Asianet Suvarna News Asianet Suvarna News

ಕೊರೋನಾ ಕಾಲದಲ್ಲೂ ಪುಟಿದೆದ್ದ ಭಾರತದ ಆರ್ಥಿಕತೆ : ರಾಜೀವ್ ಚಂದ್ರಶೇಖರ್‌ ಸಂತಸ‌!

*ಕೊರೋನಾ ಸಂಕಷ್ಟದ ಹೊರತಾಗಿ ದೇಶದಲ್ಲಿ ಆರ್ಥಿಕ ಅಭಿವೃದ್ಧಿ
‌*ಪ್ರಧಾನಿಗೆ ಧನ್ಯವಾದ ತಿಳಿಸಿದ ರಾಜೀವ್‌ ಚಂದ್ರಶೇಖರ್
*ಅಕ್ಟೋಬರ್‌ನಲ್ಲಿ 1.30 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ
*GST ಪರಿಚಯಿಸಿದ ನಂತರದ ಎರಡನೇ ಗರಿಷ್ಠ ಮೊತ್ತ!

strong Economic growth in spite of Corona Lock down is inspirational says Rajeev Chandrashekhar
Author
Bengaluru, First Published Nov 2, 2021, 10:57 AM IST

ನವದೆಹಲಿ (ನ. 2): ಕೊರೊನಾ ಕಾಲದಲ್ಲೂ ಭಾರತದ ಆರ್ಥಿಕ ಪ್ರಗತಿ ಮುಂದುವರೆದಿದೆ. 100 ಕೋಟಿ ಲಸಿಕೆ ಹಾಕುವುದರ ಮೂಲಕ ಸಾಧನೆಗೈದಿದ್ದ ಭಾರತ ಈಗ ಅಕ್ಟೋಬರ್‌ ತಿಂಗಳಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿದೆ. ಈ ಬಗ್ಗೆ ಟ್ವೀಟ್‌ (Tweet) ಮಾಡಿರುವ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev Chandrashehkar) ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಕೊರೊನಾ ಸಂಕಷ್ಟದ ಹೊರತಾಗಿಯೂ ಈ ಸಾಧನೆ ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ಅವರು ಹೇಳಿದ್ದಾರೆ.

ದೀಪಾವಳಿ ಬಳಿಕ ಸೋಂಕು ಸ್ಫೋಟ : ತಜ್ಞರ ಎಚ್ಚರಿಕೆ

ಅಕ್ಟೋಬರ್‌ನಲ್ಲಿ 1.30 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹವಾಗಿದೆ. ಅಕ್ಟೋಬರ್ 2021 ರಲ್ಲಿ ಒಟ್ಟು GST ಆದಾಯವು ₹1.3 ಲಕ್ಷ ಕೋಟಿ ರೂಪಾಯಿ ಮೀರಿದೆ. ಅಕ್ಟೋಬರ್‌ನ  ಆದಾಯವು ಸರಕು ಮತ್ತು ಸೇವಾ ತೆರಿಗೆಯನ್ನು (Goods and Service Tax) ಪರಿಚಯಿಸಿದ ನಂತರದ ಎರಡನೇ ಗರಿಷ್ಠ ಮೊತ್ತವಾಗಿದೆ. ಏಪ್ರಿಲ್ 2021 ರಲ್ಲಿ ಗರಿಷ್ಠ ತೆರಿಗೆ ಸಂಗ್ರಹವಾಗಿತ್ತು. ಅಕ್ಟೋಬರ್ 2021 ರ ಆದಾಯವು ಕಳೆದ ವರ್ಷದ ಇದೇ ತಿಂಗಳ GST ಆದಾಯಕ್ಕಿಂತ 24% ಹೆಚ್ಚಾಗಿದೆ.

ಸಮರ್ಥ ಮತ್ತು ಬದ್ಧ ನಾಯಕತ್ವದಿಂದ ಆರ್ಥಿಕ ಅಭಿವೃದ್ದಿ!

 "ಕೊರೊನಾ ಲಿಸಿಕೆ (Corona Vaccine) ನೀಡುವಿಕೆಯಲ್ಲಿ ಸಾಧನೆಗೈದಿದ್ದ ನರೇಂದ್ರ ಮೋದಿ ಸರ್ಕಾರ ಈಗ ಭಾರತದ ಆರ್ಥಿಕತೆಯಲ್ಲಿ (Economy) ಅತ್ಯಂತ ಹೆಚ್ಚಿನ ಪ್ರಗತಿ ಸಾಧಿಸುವ ಮೂಲಕ ಇನ್ನೊಂದು ಸ್ಪೂರ್ತಿದಾಯಕ ಸಾಧನೆಗೈದಿದೆ. ಅತ್ಯಂತ ಕಠಿಣ ಆದರೆ ಅಗತ್ಯವಾಗಿದ್ದ ಲಾಕ್‌ಡೌನ್  ನಂತರ 2021ರ ಅಕ್ಟೋಬರ್ ತಿಂಗಳಿನಲ್ಲಿ  ಹೂಡಿಕೆಗಳು ಮತ್ತು ಬೆಳವಣಿಗೆಯಲ್ಲಿ ಪ್ರಗತಿ ಕಷ್ಟವಾಗಿತ್ತು  - ಆದರೆ ಪ್ರಧಾನಿಯವರ ಸಮರ್ಥ ಮತ್ತು ಬದ್ಧ ನಾಯಕತ್ವದಿಂದ ಇದು ಸಾಧ್ಯವಾಗಿದೆ, ಅವರಿಗೆ  ಧನ್ಯವಾದಗಳು" ಎಂದು ರಾಜೀವ್‌ ಚಂದ್ರಶೇಖರ್‌ ಟ್ವೀಟ್‌ ಮಾಡಿದ್ದಾರೆ.

 

 

ಅಕ್ಟೋಬರ್‌ನಲ್ಲಿ 1,30,127 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದ್ದು, ಇದರಲ್ಲಿ ಕೇಂದ್ರದ ತೆರಿಗೆ ( ಸಿಜಿಎಸ್‌ಟಿ - CGST) 23,861 ಕೋಟಿ ರೂ., ರಾಜ್ಯಗಳ ತೆರಿಗೆ (ಎಸ್‌ಜಿಎಸ್‌ಟಿ - SGST) 30,421 ಕೋಟಿ ರೂ, ಅಂತಾರಾಜ್ಯ ತೆರಿಗೆ  (ಐಜಿಎಸ್‌ಟಿ - IGST) ₹67,361 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹32,998 ಕೋಟಿ ಸೇರಿದಂತೆ) ಮತ್ತು ಸೆಸ್  (Cess)₹8,484 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹವಾದ 699 ಕೋಟಿ ಸೇರಿ) ಸಂಗ್ರಹವಾಗಿದೆ.

ಇ-ವೇ ಬಿಲ್‌ಗಳ ದಾಖಲೆಯ ಪ್ರಗತಿ!

“ಇದು ಆರ್ಥಿಕ ಚೇತರಿಕೆಯ ಪ್ರಗತಿಗೆ ಅನುಗುಣವಾಗಿರುತ್ತದೆ. ಕೊರೊನಾ ಎರಡನೇ ಅಲೆಯ ನಂತರ ಪ್ರತಿ ತಿಂಗಳು ದಾಖಲಾಗಿರುವ ಇ-ವೇ ಬಿಲ್‌ಗಳ ಪ್ರಗತಿಯಿಂದಲೂ ಇದು ಸ್ಪಷ್ಟವಾಗಿದೆ. ಸೆಮಿ ಕಂಡಕ್ಟರ್‌ಗಳ ಪೂರೈಕೆಯಲ್ಲಿನ ಅಡಚಣೆಯಿಂದಾಗಿ ಕಾರುಗಳು ಮತ್ತು ಇತರ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರದಿದ್ದರೆ ಆದಾಯವು ಇನ್ನೂ ಹೆಚ್ಚಿರುತ್ತಿತ್ತು" ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್‌ ಬಳಿಕ ಸಹ ಜಸ್ಥಿತಿಗೆ ಜನರ ಸಂಚಾರ - ಬದುಕು

ಸರ್ಕಾರವು ಎಂದಿನಂತೆ ಐಜಿಎಸ್‌ಟಿಯಿಂದ, ಸಿಜಿಎಸ್‌ಟಿಗೆ 27,310 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿಗೆ 22,394 ಕೋಟಿ ರೂ. ಪಾವತಿ ಮಾಡಿದೆ. ಅಕ್ಟೋಬರ್ 2021 ರಲ್ಲಿ ಎಲ್ಲ ಪಾವತಿಗಳ ನಂತರ  ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು   51,171 ಕೋಟಿ ರೂ. CGST ಹಾಗೂ   52,815 ಕೋಟಿ ರೂ. SGST ಆಗಿದೆ.

ರಾಜ್ಯಗಳಿಗೆ GST ಪರಿಹಾರ ಬದಲು 44,000 ಕೋಟಿ ರೂ ಸಮಾನಾಂತರ ಸಾಲದ ಬಾಕಿ ಮೊತ್ತ ಬಿಡುಗಡೆ!

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ  ಈ ತಿಂಗಳಿನಲ್ಲಿ, ಸರಕುಗಳ ಆಮದು (Import of Goods) ಆದಾಯವು 39% ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (Domestic Transactions) (ಸೇವೆಗಳ ಆಮದು ಸೇರಿದಂತೆ) ಆದಾಯವು  19% ಹೆಚ್ಚಾಗಿದೆ. ಅಕ್ಟೋಬರ್‌ನಲ್ಲಿ ಸಾಲುಸಾಲು ಹಬ್ಬಗಳ ಸೀಸನ್‌ ಆರಂಭವಾಗಿದ್ದರಿಂದ ವ್ಯಾಪಾರ,ವಹಿವಾಟು ಹಾಗೂ ಉದ್ಯಮಗಳಲ್ಲಿ ಉತ್ತಮ ಪ್ರಗತಿಯಿಂದ ಅತಿ ಹೆಚ್ಚು ತೆರಿಗೆ ಸಂಗ್ರವಾಗಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios