Asianet Suvarna News Asianet Suvarna News

ಚಂದ್ರಯಾನ-ನಾಸಾ ಆರ್ಬಿಟರ್‌ ಡಿಕ್ಕಿ ತಪ್ಪಿಸಿದ ಇಸ್ರೋ!

*ಚಂದ್ರಯಾನ-ನಾಸಾ ಆರ್ಬಿಟರ್‌ ಡಿಕ್ಕಿ ವಿಷಯ ಮೊದಲೇ ಅರಿತ ಇಸ್ರೋ
*ಉಪಗ್ರಹಗಳು ಕಳೆದ ತಿಂಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು
*ಉಪಗ್ರಹಗಳ  ಢಿಕ್ಕಿ ಸಂಭವಿಸಿದ್ದರೆ  ಚಂದ್ರಯಾನ ಯೋಜನೆ ವಿಫಲ

Isro saves Chandrayaan 2 from colliding with Nasas Lunar Reconnaissance Orbiter mnj
Author
Bengaluru, First Published Nov 17, 2021, 9:38 AM IST
  • Facebook
  • Twitter
  • Whatsapp

ನವದೆಹಲಿ(ನ.17): ಇಸ್ರೋದ (ISRO) ಚಂದ್ರಯಾನ- 2 ಆರ್ಬಿಟರ್‌ (Chandrayan 2) ಮತ್ತು ನಾಸಾದ ಚಂದ್ರ ಸ್ಥಳಾನ್ವೇಷಣಾ ಆರ್ಬಿಟರ್‌ಗಳ (Nasa’s Lunar Reconnaissance) ಕಕ್ಷೆ ಸೇರುವ ಸ್ಥಳದಲ್ಲಿ ಎರಡು ಉಪಗ್ರಹಗಳು ಕಳೆದ ತಿಂಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಆದರೆ ಈ ವಿಷಯ ಮೊದಲೇ ಅರಿತ ಇಸ್ರೋ, ಚಂದ್ರಯಾನ ಆರ್ಬಿಟರ್‌ನ ಕಕ್ಷೆಯನ್ನು ಕೊಂಚ ಬದಲಿಸುವ ಮೂಲಕ ಅನಾಹುತವನ್ನು ತಪ್ಪಿಸಿದೆ. ಅ. 20ರಂದು ಚಂದ್ರನ ಉತ್ತರ ಧ್ರುವದ ಬಳಿ ಈ ಎರಡು ಉಪಗ್ರಹಗಳು ಸುಮಾರು 100 ಮೀ.ಗಳಷ್ಟುಸಮೀಪಕ್ಕೆ ಬರಲಿವೆ ಎಂದು ಅಂದಾಜಿಸಲಾಗಿತ್ತು. ಒಂದು ವೇಳೆ ಎರಡು ಉಪಗ್ರಹಗಳ ನಡುವೆ ಢಿಕ್ಕಿ ಸಂಭವಿಸಿದ್ದರೆ ಎರಡೂ ದೇಶಗಳ ಮಿಶನ್‌ ಚಂದ್ರಯಾನ ಯೋಜನೆ ವಿಫಲವಾಗುತ್ತಿತ್ತು. ಆದರೆ ಪಥ ಬದಲಿಸಿರುವ ಕಾರಣ ಇನ್ನು ಮುಂದೆ 2 ಆರ್ಬಿಟರ್‌ಗಳು ಸಮೀಪಕ್ಕೆ ಬರುವ ಭೀತಿ ಇಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಈ ಬಗ್ಗೆ ಸುಮಾರು ಒಂದು ತಿಂಗಳ ನಂತರ ಇಸ್ರೋ ಮಾಹಿತಿ ಬಿಡುಗೆಡೆ ಮಾಡಿದೆ.

ಎರಡು ಬಾಹ್ಯಾಕಾಶ ನೌಕೆಗಳ ನಡುವಿನ ಡಿಕ್ಕಿ ತಪ್ಪಿಸಲು ಅಕ್ಟೋಬರ್ 18 ರಂದು ರೇಡಿಯಲ್ ಬೇರ್ಪಡಿಕೆ ಸಾಧನನ್ನು ವಿನ್ಯಾಸಗೊಳಿಸಲಾಗಿತ್ತು (radial separation). ಚಂದ್ರಯಾನ-2 ಅದೇ ದಿನ ರಾತ್ರಿ 8:22 IST ಕ್ಕೆ ಇದನ್ನು ಕಾರ್ಯಗತಗೊಳಿಸಿತು, ಅದರ ನಂತರ ಇಂಜಿನಿಯರ್‌ಗಳು ಆರ್ಬಿಟರ್‌ನ ನಂತರದ ಟ್ರ್ಯಾಕಿಂಗ್ (Tracking) ಅನ್ನು ನಡೆಸಿದರು, ಹೊಸ ಕಕ್ಷೆಯೊಂದಿಗೆ ಮುಂದಿನ ದಿನಗಳಲ್ಲಿ LRO ನೊಂದಿಗೆ ಯಾವುದೇ ನಿಕಟ ಸಂಪರ್ಕಗಳು ಇರುವುದಿಲ್ಲ ಎಂದು ಮರುದೃಢೀಕರಿಸಿದರು. ಚಂದ್ರಯಾನ-2 ಮತ್ತು ನಾಸಾದ ಚಂದ್ರನ ಆರ್ಬಿಟರ್ ಎರಡೂ ಧ್ರುವೀಯ ಕಕ್ಷೆಯಲ್ಲಿ ಚಂದ್ರನ (Moon's Orbit) ಸುತ್ತಲೂ ಹೋಗುತ್ತವೆ ಆದ್ದರಿಂದ, ಎರಡೂ ಬಾಹ್ಯಾಕಾಶ ನೌಕೆಗಳು ಚಂದ್ರನ ಧ್ರುವಗಳ (Lunar poles) ಮೇಲೆ ಪರಸ್ಪರ ಹತ್ತಿರ ಬರುತ್ತವೆ.

Aerospace Technology| ಏರೋಸ್ಪೇಸ್‌ಗೆ ಬೆಂಗ್ಳೂರಲ್ಲಿ ವಿಫುಲ ಅವಕಾಶ: ಸಿಎಂ ಬೊಮ್ಮಾಯಿ

"ಬಾಹ್ಯಾಕಾಶ ಅವಶೇಷಗಳು ಮತ್ತು  ಬಾಹ್ಯಾಕಾಶ ನೌಕೆಗಳು ಸೇರಿದಂತೆ ಬಾಹ್ಯಾಕಾಶ ವಸ್ತುಗಳ ಕಾರಣದಿಂದಾಗಿ ಘರ್ಷಣೆಯ ಅಪಾಯವನ್ನು ತಗ್ಗಿಸಲು ಭೂ ಕಕ್ಷೆಯಲ್ಲಿರುವ ಉಪಗ್ರಹಗಳ ಘರ್ಷಣೆಯನ್ನು ತಪ್ಪಿಸುವ  ಪ್ರಕ್ರಿಯೆ ಸಾಮಾನ್ಯವಾಗಿದೆ. ಘರ್ಷಣೆಯ ಅಪಾಯ ಇದೆ ಎಂದು ತಿಳಿದಾಗಲೆಲ್ಲ ಇಸ್ರೋ  ಇಂಥಹ  ನಿಯಮಿತ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅದರ ಕಾರ್ಯಾಚರಣೆಯ ಉಪಗ್ರಹಗಳಿಗೆ CAM (collision avoidance manoeuvre) ಗಳನ್ನು ಕಾರ್ಯಗತಗೊಳಿಸುತ್ತದೆ. ಆದಾಗ್ಯೂ, ಇಸ್ರೋದ ಬಾಹ್ಯಾಕಾಶ ಪರಿಶೋಧನಾ ಕಾರ್ಯಾಚರಣೆಯಲ್ಲಿ ಇಂತಹ  ಡಿಕ್ಕಿಯಾಗುವ ಸಂದರ್ಭ ಅನುಭವಿಸಿದ್ದು ಇದೇ ಮೊದಲು, ಹಾಗಾಗಿ ಇಸ್ರೋ ತಕ್ಷಣ ಈ ಡಿಕ್ಕಿ ತಪ್ಪಿಸುವ ಕ್ರಮ ಕೈಗೊಂಡಿದೆ, ”ಎಂದು ಇಸ್ರೋ ಹೇಳಿದೆ

 ಕ್ರಾಶ್ ಲ್ಯಾಂಡಿಂಗ್ ನಂತರ ವಿಫಲವಾಗಿದ್ದ ಚಂದ್ರಯಾನ-2  ಮಿಷನ್ !

ಎರಡು ವರ್ಷಗಳ ಹಿಂದೆ  ಕ್ರಾಶ್ ಲ್ಯಾಂಡಿಂಗ್ ನಂತರ ಚಂದ್ರಯಾನ-2  ಮಿಷನ್ ವಿಫಲವಾದ ನಂತರವೂ,  ಆರ್ಬಿಟರ್ ಮಹತ್ವದ ಮಾಹಿತಿಯನ್ನು ಸಂಗ್ರಹಿಸುತ್ತಾ ಚಂದ್ರನನ್ನು ಸುತ್ತುತ್ತಿದೆ. ಆದಾಗ್ಯೂ, ಈ ಆರ್ಬಿಟರ್ ಭಾರತಕ್ಕೆ ಅತಿ ಪ್ರಮುಖ ಪಾತ್ರ ವಹಿಸಲಿದೆ.  ಏಕೆಂದರೆ ಇದನ್ನು ಚಂದ್ರಯಾನ -3 ಮಿಷನ್‌ನೊಂದಿಗೆ ಬಳಸಲಾಗುತ್ತದೆ. ಇಸ್ರೋ 2022 ರ ಮೂರನೇ ತ್ರೈಮಾಸಿಕದಲ್ಲಿ ಬಹು ನಿರೀಕ್ಷಿತ ಚಂದ್ರಯಾನ-3 ಮಿಷನ್ ಅನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಹೊಸ ಟೈಮ್‌ಲೈನ್  ಬಗ್ಗೆ ಈ ವರ್ಷದ ಆರಂಭದಲ್ಲಿ  ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ (Dr. Jitendra singh) ಅವರು ಮಾಹಿತಿ ನೀಡಿದ್ದರು. ಚಂದ್ರಯಾನ-3 ರ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದರು.

Follow Us:
Download App:
  • android
  • ios