ಧಾರ್ಮಿಕ ಸ್ಥಳಗಳ ಸ್ಥಾನಮಾನದ ಬದಲಾವಣೆ ಬೇಡ, ಇದು ಘರ್ಷಣೆಗೆ ಕಾರಣವಾಗುತ್ತೆ ಎಂದ ಪಿ.ಚಿದಂಬರಂ

ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿರುವ ಗ್ಯಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಫಿ ಸಮೀಕ್ಷೆಯು ಭಾರೀ ಭದ್ರತಾ ವ್ಯವಸ್ಥೆಗಳ ನಡುವೆ ಇಂದು ಪುನರಾರಂಭವಾಗಿದೆ. ನ್ಯಾಯಾಲಯದಿಂದ ನೇಮಕಗೊಂಡ ಮೂವರು ಅಡ್ವೊಕೇಟ್ ಕಮಿಷನರ್‌ಗಳು, ಹಿಂದೂ ಮತ್ತು ಮುಸ್ಲಿಂ ಕಡೆಯಿಂದ ತಲಾ ಐವರು ವಕೀಲರು ಮತ್ತು ವೀಡಿಯೊಗ್ರಫಿ ತಂಡದ ಸಹಾಯಕರಿಗೆ ಸಮೀಕ್ಷೆಯ ಕಾರ್ಯವನ್ನು ನೀಡಲಾಗಿದೆ.
 

Status of religious places shouldnt be changed will lead to huge conflict says congress Leader P Chidambaram san

ನವದೆಹಲಿ (ಮೇ.14): ವಾರಣಾಸಿಯ ಗ್ಯಾನವಾಪಿ ಮಸೀದಿಯ (Gyanvapi mosque) ವಿಡಿಯೋಗ್ರಫಿ ಸಮೀಕ್ಷೆ ಕುರಿತ ಗದ್ದಲದ ನಡುವೆಯೇ ಶನಿವಾರ ಕಾಂಗ್ರೆಸ್ ನಾಯಕ ಪಿ ಚಿದಂಬರಂ (Congress leader P Chidambaram ) ಅವರು ಪೂಜಾ ಸ್ಥಳಗಳ ಸ್ಥಿತಿಯನ್ನು(status of places of worship ) ಬದಲಾಯಿಸಬಾರದು ಮತ್ತು ಇದು ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

'ರಾಮ ಜನ್ಮಭೂಮಿಯನ್ನು (Ram Janmabhoomi) ಹೊರತುಪಡಿಸಿ ಪೂಜಾ ಸ್ಥಳಗಳ ಕಾಯಿದೆಯನ್ನು ಪಿವಿ ನರಸಿಂಹರಾವ್ (PV Narasimha Rao) ಸರ್ಕಾರವು ಅಂಗೀಕರಿಸಿತು. ಎಲ್ಲಾ ಇತರ ಪೂಜಾ ಸ್ಥಳಗಳು ಅವು ಇದ್ದಂತೆಯೇ ಇರಬೇಕೆಂದು ನಾವು ನಂಬುತ್ತೇವೆ. ಯಾವುದೇ ಪ್ರಾರ್ಥನಾ ಸ್ಥಳದ ಸ್ಥಿತಿಯನ್ನು ಬದಲಾಯಿಸಲು ಯಾವುದೇ ಪ್ರಯತ್ನ ಮಾಡಬಾರದು ಏಕೆಂದರೆ ಅದು ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು' ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.

ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿರುವ ಗ್ಯಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಫಿ ಸಮೀಕ್ಷೆಯು ಭಾರೀ ಭದ್ರತಾ ವ್ಯವಸ್ಥೆಗಳ ನಡುವೆ ಇಂದು ಪುನರಾರಂಭವಾಗಿದೆ. ನ್ಯಾಯಾಲಯದಿಂದ ನೇಮಕಗೊಂಡ ಮೂವರು ಅಡ್ವೊಕೇಟ್ ಕಮಿಷನರ್‌ಗಳು, ಹಿಂದೂ ಮತ್ತು ಮುಸ್ಲಿಂ ಕಡೆಯಿಂದ ತಲಾ ಐವರು ವಕೀಲರು ಮತ್ತು ವೀಡಿಯೊಗ್ರಫಿ ತಂಡದ ಸಹಾಯಕರಿಗೆ ಸಮೀಕ್ಷೆಯ ಕಾರ್ಯವನ್ನು ನೀಡಲಾಗಿದೆ.

ವಾರಣಾಸಿಯ ಕಾಶಿ ವಿಶ್ವನಾಥ ದೇಗುಲ-ಗ್ಯಾನವಾಪಿ ಮಸೀದಿ ಸಂಕೀರ್ಣದ ಪರಿಶೀಲನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕರ ಈ ಹೇಳಿಕೆ ಹೊರಬಿದ್ದಿದೆ.  ಇಂತಹ ಸಂಘರ್ಷವನ್ನು ತಪ್ಪಿಸಲು ಆಳವಾದ ಪರಿಗಣನೆಯ ನಂತರ ಪೂಜಾ ಸ್ಥಳಗಳ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು ಎಂದು ಚಿದಂಬರಂ ಹೇಳಿದ್ದಾರೆ.

ಇದಕ್ಕೂ ಮೊದಲು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗ್ಯಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ಟೀಕಿಸಿದ್ದರು ಮತ್ತು ಬಿಜೆಪಿ ಮತ್ತು ಆರ್‌ಎಸ್‌ಎಸ್ 90 ರ ದಶಕದಲ್ಲಿ "ದ್ವೇಷದ ಯುಗವನ್ನು ಪುನರುಜ್ಜೀವನಗೊಳಿಸಲು" ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದರು. ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಏಪ್ರಿಲ್ 26 ರಂದು ಗ್ಯಾನವಾಪಿ ಮಸೀದಿಯ ಹೊರ ಗೋಡೆಯ ಮೇಲಿರುವ ಶೃಂಗಾರ್ ಗೌರಿ, ಗಣಪತಿ, ಹನುಮಾನ್ ಮತ್ತು ನಂದಿಯ ದೈನಂದಿನ ಪೂಜೆ ಮತ್ತು ಆಚರಣೆಗಳಿಗೆ ಅನುಮತಿ ಕೋರಿ ದೆಹಲಿ ಮೂಲದ ಮಹಿಳೆಯರ ಗುಂಪಿನ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸಂಕೀರ್ಣದ ವೀಡಿಯೊಗ್ರಫಿ ಮತ್ತು ತಪಾಸಣೆಗೆ ಆದೇಶಿಸಿತ್ತು. 

ಗ್ಯಾನವಾಪಿ ಮಸೀದಿ ಸಮೀಕ್ಷೆ ವೇಳೆ ಪ್ರತ್ಯಕ್ಷವಾದ ನಾಗರ ಹಾವು, ವಿಡಿಯೋಗ್ರಫಿಗೆ ವಿಶೇಷ ಉಪಕರಣಗಳ ಬಳಕೆ!

ಗುರುವಾರ, ಜಿಲ್ಲಾ ಸಿವಿಲ್ ನ್ಯಾಯಾಲಯದ (ಹಿರಿಯ ವಿಭಾಗ) ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಸಂಕೀರ್ಣದ ಸಮೀಕ್ಷೆಗಾಗಿ ಅಜಯ್ ಕುಮಾರ್ ಮಿಶ್ರಾ ಅವರನ್ನು ನೇಮಕವನ್ನು ಪರಿಶೀಲಿಸಬೇಕು ಎನ್ನುವ ಮಸೀದಿ ಸಮಿತಿಯ ಮನವಿಯನ್ನು ವಜಾಗೊಳಿಸಿದ್ದರು. ಕಮಿಷನರ್‌ಗೆ ಸಹಾಯ ಮಾಡಲು ಮತ್ತಿಬ್ಬರು ವಕೀಲರನ್ನು ನೇಮಕ ಮಾಡಿದ ನ್ಯಾಯಾಧೀಶರು ಮಂಗಳವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ಕಳೆದ ವಾರ, ಆವರಣದೊಳಗೆ ಚಿತ್ರೀಕರಣ ಮಾಡಲು ವಕೀಲ ಕಮಿಷನರ್‌ಗೆ ಆದೇಶವಿಲ್ಲ ಎಂದು ಮಸೀದಿ ಸಮಿತಿಯು ಆಕ್ಷೇಪಿಸಿದ ನಂತರ ಸಂಕೀರ್ಣದ ಸಮೀಕ್ಷೆಯನ್ನು ನಿಲ್ಲಿಸಲಾಗಿತ್ತು.

​​​​​​​MUNDKA FIRE: 27 ಮಂದಿ ಸಾವು, 29 ಮಂದಿ ನಾಪತ್ತೆ, ಬೆಂಕಿಗೆ ಕಾರಣ ಏನು?

ಗ್ಯಾನವಾಪಿ-ಶೃಂಗಾರ ಗೌರಿ ಪ್ರಕರಣ ಸಂಬಂಧ ನ್ಯಾಯಾಲಯದ ತೀರ್ಪಿನ ಬಳಿಕ ಶನಿವಾರ ಬೆಳಗ್ಗೆ 8 ಗಂಟೆಯಿಂದ ಸರ್ವೆ ಕಾರ್ಯ ಆರಂಭಗೊಂಡಿದ್ದು, ಇಂದಿನ ಕೆಲಸ ಪೂರ್ಣಗೊಂಡಿದೆ. ಆದರೆ ಸಮೀಕ್ಷೆ ವೇಳೆ ನಾಗರ ಹಾವು ಕಂಡು ಬಂದಿದ್ದರಿಂದ ಭಾರೀ ಸಂಚಲನ ಉಂಟಾಗಿತ್ತು. ಹಾವು ಕಂಡುಬಂದಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ವೆ ವೇಳೆ ಅಧಿಕಾರಿಗಳು ಹಾವಾಡಿಗರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಸಮೀಕ್ಷೆ ವೇಳೆ ಒಳಬಂದವರ ಮೊಬೈಲ್ ಗಳನ್ನು ಜಮಾ ಮಾಡಲಾಗಿದೆ. ಸದ್ಯ ಸಮೀಕ್ಷೆ ಪೂರ್ಣಗೊಂಡಿದೆ. ಗ್ಯಾನವಾಪಿ ಮಸೀದಿಯಲ್ಲಿ ಸಮೀಕ್ಷೆಯ ಸಂದರ್ಭದಲ್ಲಿ, ವಿಶೇಷ ಕ್ಯಾಮೆರಾಗಳು ಮತ್ತು ಲೈಟ್‌ಗಳನ್ನು ಸಹ ವಿಡಿಯೋಗ್ರಫಿಗೆ ವ್ಯವಸ್ಥೆ ಮಾಡಲಾಗಿತ್ತು.

Latest Videos
Follow Us:
Download App:
  • android
  • ios