ಚಿರತೆ ಆವಾಸಸ್ಥಾನದ ವಿಚಾರದಲ್ಲಿ ರಾಜಕೀಯ ತರಬೇಡಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್

ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಕರೆತಂದ ಚೀತಾಗಳಲ್ಲಿ ಇತ್ತೀಚೆಗೆ ಒಂದಾದ ಮೇಲೊಂದರಂತೆ ಒಟ್ಟು ಮೂರು ಚೀತಾಗಳು ಪ್ರಾಣ ಬಿಟ್ಟಿದ್ದು, ಚೀತಾಗಳ ಸರಣಿ ಸಾವಿಗೆ ಸುಪ್ರೀಂಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

Supreme Court concerned about the serial deaths of cheetahs, Dont bring politics to the issue of leopard habitat Supreme Court to Centre akb

ನವದೆಹಲಿ: ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಕರೆತಂದ ಚೀತಾಗಳಲ್ಲಿ ಇತ್ತೀಚೆಗೆ ಒಂದಾದ ಮೇಲೊಂದರಂತೆ ಒಟ್ಟು ಮೂರು ಚೀತಾಗಳು ಪ್ರಾಣ ಬಿಟ್ಟಿದ್ದು, ಚೀತಾಗಳ ಸರಣಿ ಸಾವಿಗೆ ಸುಪ್ರೀಂಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.  ದಕ್ಷಿಣ ಆಫ್ರಿಕಾದಿಂದ ಕರೆ ತಂದ ಚೀತಾಗಳನ್ನು ಮಧ್ಯಪ್ರದೇಶದ (Madhya Pradesh) ಕುನೋದಲ್ಲಿರುವ ರಾಷ್ಟ್ರೀಯ ಅಭಯಾರಣ್ಯಕ್ಕೆ ಬಿಡಲಾಗಿತ್ತು. ಚಿರತೆಗಳ ಸರಣಿ ಸಾವಿನ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬಿ.ಆರ್ ಗವಾಯಿ (B.R. Gavai) ನೇತೃತ್ವದ ಪೀಠ, ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ವರ್ಗಾವಣೆಯಾದ ಕೇವಲ ಎರಡು ತಿಂಗಳಲ್ಲಿ ಚಿರತೆಗಳ ಸಾವು ಸಂಭವಿಸಿವೆ. ಚೀತಾಗಳ ವಿಚಾರವನ್ನು ರಾಜಕೀಯಗೊಳಿಸದೇ ಅವುಗಳನ್ನು ರಾಜಸ್ಥಾನದ ಕಾಡಿಗೆ ಬಿಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು ಎಂದು ಹೇಳಿದರು. 

ಈ ವಿಚಾರದಲ್ಲಿ ಪಕ್ಷ ರಾಜಕಾರಣವನ್ನು ತರಬೇಡಿ. ಚೀತಾಗಳಿಗೆ ಲಭ್ಯವಿರುವ ಎಲ್ಲಾ ಆವಾಸಸ್ಥಾನಗಳನ್ನು (habitats) ಪರಿಗಣಿಸಿ, ಅವುಗಳಿಗೆ ಸೂಕ್ತವಾದುದ್ದನ್ನು ಆಯ್ಕೆ ಮಾಡಿ.  ಎರಡು ತಿಂಗಳೊಳಗೆ ಮೂರು ಚಿರತೆಗಳ ಸಾವುಗಳು ಗಂಭೀರ ಕಳವಳಕಾರಿ ವಿಚಾರವಾಗಿದೆ. ಮಾಧ್ಯಮಗಳಲ್ಲಿ ತಜ್ಞರ ಅಭಿಪ್ರಾಯಗಳು ಮತ್ತು ಲೇಖನಗಳಿವೆ. ಅದರಲ್ಲಿರುವಂತೆ ಎಷ್ಟೋ ಚಿರತೆಗಳಿಗೆ ಕುನೋ ಉದ್ಯಾನವನ ಸಾಕಾಗುವುದಿಲ್ಲ ಎಂಬ ಮಾಹಿತಿ ಇದೆ. ಒಂದೇ ಸ್ಥಳದಲ್ಲಿ ಚಿರತೆಗಳ ಹೆಚ್ಚಿನ ಸಾಂದ್ರತೆಯಿದೆ. ಹೀಗಾಗಿ ನೀವು ರಾಜಸ್ಥಾನದಲ್ಲಿ ಸೂಕ್ತವಾದ ಸ್ಥಳವನ್ನು ಏಕೆ ಹುಡುಕಬಾರದು? ರಾಜಸ್ಥಾನದಲ್ಲಿ ನಿಮ್ಮ ವಿರೋಧಿ ಪಕ್ಷ (opposition party) ಆಡಳಿತದಲ್ಲಿದೆ ಎಂದು ಆ ಸ್ಥಳವನ್ನು ಪರಿಗಣಿಸುವುದಿಲ್ಲವೇ ಎಂದು ನ್ಯಾಯಪೀಠ ಕೇಂದ್ರ ಸರ್ಕಾರವನ್ನು ಕೇಳಿದೆ. 

ಗಂಡು ಚೀತಾದ ಆಕ್ರಮಣಕಾರಿ ಸಂಭೋಗ, ದಕ್ಷಿಣ ಆಫ್ರಿಕಾದಿಂದ ಬಂದಿದ್ದ 'ದಕ್ಷಾ' ಚೀತಾ ಸಾವು!

ಈ ಬಗ್ಗೆ ಕೇಂದ್ರದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ (Aishwarya Bhati), ಈ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಅಲ್ಲದೇ ಚೀತಾಗಳನ್ನು ಇತರ ಅಭಯಾರಣ್ಯಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ಎಲ್ಲಾ ಸಂಭಾವ್ಯ ಅಂಶಗಳ ಬಗ್ಗೆ ಕಾರ್ಯಪಡೆಯ ತಜ್ಞರು ತನಿಖೆ ನಡೆಸುತ್ತಿದ್ದಾರೆ ಎಂದರು. 

ಮಾರ್ಚ್ 27 ರಂದು, ಸಶಾ (Sasha) (ನಮೀಬಿಯಾದಿಂದ) ಎಂಬ ಹೆಣ್ಣು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತು.  ಏಪ್ರಿಲ್ 23 ರಂದು ಉದಯ್ (ದಕ್ಷಿಣ ಆಫ್ರಿಕಾ) ಎಂಬ ಗಂಡು ಚೀತಾ ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿತು ಮತ್ತು ಮೇ 9 ರಂದು ದಕ್ಷ (Daksha) ಎಂಬ ಮತ್ತೊಂದು ದಕ್ಷಿಣ ಆಫ್ರಿಕಾದ ಹೆಣ್ಣು ಚೀತಾ ಸಾವನ್ನಪ್ಪಿತು. ಸಂತಾನೋತ್ಪತಿ ಪ್ರಕ್ರಿಯೆ ವೇಳೆ ಗಂಡಿನೊಂದಿಗಿನ ಘರ್ಷಣೆಯ ಪರಿಣಾಮ ಈ ಹೆಣ್ಣು ಚೀತಾ ಸಾವನ್ನಪ್ಪಿತ್ತು. 

ಇತ್ತ ಮೂತ್ರಪಿಂಡ (kidney) ಸಂಬಂಧಿ ಕಾಯಿಲೆಯಿಂದ ಮೃತಪಟ್ಟ ಚಿರತೆ ಭಾರತಕ್ಕೆ ಕರೆತರುವ ಮುನ್ನವೇ ಸಮಸ್ಯೆಯಿಂದ ಬಳಲುತ್ತಿತ್ತು ಎಂದು ತಿಳಿದು ಬಂದಿದೆ. ಚಿರತೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಆ ಹೆಣ್ಣು ಚಿರತೆಯನ್ನು ಭಾರತಕ್ಕೆ ಕರೆತರಲು ಹೇಗೆ ಒಪ್ಪಲಾಯಿತು ಎಂಬುದು ಪ್ರಶ್ನೆಯಾಗಿದೆ ಎಂದು ಪೀಠ ಪ್ರಶ್ನಿಸಿದೆ. 

ಅಯ್ಯೋ ಪಾಪ: ಮಧ್ಯ ಪ್ರದೇಶದ ಕುನೋ ಅರಣ್ಯದಲ್ಲಿ ಚೀತಾ ಉದಯ್‌ ಸಾವಿಗೆ ಹಾವು ಕಡಿತ ಕಾರಣ?

ಸಾವನ್ನಪ್ಪಿದ ಎಲ್ಲಾ ಚಿರತೆಗಳ ಮರಣೋತ್ತರ ಪರೀಕ್ಷೆಗಳನ್ನು (autopsies) ಮಾಡಲಾಗಿದೆ ಮತ್ತು ಕಾರ್ಯಪಡೆಯು ಸಮಸ್ಯೆಯನ್ನು ತನಿಖೆ ಮಾಡುತ್ತಿದೆ ಎಂದು ಐಶ್ವರ್ಯಾ ಭಾಟಿ ಸುಪ್ರೀಂಕೋರ್ಟ್‌ಗೆ ಹೇಳಿದ್ದಾರೆ. ನೀವು ವಿದೇಶದಿಂದ ಚಿರತೆಗಳನ್ನು ತಂದಿದ್ದೀರಿ ಇದು ಒಳ್ಳೆಯ ವಿಚಾರವೇ. ಆದರೆ ಅವುಗಳನ್ನು ರಕ್ಷಿಸಬೇಕಾಗಿದೆ. ಅವರಿಗೆ ಸೂಕ್ತ ವಾಸಸ್ಥಾನ ಕಲ್ಪಿಸಬೇಕು. ಕುನೋಗಿಂತ ಹೆಚ್ಚು ಸೂಕ್ತವಾದ ಆವಾಸಸ್ಥಾನವನ್ನು  ನೀವು ಏಕೆ ಅನ್ವೇಷಿಸಬಾರದು ಎಂದು ನ್ಯಾಯಾಲಯ ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯಾ ಭಾಟಿ, ಕುನೋದಲ್ಲಿ ಚಿರತೆಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಇದು, ಅವುಗಳು ಕುನೋದಲ್ಲಿ ವೇಗವಾಗಿ ಒಗ್ಗಿಕೊಳ್ಳುತ್ತಿವೆ ಎಂಬುದನ್ನು ತೋರಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. 

Latest Videos
Follow Us:
Download App:
  • android
  • ios