ನ್ಯೂಯಾರ್ಕ್(ಏ.26): ಭಾರತ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಧ್ಯೆ ನಡೆದ ಮಾತುಕತೆಯ ಬೆನ್ನಲ್ಲೇ ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾವಸ್ತು ಕಳುಹಿಸಲು ಅಮೆರಿಕ ಒಪ್ಪಿಗೆ ನೀಡಿದೆ. ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಸುಲಿವನ್ ಹಾಗೂ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಈ ಸಂಬಂಧ ಚರ್ಚಿಸಿದ್ದರು.

ಅಮೆರಿಕದಿಂದ 10 ಸಾವಿರ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ ಹೊತ್ತು ತರಲಿದೆ ಏರ್ ಇಂಡಿಯಾ

ಕೊವಿಶೀಲ್ಡ್ ಲಸಿಕೆ ತಯಾರಿಗೆ ಅಗತ್ಯದ ಕಚ್ಚಾವಸ್ತು ಕಳುಹಿಸುವುದು, ಆಕ್ಸಿಜನ್ ಉತ್ಪಾದನೆ ಸೇರಿ ಹಲವು ರೀತಿಯಲ್ಲಿ ಅಮೆರಿಕ ನೆರವು ನೀಡಲಿದೆ. ಆದರೆ ಅಮೆರಿಕ ಅದರ ಸ್ಟಾಕ್‌ಗಳಿಂದ ಲಸಿಕೆ ಬಳಸಲು ಸಿದ್ಧವಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಳೆದ ವಾರದಿಂದ ಬೈಡೆನ್ ಆಡಳಿತವು ಈ ಪರಿಸ್ಥಿತಿಯಲ್ಲಿ ಭಾರತಕ್ಕೆ ನೆರವಾಗದಿರುವ ಬಗ್ಗೆ ಸಾಕಷ್ಟು ಟೀಕೆ ಎದುರಿಸುತ್ತಿದೆ.

ಸಂಪೂರ್ಣ ನಿರ್ಬಂಧಗಳಿವೆ ಎಂದು ಆಡಳಿತ ನಿರಾಕರಿಸಿತು. ಆದಾಗ್ಯೂ, ಯು.ಎಸ್.ನ ರಕ್ಷಣಾ ಉತ್ಪಾದನಾ ಕಾಯ್ದೆಯ ಪರಿಣಾಮವಾಗಿ (ಖಾಸಗಿ ವಲಯದ ಉತ್ಪಾದನಾ ನಿರ್ಧಾರಗಳನ್ನು ನಿಯಂತ್ರಿಸಲು ಸರ್ಕಾರಕ್ಕೆ ಅವಕಾಶ ನೀಡುವ ತುರ್ತು ಅಧಿಕಾರಗಳು) ಫೆಡರಲ್ ಸರ್ಕಾರದ ಖರೀದಿ ಆದೇಶಗಳಿಗೆ ವಿದೇಶಿ ಆದೇಶಗಳಿಗಿಂತ ಆದ್ಯತೆ ನೀಡಬೇಕಾಗುತ್ತದೆ, ಇದರ ಪರಿಣಾಮವಾಗಿ ರಫ್ತಿಗೆ ಕೊರತೆ ಉಂಟಾಗುತ್ತದೆ.