ಕೋವಿಡ್‌ ಆಸ್ಪತ್ರೆ ಸ್ಫೋಟ 82 ಸಾವು, 110 ಜನರಿಗೆ ಗಾಯ

ಕೋವಿಡ್ ಆಸ್ಪತ್ರೆಯೇ ಸ್ಫೋಟಗೊಂಡು  82 ಮಂದಿ ಮೃತಪಟ್ಟು, 110 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಆಮ್ಲಜನಕ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 

82 killed in Covid Hospital explodes in iraq snr

ಬಾಗ್ದಾದ್‌ (ಏ.26): ಕೋವಿಡ್‌ ಸೋಂಕಿತರಿಗೆ ಪೂರೈಕೆಯಾಗುತ್ತಿದ್ದ ಆಮ್ಲಜನಕ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಇರಾಕ್‌ನ ಬಾಗ್ದಾದ್‌ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. 

ಈ ಬೆಂಕಿ ದುರಂತದಲ್ಲಿ 82 ಮಂದಿ ಮೃತಪಟ್ಟು, 110 ಮಂದಿ ಗಾಯಗೊಂಡಿದ್ದಾರೆ.

ಅಮೆರಿಕದಿಂದ 10 ಸಾವಿರ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ ಹೊತ್ತು ತರಲಿದೆ ಏರ್ ಇಂಡಿಯಾ ..

ಇಲ್ಲಿನ ಇಬ್ನಾ ಅಲ್‌-ಖತೀಬ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ಆಮ್ಲಜನಕ ಸಿಲಿಂಡರ್‌ ಸ್ಫೋಟವಾಗಿ ಈ ಅವಘಡ ಸಂಭವಿಸಿದ್ದು, ಈ ದುರಂತಕ್ಕೆ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. 

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...

ಮೃತರ ಪೈಕಿ ಕನಿಷ್ಠ 28 ಮಂದಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತರು ಎಂದು ಮಾನವ ಹಕ್ಕುಗಳ ಆಯೋಗದ ವಕ್ತಾರರು ಟ್ವೀಟ್‌ ಮಾಡಿದ್ದಾರೆ.

Latest Videos
Follow Us:
Download App:
  • android
  • ios