ಕೇರಳದಲ್ಲಿ ಎಡರಂಗ ಪರವಾಗಿರುವ ಮಾಜಿ ಜಡ್ಜ್ ಸುದೀಪ್ ಎಂಬುವವರು ಏಷ್ಯಾನೆಟ್ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ಅವರ ವಿರುದ್ಧ  ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದು,  ಅವರ ಪೋಸ್ಟ್ ವಿರುದ್ಧ ಈಗ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿರುವನಂತಪುರ: ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರವೂ ಪತ್ರಕರ್ತರನ್ನು ಟಾರ್ಗೆಟ್ ಮಾಡುವುದನ್ನು ಮುಂದುವರಿಸಿದೆ. ಈಗ ಎಡರಂಗ ಪರವಾಗಿರುವ ಮಾಜಿ ಜಡ್ಜ್ ಸುದೀಪ್ ಎಂಬುವವರು ಏಷ್ಯಾನೆಟ್ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದು, ಅವರ ಪೋಸ್ಟ್ ವಿರುದ್ಧ ಈಗ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಹಲವು ತಪ್ಪು ನಿರ್ಧಾರಗಳನ್ನು ವರದಿ ಮಾಡಿ ಕೇರಳ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ಅವರ ವಿರುದ್ಧ ಎಡರಂಗ ಬೆಂಬಲಿತ ಮಾಜಿ ಜಡ್ಜ್ ಫೇಸ್‌ಬುಕ್‌ನಲ್ಲಿ ತಮ್ಮ ಘನತೆಯ ಬಗ್ಗೆಯೂ ಯೋಚಿಸದೇ ಕೆಟ್ಟದಾದ ಬರಹ ಬರೆದಿದ್ದಾರೆ. 

ಮಾಜಿ ಜಡ್ಜ್‌ವೋರ್ವರ ಈ ಕೃತ್ಯವನ್ನು ಏಷ್ಯಾನೆಟ್ ನ್ಯೂಸ್ ಕೂಡ ತೀವ್ರವಾಗಿ ಖಂಡಿಸಿದೆ. ಕೇರಳ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ಮತ್ತು ಇತರ ಪತ್ರಕರ್ತರನ್ನು ಏಷ್ಯಾನೆಟ್ ನ್ಯೂಸ್ ದೃಢವಾಗಿ ಬೆಂಬಲಿಸುತ್ತದೆ. ಯಾವುದೇ ಬೆದರಿಕೆ ಅಥವಾ ನಮ್ಮನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಗಳ ಹೊರತಾಗಿಯೂ, ನಾವು ಸುಮ್ಮನಿರುವುದಿಲ್ಲ ನಾವು ಪತ್ರಿಕೋದ್ಯಮವನ್ನು ನೇರ ದಿಟ್ಟ ನಿರಂತವಾಗಿರಲು ಧೃಡವಾದ ಬದ್ಧತೆಯೊಂದಿಗೆ ಕೆಲಸ ಮುಂದುವರೆಸುತ್ತೇವೆ ಎಂದು ಏಷ್ಯಾನೆಟ್ ಮಲೆಯಾಳಂ ನ್ಯೂಸ್ ಹೇಳಿದೆ. 

ಪತ್ರಕರ್ತರಂದ್ರೆ ರಾಜ್ಯದ ಈ ರಾಜಕಾರಣಿಗೆ ಭಯ, ಕೇರಳದಲ್ಲಿ ಆಪರೇಷನ್ ಶಕ್ತಿಗೆ ಥರಗುಟ್ಟಿದ ಎಡಪಕ್ಷ!

ಕೇರಳದ ಎಡರಂಗಪರ ಸಹಾನುಭೂತಿ ಹೊಂದಿರುವ ಮಾಜಿ ಜಡ್ಜ್ ಸುದೀಪ್ ಬರಹಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೂ ಸಹ ಅವರು ತಮ್ಮ ಈ ಚಾಳಿಯನ್ನು ಮುಂದುವರೆಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರವು ದೇಶದ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮುಖ್ಯವಾಹಿನಿ ಮತ್ತು ಆನ್‌ಲೈನ್ ಮಾಧ್ಯಮಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈ ಸಂದರ್ಭದಲ್ಲಿ ನ್ಯಾಯದ ಸ್ಥಾನದಲ್ಲಿರಬೇಕಾದ ನ್ಯಾಯಾಧೀಶರು ಸರ್ಕಾರದ ಪರ ವಹಿಸಿಕೊಂಡು ಅಶ್ಲೀಲ ಪೋಸ್ಟ್ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಏಷ್ಯಾನೆಟ್ ಎಡಿಟರ್ ಸಿಂಧು ಸೂರ್ಯಕುಮಾರ್ ಸೇರಿದಂತೆ ಅನೇಕ ಪತ್ರಕರ್ತರನ್ನು ಕೇಳರ ಸರ್ಕಾರ ಭೇಟೆಯಾಡಲು ನೋಡುತ್ತಿದ್ದು, ಅದರ ಭಾಗವೇ ಈ ಅಶ್ಲೀಲ ಬರಹ, ನಿವೃತ್ತ ಜಡ್ಜ್ ಮೂಲಕ ಪತ್ರಕರ್ತರ ವಿರುದ್ಧ ಫೇಸ್‌ಬುಕ್‌ನಲ್ಲಿ ಬರಹ ಬರೆಸಿ ವೈಯಕ್ತಿಕ ತೇಜೋವಧೆಗೆ ಕೇರಳ ಸರ್ಕಾರ ಮುಂದಾಗಿದೆ. ಆದರೆ ಇದ್ಯಾವುದಕ್ಕೂ ಏಷ್ಯಾನೆಟ್ ಆಡಳಿತ ಮಂಡಳಿ ತಲೆಕೆಡಿಸಿಕೊಳ್ಳದೇ ತಮ್ಮ ನೇರ ನೆಟ್ಟ ನಿರಂತರ ವರದಿಗೆ ಬದ್ಧವಾಗಿದೆ. ಹಾಗೂ ಹೀಗೆ ಸರ್ಕಾರದ ಟಾರ್ಗೆಟ್‌ಗೆ ಒಳಗಾಗಿರುವ ಪತ್ರಕರ್ತರು ಹಾಗೂ ಏಷ್ಯಾನೆಟ್ ವರದಿಗಾರರ ಪರ ಆಡಳಿತ ಮಂಡಳಿ ಇದೆ. 

ಏಷ್ಯಾನೆಟ್‌ ನ್ಯೂಸ್‌ ಪತ್ರಕರ್ತರ ಮೇಲಿನ ಕೇಸ್‌ ವಾಪಾಸ್‌ ತೆಗೆದುಕೊಳ್ಳಿ, ಕೇರಳ ಸರ್ಕಾರಕ್ಕೆ ಬುದ್ಧಿಜೀವಿಗಳ ಪತ್ರ

 ಈ ಹಿಂದೆ ಹಿಂದೂ ತೀರ್ಕ್ಷೇತ್ರ ಶಬರಿಮಲೆಯ ಕುರಿತು ತಮ್ಮ ಪೋಸ್ಟ್‌ಗಳಿಗೆ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದ ನಂತರ ಈ ಜಡ್ಜ್‌ 2021ರಲ್ಲಿ ತಮ್ಮ ಜಡ್ಜ್‌ ಹುದ್ದೆ ಸುದೀಪ್ ರಾಜೀನಾಮೆ ನೀಡಿದ್ದರು. ಏಷ್ಯಾನೆಟ್ ಸಬ್ ಎಡಿಟರ್ ಸಿಂಧೂ ಸೂರ್ಯಕುಮಾರ್ ಅವರು, ತಮ್ಮ ಕವರ್‌ ಸ್ಟೋರಿಗಳ ಮೂಲಕ ಕೇರಳದಲ್ಲಿ ಅಧಿಕಾರದಲ್ಲಿರುವ ಪಿಣರಾಯಿ ಸರ್ಕಾರದ ತಪ್ಪುಗಳನ್ನು ಜನರ ಮುಂದಿಡಲು ಶುರು ಮಾಡಿದ್ದರು. ಈ ಕವರ್ ಸ್ಟೋರಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಪ್ಪು ನಡೆಗಳ ವಿರುದ್ಧ ತೀಕ್ಷ್ಣವಾದ ಟೀಕೆ ಮತ್ತು ನೇರ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದೆ. ಈ ಕವರ್ ಸ್ಟೋರಿ ವಿರುದ್ಧ ಈಗ ಸುದೀಪ್ ಅಶ್ಲೀಲವಾಗಿ ಬರೆದಿದ್ದಲ್ಲೇ ಈ ಕಾರ್ಯಕ್ರಮ ಮಾಡುವ ಸಬ್ ಎಡಿಟರ್ ಸಿಂಧು ಸೂರ್ಯಕುಮಾರ್ ವಿರುದ್ಧ ಫೇಸ್‌ಬುಕ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.