ಒಡಿಶಾದ ಪಾರಾದ್ವೀಪ್‌ ಬಂದರಿನಲ್ಲಿ ಲಂಗರು ಹಾಕಿರುವ ಹಡಗೊಂದರಲ್ಲಿ ರಷ್ಯಾ ಮೂಲ ಮಿಲ್ಯಾಕೋವ್‌ ಸೆರ್ಗೇಯ್‌ (51) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಪಾರಾದ್ವೀಪ್‌: ಒಡಿಶಾದ ಪಾರಾದ್ವೀಪ್‌ ಬಂದರಿನಲ್ಲಿ ಲಂಗರು ಹಾಕಿರುವ ಹಡಗೊಂದರಲ್ಲಿ ರಷ್ಯಾ ಮೂಲ ಮಿಲ್ಯಾಕೋವ್‌ ಸೆರ್ಗೇಯ್‌ (51) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಡಗೊಂದರಲ್ಲಿ ಸಿಬ್ಬಂದಿಯಾಗಿರುವ ಮಿಲ್ಯಾಕೋವ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದರೂ, ಒಡಿಶಾದಲ್ಲಿ ಕಳೆದ 15 ದಿನಗಳಲ್ಲಿ ರಷ್ಯಾ ಮೂಲದ ವ್ಯಕ್ತಿಯ ಸಾವಿನ ಮೂರನೇ ಘಟನೆ ಇದಾಗಿರುವ ಕಾರಣ ಈ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿ.22ರಂದು ಒಡಿಶಾದ ರಾಯಗಡದ ಹೋಟೆಲ್‌ನಲ್ಲಿ 61 ವರ್ಷ ಪ್ರಾಯದ ರಷ್ಯಾದ (Russia) ವ್ಲಾಡಿಮಿರ್‌ ಬಿಡೆನೋವ್‌ (Vladimir Bidenov) ತಮ್ಮ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಡಿ.24ರಂದು ಅದೇ ಹೋಟೆಲ್‌ನಲ್ಲಿ ಸಂಸದ 65 ವರ್ಷದ ಪವೆಲ್‌ ಆ್ಯಂಟೋವ್‌ (Pavel Antov) ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಇಬ್ಬರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರ (Russian President Vladimir Putin) ಕಟು ವಿರೋಧಿಗಳಾಗಿದ್ದರು. ಹೀಗಾಗಿ ಅವರ ಸಾವಿನ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದವು. ಅದರ ಬೆನ್ನಲ್ಲೇ ಇದೀಗ ಮಿಲ್ಯಾಕೋವ್‌ ಸಾವನ್ನಪ್ಪಿರುವುದು ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿದೆ. ಮಿಲ್ಯಾಕೋವ್‌ಗೂ ಮತ್ತು ಇತ್ತೀಚೆಗೆ ಸಾವನ್ನಪ್ಪಿದ ಇಬ್ಬರಿಗೆ ಯಾವುದೇ ನಂಟಿರುವ ಕುರಿತು ಇದುವರೆಗೂ ಮಾಹಿತಿ ಹೊರಬಿದ್ದಿಲ್ಲ.

ರಷ್ಯಾ ಅಧ್ಯಕ್ಷರಿಗೆ ಅಂತೂ ಇಂತೂ ಬುದ್ಧಿ ಬಂತಾ..? ಯುದ್ಧ ಮುಗಿಸಲು ಬಯಸುತ್ತೇನೆ ಎಂದ ಪುಟಿನ್‌..!

Vladimir Putin: ಮೆಟ್ಟಿಲಿನಿಂದ ಜಾರಿಬಿದ್ದು ಮಲ ವಿಸರ್ಜನೆ ಮಾಡಿಕೊಂಡ ರಷ್ಯಾ ಅಧ್ಯಕ್ಷ..!