ಗಂಡು ಚೀತಾದ ಆಕ್ರಮಣಕಾರಿ ಸಂಭೋಗ, ದಕ್ಷಿಣ ಆಫ್ರಿಕಾದಿಂದ ಬಂದಿದ್ದ 'ದಕ್ಷಾ' ಚೀತಾ ಸಾವು!

ಭಾರತಕ್ಕೆ ಬಂದ ಎರಡೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಮೂಲದ ಚೀತಾದ ಮೂರನೇ ಸಾವು ಇದಾಗಿದೆ. ಮಂಗಳವಾರ ಗಂಡು ಚೀತಾದ ಆಕ್ರಮಣಕಾರಿ ಸಂಭೋಗದಿಂದಾಗಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ 'ದಕ್ಷಾ' ಹೆಸರಿನ ಚೀತಾ ಸಾವು ಕಂಡಿದೆ.
 

aggressive intercourse by male Cheetah South African Cheetah Daksha dies at Kuno san

ನವದೆಹಲಿ (ಮೇ.9): ದಕ್ಷಿಣ ಆಫ್ರಿಕಾ ಮೂಲದ ಇನ್ನೊಂದು ಹೆಣ್ಣು ಚೀತಾ ದಕ್ಷಾ ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ಸಾವು ಕಂಡಿದೆ. ಗಂಡು ಚೀತಾದ ಆಕ್ರಮಣಕಾರಿ ಸಂಭೋಗದ ಕಾರಣದಿಂದಾಗಿ ಚೀತಾ ಸಾವು ಕಂಡಿದೆ ಎಂದು ಹೇಳಲಾಗಿದೆ. ಕುನೋದಲ್ಲಿ ಕಳೆದ ಎರಡು ತಿಂಗಳಲ್ಲಿ ಸಾವು ಕಂಡ ಮೂರನೇ ಆಫ್ರಿಕಾದ ಚೀತಾ ಇದಾಗಿದೆ. ಆ ಮೂಲಕ ಕೇಂದ್ರ ಸರ್ಕಾರದ ಚೀತಾ  ಸಂರಕ್ಷಣಾ ಯೋಜನೆಗೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಂತಾಗಿದೆ. ಕೆಲವು ವಾರಗಳ ಹಿಂದೆ, ಏಪ್ರಿಲ್‌ನಲ್ಲಿ, ದಕ್ಷಿಣ ಆಫ್ರಿಕಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಗೊಂಡಿದ್ದ ಆರು ವರ್ಷದ ಗಂಡು ಚೀತಾ ಉದಯ್  ಹೃದಯಾಘಾತದಿಂದ ಸಾವು ಕಂಡಿತ್ತು. ಮಾರ್ಚ್‌ 27 ರಂದು ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ನಮೀಬಿಯಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದ ಚೀತಾ 'ಸಾಶಾ' ಮೂತ್ರಪಿಂಡದ ಕಾಯಿಲೆಯಿಂದ ಸಾವು ಕಂಡಿತ್ತು. 'ಪ್ರಾಜೆಕ್ಟ್ ಚೀತಾ' ಅಡಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಸ್ಥಳಾಂತರಗೊಂಡ 20 ಚೀತಾಗಳಲ್ಲಿ ಇವೆರಡೂ ಸೇರಿದ್ದವು. ಎಲ್ಲಾ ಚೀತಾಗಳಿಗೆ ಭಾರತೀಯ ಹೆಸರುಗಳನ್ನು ನೀಡಿದ ಎರಡು ದಿನಗಳ ನಂತರ ಅದರ ಸಾವು ಸಂಭವಿಸಿದೆ.

ಇದನ್ನೂ ಓದಿ: ಅಯ್ಯೋ ಪಾಪ: ಮಧ್ಯ ಪ್ರದೇಶದ ಕುನೋ ಅರಣ್ಯದಲ್ಲಿ ಚೀತಾ ಉದಯ್‌ ಸಾವಿಗೆ ಹಾವು ಕಡಿತ ಕಾರಣ?

70 ವರ್ಷಗಳ ಹಿಂದೆ ದೇಶದಿಂದ ಸಂಪೂರ್ಣ ನಶಿಸಿ ಹೋಗಿದ್ದ ಚೀತಾದ ಪ್ರಭೇದವನ್ನು ಪುನರುಜ್ಜೀವನಗೊಳಿಸಿರುವ ಯೋಜನೆಯ ಆರಂಭಿಕ ಹಂತದ ಭಾಗವಾಗಿ ಕಳೆದ ಸೆಪ್ಟೆಂಬರ್‌ನಲ್ಲಿ 8 ಚೀತಾಗಳನ್ನು ನಮೀಬಿಯಾದಿಂದ ಕರೆತಂದಿದ್ದರೆ, ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇವುಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ಗೆ ಬಿಡಲಾಗಿತ್ತು. ಆದರೆ, ಈ ಚೀತಾಗಳ ಸಾವುಗಳು ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದ ಬಗ್ಗೆ ಕಳವಳವನ್ನುಂಟು ಮಾಡಿದೆ. ಆದರೆ, ಉಳಿದ ಚೀತಾಗಳು ಉತ್ತಮವಾಗಿದ್ದು ಆರೋಗ್ಯದಿಂದಿವೆ ಎಂದು ಸರ್ಕಾರವು ಹೇಳಿದೆ.

ಇದನ್ನೂ ಓದಿ: ಕಳೆದ ವರ್ಷ ನಮೀಬಿಯಾದಿಂದ ಬಂದಿದ್ದ 5 ವರ್ಷದ ಹೆಣ್ಣು ಚೀತಾ ಸಾವು!

"ಇತರ ಚಿರತೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ ಮತ್ತು ಅವುಗಳಲ್ಲಿ ಯಾವುದೂ ಯಾವುದೇ ರೀತಿಯ ರೋಗಲಕ್ಷಣಗಳನ್ನು ತೋರಿಸಿಲ್ಲ" ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. "ಉಳಿದ ಚೀತಾಗಳೆಲ್ಲವೂ ಸಂಪೂರ್ಣವಾಗಿ ಆರೋಗ್ಯವಂತವಾಗಿರುವಂತೆ ಕಾಣುತ್ತಿದೆ. ಬೇಟೆಗಳನ್ನೂ ಆಡುತ್ತಿದ್ದು, ಇತರ ನೈಸರ್ಗಿಕ ಬೆಳವಣಿಗೆಯನ್ನೂ ತೋರಿಸುತ್ತಿದೆ' ಎಂದು ಸರ್ಕಾರ ಹೇಳಿದೆ.

ಕೆಎನ್‌ಪಿ ಮೇಲ್ವಿಚಾರಣಾ ತಂಡ, ಇಂದು ಬೆಳಗ್ಗೆ ಗಾಯಗೊಂಡ ಸ್ಥಿತಿಯಲ್ಲಿ ದಕ್ಷಾ ಪತ್ತೆಯಾಗಿದೆ. ತಕ್ಷಣವೇ ಆಕೆಗೆ ಅಗತ್ಯ ಔಷಧೋಪಚಾರ ಮಾಡಿ ಚಿಕಿತ್ಸೆ ನೀಡಲಾಯಿತಾದರೂ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಆಕೆ ಮೃತಪಟ್ಟಿದ್ದಾಳೆ ಎಂದು ಕುನೋ ಪಾರ್ಕ್‌ನ ಅಧಿಕಾರಿ ತಿಳಿಸಿದ್ದಾರೆ. ದಕ್ಷಾಳನ್ನು ಕುನೋ ಆವರಣದ ನಂಬರ್‌ 1 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆಕೆಯೊಂದಿಗೆ ಸಂಭೋಗಕ್ಕಾಗಿ ವಾಯು ಹಾಗೂ ಅಗ್ನಿ ಚೀತಾಗಳನ್ನು ಬೋಮ-7 ಆವರಣದಿಂದ 1ನೇ ಆವರಣಕ್ಕೆ ಬಿಡುಗಡೆ ಮಾಡಲಾಗಿತ್ತು. ಆದರೆ, ಸಂಭೋಗದ ಪ್ರಕ್ರಿಯೆಯಲ್ಲಿ ಚೀತಾಗಳು ಹಿಂಸಾತ್ಮಕವಾಗಿ ವರ್ತಸಿದ್ದು ಕಂಡಿದೆ. ಇದು ಚೀತಾಗಳಲ್ಲಿ ಸಾಮಾನ್ಯವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios