ಕೇರಳದ ಕಾಸರಗೋಡು ಸಮೀಪದ ಕಲನಾಡವು ರೈಲ್ವೆ ಸುರಂಗ ಮಾರ್ಗದೊಳಗೆ ರೈಲ್ವೆ ಟ್ರ್ಯಾಕ್‌ನಲ್ಲಿ  ಕೆಂಪು ಕಲ್ಲುಗಳ ಹಾಗೂ ವೆಸ್ಟರ್ನ್‌ ಕಮೋಡ್ ಪತ್ತೆಯಾಗಿದ್ದು, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತ ಎಂಬ ಶಂಕೆ ಮೂಡಿದೆ.

ಕಾಸರಗೋಡು: ಕೇರಳದ ಕಾಸರಗೋಡು ಸಮೀಪದ ಕಲನಾಡವು ರೈಲ್ವೆ ಸುರಂಗ ಮಾರ್ಗದೊಳಗೆ ರೈಲ್ವೆ ಟ್ರ್ಯಾಕ್‌ನಲ್ಲಿ ಕೆಂಪು ಕಲ್ಲುಗಳ ಹಾಗೂ ವೆಸ್ಟರ್ನ್‌ ಕಮೋಡ್ ಪತ್ತೆಯಾಗಿದ್ದು, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತ ಎಂಬ ಶಂಕೆ ಮೂಡಿದೆ. ರೈಲು ಹಳಿ ತಪ್ಪಿಸುವುದಕ್ಕಾಗಿ ಈ ಕೆಂಪು ಕಲ್ಲುಗಳು ಹಾಗೂ ವೆಸ್ಟರ್ನ್ ಕಮೋಡ್‌ಗಳನ್ನು ಇಡಲಾಗಿತ್ತ ಎಂಬ ಅನುಮಾನ ಮೂಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. 

ಕಲನಾಡವು ರೈಲ್ವೆ ಸುರಂಗ ಮಾರ್ಗದಿಂದ 200 ಮೀಟರ್ ದೂರದಲ್ಲಿ ರೈಲ್ವೆ ಟ್ರಾಕ್‌ನಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಂಗಳೂರಿನಿಂದ ಕೊಯಂಬತ್ತೂರಿಗೆ ಹೋಗುತ್ತಿದ್ದ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ ಟ್ರ್ಯಾಕ್‌ನಲ್ಲಿರುವ ಈ ವಸ್ತುಗಳನ್ನು ಗಮನಿಸಿದ್ದು, ಈ ವಿಚಾರವನ್ನು ಕಾಸರಗೋಡು ರೈಲ್ವೆ ಸ್ಟೇಷನ್ ಮಾಸ್ಟರ್‌ಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಟೇಷನ್ ಮಾಸ್ಟರ್ ಈ ವಿಚಾರವನ್ನು ಎಸ್‌ಪಿ ವೈಭವ್ ಸಕ್ಸೇನಾ ಅವರಿಗೆ ತಿಳಿಸಿದ್ದಾರೆ. 

ರೈಲು ಹಳಿ ಮೇಲೆ ಟೈರ್‌ ಇಟ್ಟ ಕಿಡಿಗೇಡಿಗಳು: ತಮಿಳುನಾಡಲ್ಲಿ ತಪ್ಪಿದ ಮತ್ತೊಂದು ಭೀಕರ ರೈಲು ದುರಂತ!

ನಂತರ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ರೈಲ್ವೆ ಟ್ರಾಕ್‌ನಲ್ಲಿದ್ದ ಕಲ್ಲುಗಳು ಹಾಗೂ ವೆಸ್ಟರ್ನ್ ಟಾಯ್ಲೆಟ್ ಬೆಸಿನ್ ಅನ್ನು ತೆರವು ಮಾಡಿದ್ದಾರೆ. ಬೇಕಲ್ ಡಿವೈಎಸ್‌ಪಿ ಸಿ.ಕೆ. ಸುನೀಲ್ ಕುಮಾರ್, ಮೆಲಪರಂಬ ಪೊಲೀಸ್ ಇನ್ಸ್‌ಪೆಕ್ಟರ್ ಉತ್ತಮ್ದಾಸ್, ಎಸ್‌ಐ ಅನೂಪ್, ಆರ್‌ಪಿಎಫ್ ಎಸ್ಐ ಬಿನೋಯ್ ಕುರಿಯನ್ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರೈಲ್ವೆ ಹಳಿಯಲ್ಲೇ ತರಕಾರಿ ಮಾರ್ಕೆಟ್ : ವೈರಲ್ ವಿಡಿಯೋ