Asianet Suvarna News Asianet Suvarna News

'ಭಾರತ ಸದೃಢವಾಗಿರಲಿ': ದುಬೈನ ಬುರ್ಜ್‌ ಕಲೀಫಾದಲ್ಲಿ ತ್ರಿವರ್ಣ

ಜಗತ್ತಿನ ಅತ್ಯಂತ ಎತ್ತರದ ಕಟ್ಟಡದಲ್ಲಿ ತ್ರಿವರ್ಣ | ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ | ಬುರ್ಜ್ ಕಲೀಫಾದಲ್ಲಿ ಬೆಳಗಿತು ಕೇಸರಿ,ಬಿಳಿ, ಹಸಿರು ಬಣ್ಣ

Stay Strong India UAE Buildings Including Burj Khalifa Light Up With Tricolour In Support Amid Covid Surge dpl
Author
Bangalore, First Published Apr 26, 2021, 9:24 AM IST

ದೆಹಲಿ(ಏ.26): ಭಾರತದಲ್ಲಿ COVID-19 ಪ್ರಕರಣಗಳಲ್ಲಿ ಭಾರಿ ಏರಿಕೆಯ ಮಧ್ಯೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಪ್ರಮುಖ ಕಟ್ಟಡಗಳು ತ್ರಿವರ್ಣದೊಂದಿಗೆ ಪ್ರಕಾಶಿಸಿ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವ ಭಾರತಕ್ಕೆ ಬೆಂಬಲ ತೋರಿಸಿತು.

ವಿಶ್ವದ ಅತಿ ಎತ್ತರದ ಕಟ್ಟಡ, ದುಬೈನ ಬುರ್ಜ್ ಖಲೀಫಾ ಮತ್ತು ಅಬುಧಾಬಿಯ ಅಡ್ನೋಕ್ ಪ್ರಧಾನ ಕಚೇರಿಯನ್ನು ಭಾರತ ಧ್ವಜದೊಂದಿಗೆ ಬೆಳಗಿಸಲಾಯಿತು. ಭಾನುವಾರ ರಾತ್ರಿ "ಸ್ಟೇ ಸ್ಟ್ರಾಂಗ್ ಇಂಡಿಯಾ" ಎಂಬ ಸಂದೇಶವನ್ನು ನೀಡಲಾಯಿತು.

ಲಸಿಕೆ ಕೊರತೆ: ಕೊವಿಶೀಲ್ಡ್‌ಗೆ ಬೇಕಾದ ಕಚ್ಚಾ ವಸ್ತು ಕಳುಹಿಸಲು ಒಪ್ಪಿದ ಅಮೆರಿಕ

"ಭಾರತವು COVID19 ವಿರುದ್ಧದ ಭೀಕರ ಯುದ್ಧವನ್ನು ಎದುರಿಸುತ್ತಿರುವಾಗ, ಅದರ ಸ್ನೇಹಿತ ರಾಷ್ಟ್ರ ಯುಎಇ ತನ್ನ ಶುಭಾಶಯಗಳನ್ನು ಕಳುಹಿಸಿದೆ. ದುಬೈನ ಬುರ್ಜ್ ಖಲೀಫಾ ತನ್ನ ಬೆಂಬಲವನ್ನು ಪ್ರದರ್ಶಿಸಲು ತ್ರಿವರ್ಣ ಜೊತೆ ನಿಂತಿದೆ ಎಂದು ಯುಎಇಯ ಭಾರತದ ರಾಯಭಾರ ಕಚೇರಿ ಟ್ವಿಟ್ಟರ್ ನಲ್ಲಿ ಬುರ್ಜ್ ಕಲೀಫಾ ಪೋಸ್ಟ್ ಮಾಡಿದೆ

ಯುಎಇಯ ಭಾರತದ ರಾಯಭಾರಿ ಪವನ್ ಕಪೂರ್ ಟ್ವಿಟ್ಟರ್ ನಲ್ಲಿ ಕಷ್ಟದ ಸಮಯದಲ್ಲಿ ಯುಎಇ ತನ್ನ ಮಿತ್ರ ರಾಷ್ಟ್ರಕ್ಕೆ ನೀಡಿದ ಬಲವಾದ ಬೆಂಬಲವನ್ನು ಶ್ಲಾಘಿಸುತ್ತೇವೆ ಎಂದು ಬರೆದಿದ್ದಾರೆ. ಭಾರತದಲ್ಲಿ ಕೊರೋನವೈರಸ್ ಪ್ರಕರಣಗಳು 3.49 ಹೊಸ ಸೋಂಕುಗಳೊಂದಿಗೆ ಹೊಸ ದಾಖಲೆಯನ್ನು ಮುಟ್ಟಿದೆ. ಕೋವಿಡ್‌ನಿಂದ 2,767 ಜನರು ಸಾವನ್ನಪ್ಪಿದ್ದಾರೆ.

ಕೋವಿಡ್‌ ಆಸ್ಪತ್ರೆ ಸ್ಫೋಟ 82 ಸಾವು, 110 ಜನರಿಗೆ ಗಾಯ

ದೇಶದಲ್ಲಿ ಕೊರೋನಾ ಪರಿಸ್ಥಿತಿಯಿಂದಾಗಿ ಯುಎಇ ಭಾನುವಾರದಿಂದ 10 ದಿನಗಳವರೆಗೆ ಭಾರತದಿಂದ ಯುಎಇಗೆ ಪ್ರಯಾಣವನ್ನು ನಿಷೇಧಿಸಿದೆ. ದುಬೈನಿಂದ ಭಾರತಕ್ಕೆ ಬರುವ ವಿಮಾನಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ. ಭಾರತದಿಂದ ಮತ್ತು ಹೊರಗಿನ ಪ್ರಯಾಣವನ್ನು ನಿರ್ಬಂಧಿಸಿರುವ ಹಲವಾರು ದೇಶಗಳಲ್ಲಿ ಯುಕೆ, ಫ್ರಾನ್ಸ್, ಜರ್ಮನಿ, ನ್ಯೂಜಿಲೆಂಡ್, ಹಾಂಗ್ ಕಾಂಗ್, ಓಮನ್ ಮತ್ತು ಪಾಕಿಸ್ತಾನ ಸೇರಿವೆ.

ಕೋವಿಡ್ ವಿರುದ್ಧ ಹೋರಾಡೋಣ; ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸೋಣ...

Stay Strong India UAE Buildings Including Burj Khalifa Light Up With Tricolour In Support Amid Covid Surge dpl

Follow Us:
Download App:
  • android
  • ios