ಪುದುಚೇರಿಯಲ್ಲಿ ಎನ್‌ಡಿಎ ಮತ್ತು ಡಿಎಂಕೆ ಮೈತ್ರಿಕೂಟಗಳ ನಡುವಿನ ರಾಜಕೀಯ ಸ್ಪರ್ಧೆಯ ವಿಶ್ಲೇಷಣೆ ಇಲ್ಲಿದೆ. ಆಡಳಿತಾರೂಢ ಎನ್‌ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಭ್ರಷ್ಟಾಚಾರದಂತಹ ದೌರ್ಬಲ್ಯಗಳನ್ನು, ಹಾಗೆಯೇ ಡಿಎಂಕೆ-ಕಾಂಗ್ರೆಸ್ ಕೂಟದ ಸವಾಲುಗಳು ಮತ್ತು ಅವಕಾಶಗಳನ್ನು ಈ ಲೇಖನವು ಚರ್ಚಿಸುತ್ತದೆ.
ಪುದುಚೇರಿ - ಎನ್‌ಡಿಎ, ಡಿಎಂಕೆ ಮೈತ್ರಿಕೂಟದ ಸೆಣಸು
ಎಐಎನ್‌ಆರ್‌ಸಿ - ಬಿಜೆಪಿ ಮೈತ್ರಿ
ಬಲ: ಮುಖ್ಯಮಂತ್ರಿ ರಂಗಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು. ಸಿಎಂ ಕಳಂಕ ರಹಿತ ವ್ಯಕ್ತಿತ, ಸರ್ಕಾರದ ಜನಪ್ರಿಯತೆ.
ದೌರ್ಬಲ್ಯ: ಭ್ರಷ್ಟಾಚಾರ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ, ಅಪರಾಧ ಪ್ರಕರಣಗಳ ಹೆಚ್ಚಳ. ನಕಲಿ ಔಷಧ ತಯಾರಿಕಾ ಘಟಕ ತಯಾರಿಕೆಯಲ್ಲಿ ರಾಜಕೀಯ ನಾಯಕರ ಕೈವಾಡ. ಎಐಎಡಿಂಕೆಯೂ ಸೀಟು ಹಂಚಿಕೆಗೆ ಕಾಯುತ್ತಿರುವುದು.
ಅವಕಾಶ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪಾಲುದಾರನಾಗಿರುವುದಿಂದ ಅಭಿವೃದ್ಧಿಗೆ ಕೇಂದ್ರದ ಅವಲಂಬನೆ
ಸವಾಲು: ರಾಜ್ಯ ಸ್ಥಾನಮಾನ ಸಿಗದಿರುವುದು. ಚುನಾಯಿತ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಅಧಿಕಾರದ ಕೊರತೆ. ಏಕೈಕ ಮಹಿಳಾ ಸಚಿವೆ ಚಂದ್ರಿರಾ ಪ್ರಿಯಂಗ ಅವರನ್ನು ತೆಗೆದು ಹಾಕಿರುವುದು. ಕೇಂದ್ರದ ನಿರಂತರ ಅವಲಂಬನೆಯೂ ಸವಾಲು. ಎನ್‌ಟಿಕೆ, ಎಲ್‌ಜೆಕೆ, ಟಿವಿಕೆ ಸ್ಪರ್ಧೆಯೊಡ್ಡಬಹುದು.
ಡಿಎಂಕೆ ಕೂಟ
ಬಲ: ಕಾಂಗ್ರೆಸ್ ಗಟ್ಟಿಯಾಗಿ ನೆಲೆಯೂರಿದ್ದೂ ತನ್ನ ಬಲ ವಿಸ್ತರಿಸಿಕೊಳ್ಳುತ್ತಿದೆ. ಡಿಎಂಕೆಯೂ ತಳಮಟ್ಟದಲ್ಲಿ ಬೆಳೆಯುತ್ತಿದೆ. ಪ್ರಚಾರದಲ್ಲಿಯೂ ಹಿಂದೆ ಬಿದ್ದಿಲ್ಲ.
ದೌರ್ಬಲ್ಯ: ಮೈತ್ರಿ ನೇತೃತ್ವ ಯಾರು ವಹಿಸಬೇಕು, ಸಿಎಂ ಅಭ್ಯರ್ಥಿ ಯಾರಾಗ್ತಾರೆ ಎನ್ನುವುದರಲ್ಲಿ ಕಾಂಗ್ರೆಸ್ ಡಿಎಂಕೆ ಒಮ್ಮತಕ್ಕೆ ಬಂದಿಲ್ಲ. ಸೀಟು ಹಂಚಿಕೆ ಕುರಿತು ಸ್ಪಷ್ಟತೆ ಇಲ್ಲ.
ಅವಕಾಶ: ಅತ್ಯುತ್ತಮ ಪುದುಚೇರಿ ಜಾರಿಗೆ ತರುವಲ್ಲಿನ ಆಡಳಿತ ಸರ್ಕಾರದ ವಿಫಲತೆ, ಆಡಳಿತ ವಿರೋಧಿ ಅಲೆ.
ಸವಾಲು: ಕೈ ಕೆಲವೇ ಕೆಲವು ನಾಯಕರನ್ನು ನೆಚ್ಚಿಕೊಂಡಿರುವುದು. ಮೈತ್ರಿ ಪಕ್ಷ ಡಿಎಂಕೆ ಜತೆಗಿನ ಒಳಜಗಳ. ಸೀಟು ಹಂಚಿಕೆ ಅಂತಿಮ ಹಂತಕ್ಕೆ ಬಾರದಿರುವುದು. ಎನ್‌ಟಿಕೆ, ಎಲ್‌ಜೆಕೆ, ಟಿವಿಕೆ ಸ್ಪರ್ಧೆ ನೀಡುವ ಸಾಧ್ಯತೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್ ಬಲಾಬಲದ ರಹಸ್ಯವೇನು? ವೋಟ್ ಬ್ಯಾಂಕ್ ಆಗುತ್ತಾ ಜುಬೀನ್ ಗರ್ಗ್ ಸಾವು?
ಇದನ್ನೂ ಓದಿ: Election: ಕೇರಳ ತ್ರಿಕೋನ ಹೋರಾಟದ ಭೂಮಿ; ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?


