ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್‌ನಿಂದ ಮತ್ತೆ ನಾಲ್ಕು ವಾರಗಳ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನ್ಯಾ.ಡಿ.ವೈ.ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿ, ಕರ್ನಾಟಕ ಸರ್ಕಾರಕ್ಕೆ ನೋಟೀಸ್ ನೀಡಿದೆ. ಬಳಿಕ ತಡೆಯಾಜ್ಞೆಯನ್ನು ಮತ್ತೆ ನಾಲ್ಕು ವಾರಗಳು ಮುಂದುವರೆಸಿದೆ.

ನವದೆಹಲಿ (ಅ.31): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್‌ನಿಂದ ಮತ್ತೆ ನಾಲ್ಕು ವಾರಗಳ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನ್ಯಾ.ಡಿ.ವೈ.ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿ, ಕರ್ನಾಟಕ ಸರ್ಕಾರಕ್ಕೆ ನೋಟೀಸ್ ನೀಡಿದೆ. ಬಳಿಕ ತಡೆಯಾಜ್ಞೆಯನ್ನು ಮತ್ತೆ ನಾಲ್ಕು ವಾರಗಳು ಮುಂದುವರೆಸಿದೆ.

ಬಿಡಿಎ ಹೌಸಿಂಗ್ ಟೆಂಡರ್ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಿತ್ತು. ಲೋಕಾಯುಕ್ತ ಕ್ರಮವನ್ನು ಬಿ.ಎಸ್.ಯಡಿಯೂರಪ್ಪ ಸುಪ್ರೀಂಕೋರ್ಟ್ ಬಾಗಿಲು ತಟ್ಟಿದ್ದರು. ಆಗ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯನ್ನು ದೂರುದಾರ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಪ್ರಶ್ನಿಸಿದ್ದರು.

ಕೆಂಪೇಗೌಡರ ಕೊಡುಗೆ ಮರೆಯಲ್ಲ: ಯಡಿಯೂರಪ್ಪ

ಬಾದಾಮಿಯ ಜನರ ವಿಶ್ವಾಸ, ನಂಬಿಕೆ ಕಳೆದುಕೊಂಡ ಸಿದ್ದು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಸೆಂಬ್ಲಿ ಚುನಾವಣೆಗೆ ಬಾದಾಮಿಯಿಂದ ಯಾಕೆ ಸ್ಪರ್ಧಿಸುತ್ತಿಲ್ಲ? ಅವರ ಬಗ್ಗೆ ಇದ್ದ ವಿಶ್ವಾಸ, ನಂಬಿಕೆಯನ್ನು ಅಲ್ಲಿನ ಜನ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ವ್ಯಾಖ್ಯಾನಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ ಯಡಿಯೂರಪ್ಪ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕುತಿದ್ದಾರೆ, ಯಾವುದೂ ಸಿಕ್ಕಿಲ್ಲ. ಹಾಗಾಗಿ ಈಗ ಕೋಲಾರ ಎಂದು ಹೇಳುತ್ತಿದ್ದಾರೆ. ಕೋಲಾರದಿಂದ ಸ್ಪರ್ಧಿಸಿದರೆ ಅಲ್ಲಿದ್ದವರು ಇನ್ನೊಂದು ಕ್ಷೇತ್ರ ಹುಡುಕಬೇಕಾಗುತ್ತದೆ. ಮೈಸೂರು, ಬಾದಾಮಿ ಬಿಟ್ಟು ಈಗ ಮತ್ತೊಂದು ಕ್ಷೇತ್ರ ಹುಡುಕುತ್ತಿದ್ದಾರೆ. ಹಾಗಾದರೆ ಬಾದಾಮಿಯಿಂದ ಯಾಕೆ ನಿಲ್ಲುವುದಿಲ್ಲ? ಸಿದ್ದರಾಮಯ್ಯ ಅವರ ಜನಪ್ರಿಯತೆ ಎಷ್ಟಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ನೀವು ಪ್ರಾಮಾಣಿಕರಾಗಿದ್ದರೆ ಎಲ್ಲಿಂದ ಗೆದ್ದಿದ್ದೀರಿ ಅಲ್ಲಿಂದಲೇ ಚುನಾವಣೆ ಎದುರಿಸಿ, ಇಲ್ಲದಿದ್ದರೆ ನೀವು ಹೆದರಿ ಪಲಾಯನ ಮಾಡುತ್ತಿದ್ದೀರಿ ಎಂಬುದು ಸಾಬೀತಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಬಗ್ಗೆ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು. ಈಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರ ಬಗ್ಗೆ ಯಾವುದೇ ಟೀಕೆ ಟಿಪ್ಪಣೆ ಮಾಡುವುದಕ್ಕೆ ನಾನು ಇಷ್ಟಪಡುವುದಿಲ್ಲ ಎಂದರು. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಬಿಎಸ್‌ವೈ, ಈಗ ಮೀಸಲಾತಿ ಹೆಚ್ಚಳಕ್ಕೆ ಎಲ್ಲರೂ ಕೇಳುತ್ತಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದರು.

ಸಿಎಂ ಬೊಮ್ಮಾಯಿ, ಬಿಎಸ್‌ವೈರಿಂದ ಸಚಿವ ಅಶ್ವತ್ಥ್‌ ಗುಣಗಾನ

ಬಿಜೆಪಿ ಅಧಿಕಾರಕ್ಕೆ ಕಾಂಗ್ರೆಸ್‌ ಅಡ್ಡಗಾಲು ಅಸಾಧ್ಯ: ಕಾಂಗ್ರೆಸ್‌ನ ಯಾತ್ರೆಗಳ ಬಗ್ಗೆ ನಾನು ಏನೂ ಹೇಳುವುದಿಲ್ಲ, ಅದು ಅವರ ಪಕ್ಷಕ್ಕೆ ಬಿಟ್ಟವಿಚಾರ. ಕಲಬುರಗಿಯಲ್ಲಿ ನಾಡಿನಿಂದ ನಮ್ಮ ಕಾರ್ಯಕ್ರಮ ಆರಂಭವಾಗುತ್ತದೆ. ಕಾಂಗ್ರೆಸ್‌ನವರ ಯಾವುದೇ ಯಾತ್ರೆಗಳು, ಬಸ್‌ ಸಂಚಾರ ಬಿಜೆಪಿಗೆ ಚುನಾವಣೆ ಮೇಲೆ ಪರಿಣಾಮ ಬೀರದು. ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಂತೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಜನತೆ ಈಗಾಗಲೇ ತೀರ್ಮಾನಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‌ನ ಯಾವುದೇ ಕಾರ್ಯಕ್ರಮಗಳು ನಮ್ಮನ್ನು ಅಧಿಕಾರಕ್ಕೆ ಬಾರದಂತೆ ತಡೆಯಲು ಶಕ್ತವಾಗದು. ನಾನು ನಾಡಿದ್ದು ರಾಜ್ಯ ಪ್ರವಾಸ ಆರಂಭಿಸಲಿದ್ದೇನೆ ಎಂದರು.