ರೈಲ್ವೆ ಹಳಿಯಲ್ಲೇ ತರಕಾರಿ ಮಾರ್ಕೆಟ್ : ವೈರಲ್ ವಿಡಿಯೋ

ಪ್ರವಾಸಿಗರನ್ನು ಆಕರ್ಷಿಸುವ ಥೈಲ್ಯಾಂಡ್‌ನ ಮತ್ತೊಂದು ತಾಣ ರೈಲ್ವೆ ಹಳಿಗಳ ಮೇಲಿರುವ ತರಕಾರಿ ಮಾರ್ಕೆಟ್. ರೋಮ್ ಹಪ್ ಮಾರುಕಟ್ಟೆ ಎಂಬ ಹೆಸರಿನ ಈ ಮಾರುಕಟ್ಟೆ ರೈಲ್ವೆ ಟ್ರಾಕ್‌ಗಳ ಮೇಲೆಯೇ ನಡೆಯುತ್ತದೆ. ಮೇಲೆ ರೈಲು ಹೋದರೂ ತರಕಾರಿ ಮಾತ್ರ ಫ್ರೆಶ್ ಆಗಿರುತ್ತದೆ. 

This Thailand Market on Railway track watch viral video akb

ಥೈಲ್ಯಾಂಡ್ :  ಪ್ರತಿ ವರ್ಷ ಪ್ರಪಂಚದಾದ್ಯಂತದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಥೈಲ್ಯಾಂಡ್ ದೇಶ  ವಿಲಕ್ಷಣ ಕಡಲತೀರಗಳು, ಭವ್ಯವಾದ ದೇವಾಲಯಗಳು,  ಸ್ಟಾರ್ ರೆಸ್ಟೋರೆಂಟ್‌ಗಳು  ಸೇರಿದಂತೆ  ಅನ್ವೇಷಿಸಬಹುದಾದ ಸಾವಿರಾರು ಪ್ರವಾಸಿ ತಾಣಗಳನ್ನು ಹೊಂದಿದೆ. ಅದೇ ರೀತಿ ಪ್ರವಾಸಿಗರನ್ನು ಆಕರ್ಷಿಸುವ ಥೈಲ್ಯಾಂಡ್‌ನ ಮತ್ತೊಂದು ತಾಣ ರೈಲ್ವೆ ಹಳಿಗಳ ಮೇಲಿರುವ ತರಕಾರಿ ಮಾರ್ಕೆಟ್. ರೋಮ್ ಹಪ್ ಮಾರುಕಟ್ಟೆ ಎಂಬ ಹೆಸರಿನ ಈ ಮಾರುಕಟ್ಟೆ ರೈಲ್ವೆ ಟ್ರಾಕ್‌ಗಳ ಮೇಲೆಯೇ ನಡೆಯುತ್ತದೆ. ಮೇಲೆ ರೈಲು ಹೋದರೂ ತರಕಾರಿ ಮಾತ್ರ ಫ್ರೆಶ್ ಆಗಿರುತ್ತದೆ. 

ಸಮುತ್ ಸಾಂಗ್‌ಖ್ರಾಮ್ ಪ್ರಾಂತ್ಯದ (Samut Songkhram province) ಮೇಕ್ಲಾಂಗ್ ರೈಲು ನಿಲ್ದಾಣದ (Maeklong Railway Station) ಬಳಿ ಇರುವ ಈ ವಿಭಿನ್ನವಾದ ರೋಮ್ ಹಪ್ ಮಾರುಕಟ್ಟೆಯನ್ನು (Rom Hup Market) ಥೈಲ್ಯಾಂಡ್ ಪ್ರವಾಸೋದ್ಯಮದ (Thailand Tourism) ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಸ್ಥಳೀಯವಾಗಿ  ಸಿಯಾಂಗ್ ತೈ ಮಾರುಕಟ್ಟೆ (Siang Tai Market) ಎಂದು ಕರೆಯಲಾಗುತ್ತದೆ.  ಸಿಯಾಂಗ್ ತೈ ಮಾರುಕಟ್ಟೆ ಎಂದರೆ ಜೀವಾಪಾಯವಿರುವ ಮಾರುಕಟ್ಟೆ ಎಂದರ್ಥವಂತೆ. 

30 ದಾಟಿದವರನ್ನು ನಿಷೇಧಿಸಿದ ಬಾರ್‌: ಕಾರಣ ಕೇಳಿದ್ರೆ ಒಂದ್ ಪೆಗ್ ಜಾಸ್ತಿ ಕುಡಿತೀರಾ!

ಈ  ಹೂಪ್ ರೋಮ್ ಮಾರುಕಟ್ಟೆಯಲ್ಲಿ ಸಮುದ್ರಾಹಾರದಿಂದ ಹಿಡಿದು ತರಕಾರಿ, ಹಣ್ಣುಗಳು, ತಾಜಾ ಮತ್ತು ಒಣಗಿದ ಆಹಾರ, ಮಾಂಸ ಮತ್ತು ಇತರ ವಿವಿಧ ಸರಕುಗಳು ಸೇರಿದಂತೆ ಎಲ್ಲವೂ ಲಭ್ಯವಿದೆ.  ಎಲ್ಲಾ ಬಗೆಯ ವಸ್ತುಗಳನ್ನು ಮಾರಾಟ ಮಾಡುವ ಸಾಮಾನ್ಯ ತಾಜಾ ಮಾರುಕಟ್ಟೆ ಇದಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ.  ಇಲ್ಲಿನ ಮಾರಾಟದ ಸ್ಟಾಲ್‌ಗಳು ಮೇ ಕ್ಲೋಂಗ್-ಬಾನ್ ಲೇಮ್ ( Mae Klong-Ban Laem railway) ಎಂಬ ರೈಲು ಹಳಿಗೆ ಅಂಟಿಕೊಂಡೆ ಇದೆ. ಇದು ಮಹಾಚಾಯ್ (Mahachai) ಮತ್ತು ಮೇ ಕ್ಲೋಂಗ್‌ ನಡುವೆ ಸಂಚರಿಸುವ ಸಣ್ಣ ರೈಲು ಮಾರ್ಗವಾಗಿದೆ. 

ಈ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ವಿಪರೀತ ಶಾಖ ಮತ್ತು ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು  ಕ್ಯಾನ್ವಾಸ್ ಅನ್ನು ಹಾಕುತ್ತಾರೆ.  ರೈಲಿನ ಹಳಿಗೆ ಅಂಟಿಕೊಂಡೆ ಸ್ಟಾಲ್‌ಗಳಿರುವುದರಿಂದ ಆಗಮಿಸುವ ರೈಲಿನ ಸಿಗ್ನಲ್ ಸದ್ದು ಮಾಡುತ್ತಿದ್ದಂತೆ, ರೈಲಿಗೆ ಅಡ್ಡಿ ಆಗುವ ಎಲ್ಲಾ ಸರಕುಗಳನ್ನು ತೆರೆಯಲು ಯತ್ನಿಸುತ್ತಾರೆ. ನೋಡುಗರಿಗೆ ಇದು ಕಷ್ಟದ ಕೆಲಸ ಎನಿಸಿದರೂ ಸ್ಥಳೀಯರಿಗೆ ಇದು ಸಾಮಾನ್ಯ ಎಂಬಂತಾಗಿದೆ.  ಇಲ್ಲಿನ ಈ ವಿಶೇಷ ಮರುಕಟ್ಟೆಯ ವಿಡಿಯೋವನ್ನು  Erik Solheim ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು,  ಥೈಲ್ಯಾಂಡ್‌ನ ಮ್ಯಾಕಲಾಂಗ್ ರೈಲ್ವೆ ಮಾರ್ಕೆಟ್ ಇದು,  ರೈಲ್ವೆ ಟ್ರಾಕ್‌ನಲ್ಲಿ ಮಾರ್ಕೆಟ್  ಇದೆ ಎಂದು  ಬರೆದುಕೊಂಡಿದ್ದಾರೆ.  ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. 

ನೈಸರ್ಗಿಕ ಕರೆಗಾಗಿ ಕಾರಿನಿಂದಿಳಿದ ಹೆಂಡ್ತಿಯನ್ನೇ ಬಿಟ್ಟು ಹೋದ ಗಂಡ..!

Latest Videos
Follow Us:
Download App:
  • android
  • ios