Asianet Suvarna News Asianet Suvarna News

Vladimir Putin: ಮೆಟ್ಟಿಲಿನಿಂದ ಜಾರಿಬಿದ್ದು ಮಲ ವಿಸರ್ಜನೆ ಮಾಡಿಕೊಂಡ ರಷ್ಯಾ ಅಧ್ಯಕ್ಷ..!

70 ವರ್ಷದ ಪುಟಿನ್ ಅವರು 5 ಮೆಟ್ಟಿಲು ಕೆಳಗೆ ಬಿದ್ದಿದ್ದು, ಇದರಿಂದ ಅವರ ಮೂಳೆಗೆ ಸಹ ಪೆಟ್ಟಾಗಿದ್ದು, ಈ ಕಾರಣದಿಂದ ಅವರು ಮಲ ವಿಸರ್ಜನೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. 

vladimir putin slipped on stairs at home led to involuntary defecation report ash
Author
First Published Dec 4, 2022, 10:23 PM IST

ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್‌ (Ukraine)  ಮೇಲೆ ಯುದ್ಧದ (War) ಕಾರಣದಿಂದ ಈ ವರ್ಷವಿಡೀ ಸುದ್ದಿಯಾಗಿದ್ದು, ಹೆಚ್ಚು ಕುಖ್ಯಾತರಾಗುತ್ತಿದ್ದಾರೆ. ಆದರೆ, ಈ ಯುದ್ಧದ ನಡುವೆಯೇ ಅವರ ಆರೋಗ್ಯವೂ ಹದಗೆಡುತ್ತಲೇ ಇದೆ ಎಂಬ ವರದಿಗಳೂ ಬರುತ್ತಿವೆ. ವ್ಲಾಡಿಮಿರ್ ಪುಟಿನ್ ಅವರು ಈ ವಾರ ರಷ್ಯಾ ರಾಜಧಾನಿ ಮಾಸ್ಕೋದ ತಮ್ಮ ಅಧಿಕೃತ ನಿವಾಸದಲ್ಲಿ ಕುಸಿದು ಬಿದ್ದಿದ್ದರು ಎಂದು ವರದಿಯಾಗಿತ್ತು. ಮೆಟ್ಟಿಲುಗಳಿಂದ ಕುಸಿದು ಬಿದ್ದ ನಂತರ ಅವರು ಮಲ ವಿಸರ್ಜನೆ ಮಾಡಿಕೊಂಡಿದ್ದಾರೆ (Involuntarily Defecate) ಎಂಬ ಮತ್ತೊಂದು ವರದಿ ಕೇಳಿಬಂದಿದೆ. ರಷ್ಯಾ ಅಧ್ಯಕ್ಷರ ಭದ್ರತಾ ತಂಡದ ಸಂಪರ್ಕ ಹೊಂದಿರುವ ಟೆಲಿಗ್ರಾಮ್‌ ಚಾನೆಲ್‌ (Telegram Channel) ಅನ್ನು ಉಲ್ಲೇಖಿಸಿ ಅಮೆರಿಕದ ನ್ಯೂಯಾರ್ಕ್ ಪೋಸ್ಟ್‌  (New York Post) ಈ ವರದಿ ಮಾಡಿದೆ. 

70 ವರ್ಷದ ಪುಟಿನ್ ಅವರು 5 ಮೆಟ್ಟಿಲು ಕೆಳಗೆ ಬಿದ್ದಿದ್ದು, ಇದರಿಂದ ಅವರ ಮೂಳೆಗೆ ಸಹ ಪೆಟ್ಟಾಗಿದೆ ಎಂದು ವರದಿ ತಿಳಿಸಿದೆ. ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿರುವ ರಷ್ಯಾ ಅದ್ಯಕ್ಷರು ಮೆಟ್ಟಿಲುಗಳಿಂದ ಕೆಳಕ್ಕೆ ಬಿದ್ದ ಕಾರಣದಿಂದ ಮಲವಿಸರ್ಜನೆ ಮಾಡಿಕೊಂಡರು ಎಂದು ಟೆಲಿಗ್ರಾಮ್‌ ಚಾನೆಲ್‌ ಹೇಳಿದೆ. ಅಲ್ಲದೆ, ಕ್ಯಾನ್ಸರ್‌ ಈಗ ಅವರ ಹೊಟ್ಟೆ ಹಾಗೂ ಕರುಳಿನ ಮೇಲೂ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. 

ಇದನ್ನು ಓದಿ: ಮನುಷ್ಯರನ್ನೇ ಕರಗಿಸುವ 'ಪೂರ್‌ ಮ್ಯಾನ್‌ ನ್ಯೂಕ್‌' ಬಾಂಬ್‌ ಅನ್ನು ಉಕ್ರೇನ್‌ನತ್ತ ಉಡಾಯಿಸಿದ ರಷ್ಯಾ?

ಕಳೆದ ತಿಂಗಳು ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ವ್ಲಾಡಿಮಿರ್‌ ಪುಟಿನ್‌  ಅವರ ಕೈಗಳು ಅಲುಗಾಡುತ್ತಿತ್ತು ಹಾಗೂ ನೇರಳೆ ಬಣ್ಣಕ್ಕೆ ತಿರುಗಿದ್ದವು ಎಂದು ಯುಕೆ ಮೂಲದ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಅಲ್ಲದೆ, ಕಾಳುಗಳನ್ನು ಚಲಿಸಲು ಸಹ ಅವರು ಕಷ್ಟಪಡುತ್ತಿದ್ದರು ಎಂದೂ ಯುಕೆ ಮೂಲದ ಮಾಧ್ಯಮ ವರದಿಯಲ್ಲಿ ತಿಳಿಸಿತ್ತು. 

ಈ ರೀತಿಯ ಉದಾಹರಣೆಗಳು ಹಾಗೂ ಘಟನೆಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಸುತ್ತ ಬೆಳೆಯುತ್ತಿರುವ ಊಹಾಪೋಹಗಳಿಗೆ ಹೊಸ ಸೇರ್ಪಡೆಯಾದಂತಾಗಿದೆ.  70 ವರ್ಷದ ಅಧ್ಯಕ್ಷರು "ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ" ಮತ್ತು ಇದು "ಉಕ್ರೇನ್‌ನಲ್ಲಿ ಏನಾಗುತ್ತಿದೆ ಎಂಬುದರ ಅಂಶ" ಎಂದು ಬ್ರಿಟಿಷ್‌ನ ಮಾಜಿ ಗೂಢಚಾರರು ಹೇಳಿದ್ದಾರೆ. ಈ ಮಧ್ಯೆ, ರಷ್ಯಾದ ಅಧ್ಯಕ್ಷರೊಂದಿಗೆ ನಿಕಟ ಸಂಬಂಧ ಹೊಂದಿರುವ ಖ್ಯಾತ ಉದ್ಯಮಿಯೊಬ್ಬರು ಸಹ ವ್ಲಾಡಿಮಿರ್‌ ಪುಟಿನ್‌ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದೂ ತಿಳಿಸಿದ್ದಾರೆ ಎಂದೂ ಅಂತಾರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ. 

ಇದನ್ನೂ ಓದಿ: ಯುದ್ಧ ಸ್ಥಗಿತಕ್ಕೆ ರಷ್ಯಾ-ಉಕ್ರೇನ್‌ ನಡುವೆ ಭಾರತ ಸಂಧಾನ?

ಅಂದ ಹಾಗೆ, ರಷ್ಯಾ ಅಧ್ಯಕ್ಷ ಪುಟಿನ್ ಅನಾರೋಗ್ಯದ ವರದಿಗಳು ಹೊರಬಿದ್ದಿರುವುದು ಇದೇ ಮೊದಲಲ್ಲ. 2014 ರಲ್ಲಿ ಸಹ ವ್ಲಾಡಿಮಿರ್‌ ಪುಟಿನ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದ್ದರು. ಆದರೆ, ಅಮೆರಿಕ ಮಾಧ್ಯಮ ವರದಿಗಳನ್ನು ಆ ವೇಳೆ ಪುಟಿನ್‌ ಅವರ ವಕ್ತಾರರು ಅಪಹಾಸ್ಯ ಮಾಡಿದ್ದರು ಮತ್ತು ಪತ್ರಕರ್ತರು ಅವರ ಬಲೆಯನ್ನು ಮುಚ್ಚಬೇಕು ಎಂದೂ ಹೇಳಿದ್ದರು. 

ಇನ್ನು, ಸುಮಾರು 10 ತಿಂಗಳುಗಳಿಂದ ಉಕ್ರೇನ್‌ ವಿರುದ್ಧ  ರಷ್ಯಾ "ವಿಶೇಷ ಸೇನಾ ಕಾರ್ಯಾಚರಣೆ" ನಡೆಸುತ್ತಿದ್ದು, ಇದನ್ನು ಆರಂಭಿಸಿದ್ದಕ್ಕೆ ತನಗೆ ಯಾವುದೇ ವಿಷಾದವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ: Russia vs Ukraine War: ರಷ್ಯಾ ಅಣುಬಾಂಬ್‌ ಬೆದರಿಕೆ ಯುದ್ಧ ತೀವ್ರಗೊಳಿಸಲಾ ಅಥವಾ ಅಂತ್ಯಕ್ಕಾ?

Follow Us:
Download App:
  • android
  • ios