ಕೋವಿಡ್ ಬಳಿಕ ಸಹ ಜಸ್ಥಿತಿಗೆ ಜನರ ಸಂಚಾರ - ಬದುಕು
- ಕೋವಿಡ್ ಬಳಿಕ ಸಹ ಜಸ್ಥಿತಿಗೆ ಜನರ ಸಂಚಾರ - ಬದುಕು
- ದಾಖಲೆ ಟೋಲ್ ಸಂಗ್ರಹ, ವಿಮಾನಗಳಲ್ಲಿ ಲಕ್ಷಾಂತರ ಜನ ಓಡಾಟ, ಯಾತ್ರೆಗೆ ಲಕ್ಷ ಲಕ್ಷ ಪ್ರವಾಸಿಗರು
- 122 ಕೋಟಿ ರು.: ಶನಿವಾರ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ನಿಂದ ದಾಖಲೆ ಮೊತ್ತ ಸಂಗ್ರಹ
- 3.38 ಲಕ್ಷ: ಶನಿವಾರ ದೇಶಾದ್ಯಂತ ವಿಮಾನದಲ್ಲಿ ಪ್ರಯಾಣಿಸಿದವರು. ಕೋವಿಡ್ ಬಳಿಕ ಅತ್ಯಧಿಕ
- 4 ಲಕ್ಷ: ಎರಡು ತಿಂಗಳ ಅವಧಿಯಲ್ಲಿ ಚಾರ್‌ಧಾಮ ಯಾತ್ರೆ ಕೈಗೊಂಡ ಪ್ರವಾಸಿಗರು
ನವದೆಹಲಿ (ನ.02): ಕೋವಿಡ್ (Covid) ಮೊದಲ ಹಾಗೂ ಎರಡನೇ ಅಲೆಯ ಹೊಡೆತದಿಂದ ಮಂಕಾಗಿದ್ದ ಪ್ರವಾಸೋದ್ಯಮ (Tourism), ರಸ್ತೆ (Road) ಹಾಗೂ ವಿಮಾನ ಸಂಚಾರ (Flught) ಈಗ ಸಹಜ ಸ್ಥಿತಿಗೆ ಮರಳಿದೆ. ಮೂರೂ ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲೆ ಪ್ರಮಾಣದ ಚಟುವಟಿಕೆ ಹಾಗೂ ವಹಿವಾಟು ನಡೆದಿರುವುದೇ ಬಹುತೇಕ ಎಲ್ಲ ವಲಯಗಳ ಚೇತರಿಕೆ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.
ಅಕ್ಟೋಬರ್ ಒಂದೇ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ 3356 ಕೋಟಿ ರು. ಟೋಲ್ (Toll) ಶುಲ್ಕವನ್ನು ಫಾಸ್ಟ್ಯಾಗ್ ಮೂಲಕ ಸಂಗ್ರಹವಾಗಿದೆ. ಶನಿವಾರ ಸಾರ್ವಕಾಲಿಕ ದಾಖಲೆಯ 122.81 ಕೋಟಿ ರು. ಫಾಸ್ಟ್ಯಾಗ್‌ನಿಂದ (Fastag) ಸಂಗ್ರಹವಾಗಿದೆ.
ಕರ್ನಾಟಕದಲ್ಲಿ ಕೊರೋನಾ: ಕಳೆದ 17 ತಿಂಗಳಲ್ಲಿ ದಾಖಲಾದ ಕನಿಷ್ಠ ಪ್ರಕರಣ
ಶನಿವಾರ ದೇಶಾದ್ಯಂತ 2500ಕ್ಕೂ ಹೆಚ್ಚು ವಿಮಾನಗಳಲ್ಲಿ 3.38 ಲಕ್ಷ ಜನರು ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಬೆಳೆಸಿದ್ದಾರೆ. ಇದು ಕೋವಿಡ್ (Covid) 2ನೇ ಅಲೆ ಆರಂಭದ ನಂತರ ದಾಖಲೆಯ ಸಂಚಾರ. ಇನ್ನು ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ 4 ಲಕ್ಷ ಯಾತ್ರಿಕರು ಚಾರ್‌ಧಾಮ (Chardham) ಯಾತ್ರೆ ಕೈಗೊಂಡಿದ್ದು, ಕೂಡ ಪ್ರವಾಸೋದ್ಯಮ ದೃಷ್ಟಿಯಿಂದ ಗಮನಾರ್ಹ ಬೆಳವಣಿಗೆ.
ದಾಖಲೆಯ ಟೋಲ್ ಸಂಗ್ರಹ:
ಹಬ್ಬಗಳು (Festival) ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಅಕ್ಟೋಬರ್ ತಿಂಗಳೊಂದರಲ್ಲೇ ಆನ್‌ಲೈನ್ ಟೋಲ್ (Online Toll) ಶುಲ್ಕ ಸಂಗ್ರಹ ವ್ಯವಸ್ಥೆ ಆಗಿರುವ ಫಾಸ್ಟ್ಯಾಗ್‌ನಲ್ಲಿ ದಾಖಲೆಯ 21.42 ಕೋಟಿ ವಹಿವಾಟುಗಳು ನಡೆದಿದೆ. ಇದರೊಂದಿಗೆ ಸರ್ಕಾರಕ್ಕೆ ಈವರೆಗಿನ ಸಾರ್ವಕಾಲಿಕ ದಾಖಲೆಯ 3356 ಕೋಟಿ ರು. ಒಂದೇ ತಿಂಗಳಲ್ಲಿ ಸಂಗ್ರಹವಾಗಿದೆ. ಅಲ್ಲದೆ ಕಳೆದ ಶನಿವಾರ ಒಂದೇ ದಿನ 122.81 ಕೋಟಿ ರು. ಫಾಸ್ಟ್ಯಾಗ್‌ನಿಂದ ಸಂಗ್ರಹವಾಗಿದೆ ಎಂದು ಸರ್ಕಾರ (Govt) ಹೇಳಿದೆ.
ಯುಎಸ್‌ಎ ಮತ್ತು ಯುರೋಪ್‌ನಲ್ಲಿ ಕೊರೋನಾ ಏಕಾಏಕಿ ಏರಿಕೆ, ಭಾರತಕ್ಕೂ ಆತಂಕ
3.38 ಲಕ್ಷ ಜನರ ವಿಮಾನ ಪ್ರಯಾಣ:
ಕಳೆದ ಶನಿವಾರ ದೇಶಾದ್ಯಂತ 2500ಕ್ಕೂ ಹೆಚ್ಚು ವಿಮಾನಗಳಲ್ಲಿ 3.38 ಲಕ್ಷ ಜನರು ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಬೆಳೆಸಿದ್ದಾರೆ. ಇದು ಕೋವಿಡ್ ಪೂರ್ವ ಸಮಯವಾದ 2020ರ ಮಾರ್ಚ್ ಬಳಿಕದ ಗರಿಷ್ಠ ಪ್ರಮಾಣ ಎಂಬುದು ವಿಶೇಷ. 2021ರ ಮಾಚ್‌ರ್‍ನಲ್ಲೂ ಒಮ್ಮೆ ದೈನಂದಿನ ಪ್ರಯಾಣಿಕರ ಸಂಖ್ಯೆ 3 ಲಕ್ಷ ದಾಟಿತ್ತು. ಆದರೆ ಬಳಿಕ ಕೋವಿಡ್ 2ನೇ ಅಲೆ ಕಾರಣ ಪ್ರಯಾಣಿಕರ ಸಂಖ್ಯೆ ದಿಢೀರ್ ಇಳಿಕೆಯಾಗಿತ್ತು.
ಚಾರ್ ಧಾಮಕ್ಕೆ 4 ಲಕ್ಷ ಜನ: ಸೆ.18ರಿಂದ ಅ.31ರ ಅವಧಿಯಲ್ಲಿ ಸುಮಾರು 4 ಲಕ್ಷ ಜನರು ಚಾರ್‌ಧಾಮ್ ತೀರ್ಥಕೇತ್ರಗಳಿಗೆ ಭೇಟಿ ನೀಡಿದ್ದಾರೆ ಎಂದು ಚಾರ್‌ಧಾಮ್ ದೇವಸ್ಥಾನ ಮಂಡಳಿ ಹೇಳಿದೆ. ಸುಮಾರು 2.2 ಲಕ್ಷ ಜನ ಕೇದಾರನಾಥಕ್ಕೆ, 1.2 ಲಕ್ಷ ಬದರೀನಾಥಕ್ಕೆ, 32 ಸಾವಿರ ಜನ ಯಮುನೋತ್ರಿ ಮತ್ತು ಗಂಗೋತ್ರಿಗೆ ಭೇಟಿ ನೀಡಿದ್ದಾರೆ. ಇದು ಕೋವಿಡ್ ನಂತರ ಪ್ರವಾಸೋದ್ಯಮ ಸಹಜ ಸ್ಥಿತಿಗೆ ಮರಳುವ ಸಂಕೇತ ಎಂದು ವಿಶ್ಲೇಷಿಸಲಾಗಿದೆ.
- ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಹೊಡೆತದಿಂದ ಮಂಕಾಗಿದ್ದ ಪ್ರವಾಸೋದ್ಯಮ, ರಸ್ತೆ ಹಾಗೂ ವಿಮಾನ ಸಂಚಾರ ಈಗ ಸಹಜ ಸ್ಥಿತಿಗೆ
- ಮೂರೂ ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲೆ ಪ್ರಮಾಣದ ಚಟುವಟಿಕೆ ಹಾಗೂ ವಹಿವಾಟು
- ಅಕ್ಟೋಬರ್ ಒಂದೇ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ 3356 ಕೋಟಿ ರು. ಟೋಲ್ ಶುಲ್ಕವನ್ನು ಫಾಸ್ಟ್ಯಾಗ್ ಮೂಲಕ ಸಂಗ್ರಹ
- ಶನಿವಾರ ಸಾರ್ವಕಾಲಿಕ ದಾಖಲೆಯ 122.81 ಕೋಟಿ ರು. ಫಾಸ್ಟ್ಯಾಗ್‌ನಿಂದ ಸಂಗ್ರಹ
- ಶನಿವಾರ ದೇಶಾದ್ಯಂತ 2500ಕ್ಕೂ ಹೆಚ್ಚು ವಿಮಾನಗಳಲ್ಲಿ 3.38 ಲಕ್ಷ ಜನರು ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ
- ಹಬ್ಬಗಳು ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಅಕ್ಟೋಬರ್ ತಿಂಗಳೊಂದರಲ್ಲೇ ಆನ್‌ಲೈನ್ ಟೋಲ್ ಶುಲ್ಕ ಸಂಗ್ರಹ ವ್ಯವಸ್ಥೆ