ಉತ್ತರ ಪ್ರದೇಶದಲ್ಲಿ ಹೊಟೇಲ್‌ ಬೋರ್ಡ್‌ ಮೇಲೆ  ಮಾಲೀಕರ  ಹೆಸರು ಕಡ್ಡಾಯ ವಿವಾದಕ್ಕೆ ರಾಮ್‌ ದೇವ್ ಪ್ರತಿಕ್ರಿಯಿಸಿದ್ದು,  ರಾಮದೇವ್‌ಗೆ ತನ್ನ ಗುರುತನ್ನು ಹೇಳಿಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲವೆಂದಾದರೆ ರೆಹಮಾನ್‌ಗೆ ತನ್ನ ಗುರುತನ್ನು ಹೇಳಿಕೊಳ್ಳುವುದಕ್ಕೆ ಯಾವ ಸಮಸ್ಯೆ ಇದೆ ಎಂದು ಪ್ರಶ್ನಿಸಿದ್ದಾರೆ.

ಹರಿದ್ವಾರ: ಉತ್ತರ ಪ್ರದೇಶದಲ್ಲಿ ಹಿಂದೂ ತೀರ್ಥಯಾತ್ರೆ ಕನ್ವರ್‌ ಯಾತ್ರೆ ಸಾಗುವ ಮಾರ್ಗಗಳಲ್ಲಿ ತಿಂಡಿ ತಿನಿಸುಗಳ ಅಂಗಡಿ, ಹೊಟೇಲ್‌ ಇಟ್ಟವರು ತಮ್ಮ ಅಂಗಡಿಗಳ ಬೋರ್ಡ್ ಮೇಲೆ ಕಡ್ಡಾಯವಾಗಿ ಮಾಲೀಕರ ಹೆಸರನ್ನು ಬರೆಯಬೇಕು ಇದರಿಂದ ಯಾತ್ರಾರ್ಥಿಗಳಿಗೆ ಯಾವುದೇ ಗೊಂದಲ ಆಗುವುದಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಸೂಚನೆ ನೀಡಿದ್ದರು. ಇದಕ್ಕೆ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಯೋಗ ಗುರು ಬಾಬಾ ರಾಮದೇವ್ ಪ್ರತಿಕ್ರಿಯೆ ನೀಡಿದ್ದು, ರಾಮದೇವ್‌ಗೆ ತನ್ನ ಗುರುತನ್ನು ಹೇಳಿಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲವೆಂದಾದರೆ ರೆಹಮಾನ್‌ಗೆ ತನ್ನ ಗುರುತನ್ನು ಹೇಳಿಕೊಳ್ಳುವುದಕ್ಕೆ ಯಾವ ಸಮಸ್ಯೆ ಇದೆ. ಪ್ರತಿಯೊಬ್ಬರು ತಮ್ಮ ಹೆಸರಿನ ಬಗ್ಗೆ ಹೆಮ್ಮೆ ಪಡಬೇಕು. ಹೆಸರನ್ನು ಅಡಗಿಸಿಡುವ ಅಗತ್ಯವಿಲ್ಲ, ಕೆಲಸದಲ್ಲಿ ಕೇವಲ ಶುದ್ಧತೆ ಮಾತ್ರ ಮುಖ್ಯ, ನಮ್ಮ ಕೆಲಸ ಶುದ್ಧವಾಗಿದ್ದರೆ, ನೀವು ಹಿಂದೋ ಅಥವಾ ಮುಸ್ಲಿಂ ಸಮುದಾಯದವರೋ ಅಥವಾ ಇನ್ಯಾವುದೋ ಸಮುದಾಯದವರೋ ಇದ್ಯಾವುದು ಕೂಡ ದೊಡ್ಡ ವಿಚಾರವಾಗುವುದಿಲ್ಲ ಎಂದು ಬಾಬಾ ರಾಮ್‌ ದೇವ್ ಹೇಳಿದ್ದಾರೆ. 

ಉತ್ತರ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭಕ್ತರು ಪವಿತ್ರ ಕನ್ವರ್‌ ಯಾತ್ರೆ ತೆರಳುತ್ತಾರೆ. ಈ ಯಾತ್ರೆ ಸಾಗುವ 250 ಕಿಲೋ ಮೀಟರ್ ಉದ್ದಕ್ಕೂ ಬೀದಿ ಬದಿ ತಿಂಡಿ ವ್ಯಾಪಾರಿಗಳು ತಮ್ಮ ತಳ್ಳುವ ಗಾಡಿ/ ಅಂಗಡಿಯೆದುರು ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶದ ಮುಜಪ್ಟರ್‌ನಗರ ಪೊಲೀಸರು ಆದೇಶ ಹೊರಡಿಸಿದ್ದರು. 'ಯಾತ್ರೆಯ ವೇಳೆ ಕಾವಾಡಿಗಳು ರಸ್ತೆ ಬದಿಯಲ್ಲಿ ತಿಂಡಿ-ತಿನಿಸುಗಳನ್ನು ಖರೀದಿಸುವ ಕಾರಣ ಉಂಟಾಗಬಹುದಾದ ಗೊಂದಲಗಳಿಗೆ ಆಸ್ಪದ ಕೊಡದೆ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಆದೇಶ ಹೊರಡಿಸಲಾಗಿದೆ ಎಂದು ಮುಜಪ್ಟರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಹೇಳಿದ್ದರು.

ಮುಸ್ಲಿಮರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರಿಡಬೇಡಿ ಎಂದ ಬಿಜೆಪಿ ಸಚಿವ

ಆದರೆ, ಇದು ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿ ಹೊರಡಿಸಿರುವ ಆದೇಶ. ಮುಸ್ಲಿಂ ವ್ಯಾಪಾರಿಗಳಿಂದ ಯಾತ್ರಿಗಳು ಏನೂ ಖರೀದಿಸಬಾರದು ಎಂಬ ಹುನ್ನಾರ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ. ಈ ನಡೆಗೆ ಖುದ್ದು ಬಿಜೆಪಿ ನಾಯಕ ಮುಖಾರ್ ಅಬ್ಬಾಸ್ ನಖಿ ಆವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜು.22 ರಿಂದ ಆ.2ರ ವರೆಗೆ ನಡೆಯುವ ಕನ್ವರ್‌ ಯಾತ್ರೆಯಲ್ಲಿ ಶಿವಭಕ್ತರು ಕಾಲ್ನಡಿಗೆಯ ಮೂಲಕ ಆಗಮಿಸಿ ಗಂಗೆಯ ನೀರನ್ನು ಸಂಗ್ರಹಿಸಿ ಶಿವನ ದೇಗುಲಗಳಿ ತಂದು ಅಭಿಷೇಕ ಮಾಡುತ್ತಾರೆ.

ಕನ್ವರ್‌ ಯಾತ್ರೆ ಹೊರಟವರಿಂದ ಬುಲ್ಡೋಜರ್‌ ಬಾಬಾ ಟೀಶರ್ಟ್‌ಗೆ ಭಾರೀ ಡಿಮ್ಯಾಂಡ್

Scroll to load tweet…