Asianet Suvarna News Asianet Suvarna News

ಕೆಂಪೇಗೌಡರ ಕೊಡುಗೆ ಮರೆಯಲ್ಲ: ಯಡಿಯೂರಪ್ಪ

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಕೊಡುಗೆಯನ್ನು ಈ ನಾಡು ಎಂದಿಗೂ ಮರೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Former CM BS Yediyurappa Talks Over Kempegowda gvd
Author
First Published Oct 22, 2022, 2:22 PM IST

ಬೆಂಗಳೂರು (ಅ.22): ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಕೊಡುಗೆಯನ್ನು ಈ ನಾಡು ಎಂದಿಗೂ ಮರೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಕೆಂಪೇಗೌಡ ಅವರಿಗೆ ನಿಜವಾದ ಗೌರವ, ನಮನ ಸಲ್ಲಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಸ್ತಾಪ ಮಾಡಲಾಯಿತು. ತಕ್ಷಣ ಹಣಕಾಸು ನೆರವು ಕೊಟ್ಟು ಒಪ್ಪಿಗೆ ಸೂಚಿಸಿದ್ದೆ ಎಂದರು.

ಕೆಂಪೇಗೌಡ ಅವರು ಹಲವು ಕೆರೆಗಳನ್ನು ನಿರ್ಮಿಸಿದ್ದಾರೆ. ಬೆಂಗಳೂರನ್ನು ವೈಜ್ಞಾನಿಕವಾಗಿ ನಿರ್ಮಿಸಲು ಕಾರಣಭೂತರಾಗಿದ್ದಾರೆ. ಇವತ್ತು ಬೆಂಗಳೂರು ಜಗತ್ತಿನ ಅತ್ಯಂತ ಕ್ರಿಯಾಶೀಲ ನಗರವಾಗಿದೆ. ಜಗತ್ತಿನ ಯಾವ ನಗರದ ವಿಮಾನ ನಿಲ್ದಾಣದಲ್ಲಿಯೂ ಆ ನಗರ ನಿರ್ಮಾತೃಗಳ ಪ್ರತಿಮೆ ಇಲ್ಲ. ಬೆಂಗಳೂರ ಏಕೈಕ ನಗರದ ವಿಮಾನ ನಿಲ್ದಾಣದಲ್ಲಿ ಮಾತ್ರ ನಗರ ನಿರ್ಮಾತೃ ಕೆಂಪೇಗೌಡ ಅವರ ಪ್ರತಿಮೆ ಇದೆ ಎಂದು ತಿಳಿಸಿದರು.

ಅರಣ್ಯ ಭೂಮಿ ಡಿನೋಟಿಫೈ: ಕೇಂದ್ರಕ್ಕೆ ಬಿಎಸ್‌ವೈ ಮನವಿ

ಗಾಣಿಗ ಪೀಠ ಭೂ ವಿವಾದ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಗಾಣಿಗ ಜನಾಂಗದ ಗುರುಪೀಠಕ್ಕೆ ಸರ್ಕಾರದಿಂದ ಬೆಂಗಳೂರಿನಲ್ಲಿ ಐದು ಕೋಟಿ ರು. ಅನುದಾನ ಮತ್ತು ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್‌ಗೆ 10 ಎಕರೆ ಜಮೀನು ನೀಡಿದ ಕ್ರಮ ಪ್ರಶ್ನಿಸಿರುವ ಅರ್ಜಿ ಸಂಬಂಧ ನಾಯಾಲಯಕ್ಕೆ ಅಗತ್ಯ ನೆರವು ಕಲ್ಪಿಸಲು ವಕೀಲೆ ಬಿ.ವಿ. ವಿದ್ಯುಲ್ಲತಾ ಅವರನ್ನು ಅಮಿಕಸ್‌ ಕ್ಯೂರಿಯಾಗಿ ಹೈಕೋರ್ಟ್‌ ನೇಮಿಸಿದೆ. ಈ ಕುರಿತು ಆರ್‌ಟಿಐ ಎನ್‌. ಹನುಮೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವಯಂ ಪ್ರೇರಿತ ಪಿಐಎಲ್‌ ಆಗಿ ಪರಿವರ್ತಿಸಿಕೊಂಡು ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿ ಕುರಿತು ಹೈಕೋರ್ಟ್‌ಗೆ ಅಗತ್ಯ ನೆರವು ಕಲ್ಪಿಸುವ ವಕೀಲೆ ಬಿ.ವಿ. ವಿದ್ಯೂಲ್ಲತಾ ಅವರನ್ನು ಅಮಿಕಸ್‌ ಕ್ಯೂರಿ ಆಗಿ ನೇಮಿಸಿತು. ಅಲ್ಲದೆ, ನ್ಯಾಯಾಲಯದ ಕಚೇರಿಯು ಎರಡು ವಾರದಲ್ಲಿ ಅರ್ಜಿ ಕುರಿತ ಎಲ್ಲಾ ದಾಖಲೆಗಳನ್ನು ಅಮಿಕಸ್‌ ಕ್ಯೂರಿ ಅವರಿಗೆ ಒದಗಿಸಬೇಕು. ಅವುಗಳನ್ನು ಪರಿಶೀಲಿಸಿ ಅಮಿಕಸ್‌ ಕ್ಯೂರಿ ಅವರು ತಮ್ಮ ವಾದಾಂಶದ ಪ್ರತಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಯಡಿಯೂರಪ್ಪ ರಾಜ್ಯದ ಜನಪ್ರಿಯ ನಾಯಕ: ಅರುಣ್‌ ಸಿಂಗ್‌

ಅರ್ಜಿಯಲ್ಲಿ ಐದನೇ ಪ್ರತಿವಾದಿಯಾದ ವಿಶ್ವಗಾಣಿಗ ಸಮುದಾಯದ ಟ್ರಸ್ಟ್‌ ವಿರುದ್ಧ ಉದ್ದೇಶಪೂರ್ವಕವಾಗಿ ಪಿಐಎಲ್‌ ಸಲ್ಲಿಸಿದ ಹಿನ್ನೆಲೆಯಲ್ಲಿ ಆರ್‌ಐಟಿ ಕಾರ್ಯಕರ್ತ ಹನುಮೇಗೌಡಗೆ 25 ಸಾವಿರ ರು. ದಂಡ ವಿಧಿಸಿ 2020ರ ಮಾ.3ರಂದು ಹೈಕೋರ್ಟ್‌ ಆದೇಶಿಸಿತ್ತು. ಅದರಂತೆ ಹನುಮೇಗೌಡ 25 ಸಾವಿರ ರು. ಮೊತ್ತದ ಚೆಕ್‌ ಡೆಪಾಸಿಟ್‌ ಮಾಡಿದ್ದರು. ಚೆಕ್‌ ಇದೀಗ ನಗದು ಆಗಿ ಸಂದಾಯವಾಗಿದೆ ಎಂದು ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ನ್ಯಾಯಪೀಠದ ಗಮನಕ್ಕೆ ತಂದರು.

Follow Us:
Download App:
  • android
  • ios