರಾಟಗಾರರು ಮಾಲೀಕರು, ಸಿಬ್ಬಂದಿಯ ಹೆಸರನ್ನು ಪ್ರದರ್ಶಿಸಲು ಪೊಲೀಸರು ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಈ ಮಧ್ಯಂತರ ಆದೇಶದ ವೇಳೆ ಹೇಳಿದೆ.  ಉತ್ತರ ಪ್ರದೇಶದಲ್ಲಿ ಹಿಂದೂ ತೀರ್ಥಯಾತ್ರೆ ಕನ್ವರ್‌ ಯಾತ್ರೆ ಸಾಗುವ ಮಾರ್ಗಗಳಲ್ಲಿ ತಿಂಡಿ ತಿನಿಸುಗಳ ಅಂಗಡಿ, ಹೊಟೇಲ್‌ ಇಟ್ಟವರು ತಮ್ಮ ಅಂಗಡಿಗಳ ಬೋರ್ಡ್ ಮೇಲೆ ಕಡ್ಡಾಯವಾಗಿ ಮಾಲೀಕರ ಹೆಸರನ್ನು ಬರೆಯಬೇಕು ಇದರಿಂದ ಯಾತ್ರಾರ್ಥಿಗಳಿಗೆ ಯಾವುದೇ ಗೊಂದಲ ಆಗುವುದಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಸೂಚನೆ ನೀಡಿದ್ದರು. ಇದಕ್ಕೆ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. 

ಮುಸ್ಲಿಮರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರಿಡಬೇಡಿ ಎಂದ ಬಿಜೆಪಿ ಸಚಿವ

ಉತ್ತರ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭಕ್ತರು ಪವಿತ್ರ ಕನ್ವರ್‌ ಯಾತ್ರೆ ತೆರಳುತ್ತಾರೆ. ಈ ಯಾತ್ರೆ ಸಾಗುವ 250 ಕಿಲೋ ಮೀಟರ್ ಉದ್ದಕ್ಕೂ ಬೀದಿ ಬದಿ ತಿಂಡಿ ವ್ಯಾಪಾರಿಗಳು ತಮ್ಮ ತಳ್ಳುವ ಗಾಡಿ/ ಅಂಗಡಿಯೆದುರು ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶದ ಮುಜಪ್ಟರ್‌ನಗರ ಪೊಲೀಸರು ಆದೇಶ ಹೊರಡಿಸಿದ್ದರು. 'ಯಾತ್ರೆಯ ವೇಳೆ ಕಾವಾಡಿಗಳು ರಸ್ತೆ ಬದಿಯಲ್ಲಿ ತಿಂಡಿ-ತಿನಿಸುಗಳನ್ನು ಖರೀದಿಸುವ ಕಾರಣ ಉಂಟಾಗಬಹುದಾದ ಗೊಂದಲಗಳಿಗೆ ಆಸ್ಪದ ಕೊಡದೆ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಆದೇಶ ಹೊರಡಿಸಲಾಗಿದೆ ಎಂದು ಮುಜಪ್ಟರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಹೇಳಿದ್ದರು.

ಆದರೆ, ಇದು ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿ ಹೊರಡಿಸಿರುವ ಆದೇಶ. ಮುಸ್ಲಿಂ ವ್ಯಾಪಾರಿಗಳಿಂದ ಯಾತ್ರಿಗಳು ಏನೂ ಖರೀದಿಸಬಾರದು ಎಂಬ ಹುನ್ನಾರ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದರು. ಕಾಂಗ್ರೆಸ್ ಕೂಡ ಉತ್ತರ ಪ್ರದೇಶ ಪೊಲೀಸರ ಈ ನಡೆಗೆ ವಿರೋಧ ವ್ಯಕ್ತಪಡಿಸಿತ್ತು. ಖುದ್ದು ಬಿಜೆಪಿ ನಾಯಕ ಮುಖಾರ್ ಅಬ್ಬಾಸ್ ನಖ್ವಿ ಅವರೇ ಈ ಬಗ್ಗೆಅಸಮಾಧಾನ ವ್ಯಕ್ತಪಡಿಸಿದ್ದರು. ಜು.22 ರಿಂದ ಅಂದರೆ ಇಂದಿನಿಂದ ಆ.2ರ ವರೆಗೆ ನಡೆಯುವ ಕನ್ವರ್‌ ಯಾತ್ರೆಯಲ್ಲಿ ಶಿವಭಕ್ತರು ಕಾಲ್ನಡಿಗೆಯ ಮೂಲಕ ಆಗಮಿಸಿ ಗಂಗೆಯ ನೀರನ್ನು ಸಂಗ್ರಹಿಸಿ ಶಿವನ ದೇಗುಲಗಳಿಗೆ ತಂದು ಅಭಿಷೇಕ ಮಾಡುತ್ತಾರೆ.

ರಾಮ್‌ದೇವ್‌ಗೆ ಗುರುತು ಹೇಳಲು ಸಮಸ್ಯೆ ಇಲ್ಲವೆಂದರೆ ರೆಹಮಾನ್‌ಗೆ ಏಕೆ ಸಮಸ್ಯೆ: ಬಾಬಾ ರಾಮ್‌ದೇವ್

Latest Videos
Follow Us:
Download App:
  • android
  • ios