ರಾಂಗ್ ಸಿಗ್ನಲ್ ನೀಡಿದ ಸ್ಟೇಷನ್ ಮಾಸ್ಟರ್: ಎಲ್ಲೋ ಹೋಗ್ಬೇಕಾದ ರೈಲು ಎಲ್ಲೋ ಹೋಯ್ತು
ಮುಂಬೈನ ವಡಾಲ ರೈಲು ನಿಲ್ದಾಣದಲ್ಲಿ ಗೋರೆಗಾಂವ್‌ಗೆ ಹೊರಟ ರೈಲೊಂದು ಸ್ಟೇಷನ್ ಮಾಸ್ಟರ್ ಮಾಡಿದ ಅವಾಂತರದಿಂದಾಗಿ ವಡಾಲದಿಂದ ವಾಶಿಗೆ ಹೊರಟ ಘಟನೆ ನಡೆದಿದೆ. ವಡಾಲ ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಸಿಗ್ನಲ್ ನೀಡುವ ವೇಳೆ ರಾಂಗ್ ಡೈರೆಕ್ಷನ್‌ನಲ್ಲಿ ಸಿಗ್ನಲ್ ನೀಡಿದ್ದರಿಂದ ಈ ಅವಾಂತರವಾಗಿದೆ.
ಮುಂಬೈ: ಮುಂಬೈನ ವಡಾಲ ರೈಲು ನಿಲ್ದಾಣದಲ್ಲಿ ಗೋರೆಗಾಂವ್‌ಗೆ ಹೊರಟ ರೈಲೊಂದು ಸ್ಟೇಷನ್ ಮಾಸ್ಟರ್ ಮಾಡಿದ ಅವಾಂತರದಿಂದಾಗಿ ವಡಾಲದಿಂದ ವಾಶಿಗೆ ಹೊರಟ ಘಟನೆ ನಡೆದಿದೆ. ವಡಾಲ ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಸಿಗ್ನಲ್ ನೀಡುವ ವೇಳೆ ರಾಂಗ್ ಡೈರೆಕ್ಷನ್‌ನಲ್ಲಿ ಸಿಗ್ನಲ್ ನೀಡಿದ್ದರಿಂದ ಈ ಅವಾಂತರವಾಗಿದೆ.
ಹೀಗಾಗಿ ಆ ರೈಲಿನಲ್ಲಿ ಗೋರೆಂಗಾವ್‌ಗೆ ಹೊರಟ ಸ್ಥಳೀಯ ಜನ ಸಂಕಷ್ಟಕ್ಕಿಡಾಗಿದ್ದರು. ಮುಂಬೈನ ಹಾರ್ಬರ್ ಲೇನ್ ಸರ್ವೀಸ್‌ನಲ್ಲಿ ಈ ಘಟನೆ ನಡೆದಿದೆ. ಅಂಗ್ಲ ದೈನಿಕವೊಂದರ ವರದಿಯ ಪ್ರಕಾರ ನಿನ್ನೆ ಮುಂಜಾನೆ ಈ ಘಟನೆ ನಡೆದಿದೆ. 10.54ಕ್ಕೆ ಛತ್ರಪತಿ ಶಿವಾಜಿ ಮಹಾರಾಜ ಟೆರ್ಮಿನಲ್‌ನಿಂದ ಗೋರೆಗಾಂವ್‌ಗೆ ಹೊರಟಿದ್ದ ರೈಲು 20 ನಿಮಿಷದ ನಂತರ ವಡಾಲ ರೈಲು ನಿಲ್ದಾಣಕ್ಕೆ ಬಂದಿದೆ. ವಡಾಲ ರೈಲು ನಿಲ್ದಾಣಕ್ಕಿಂತ ಸ್ವಲ್ಪ ಹಿಂದೆ ಹಾರ್ಬರ್ ಲೈನ್ ಮಾರ್ಗಗಳು ಎರಡು ಮಾರ್ಗಗಳಾಗಿ ವಿಭಜಿಸುತ್ತವೆ, ಒಂದು ಮಾರ್ಗವು ವಾಶಿ ಕಡೆಗೆ ಹೋದರೆ ಮತ್ತೊಂದು ಮಾರ್ಗವೂ ಗೋರೆಗಾಂವ್ ಕಡೆಗೆ ಹೋಗುತ್ತದೆ.
ಶೌಚಕ್ಕೆ ಹೋಗುವುದಕ್ಕೂ ವಾಕಿಟಾಕಿಯಲ್ಲಿ ಅನುಮತಿ ಕೇಳೋದು ಅಗತ್ಯ: ಪೇಚಿಗೆ ಸಿಲುಕಿದ ರೈಲ್ವೆ ಮಹಿಳಾ ಚಾಲಕರು
ಇಲ್ಲಿ ಗೋರೆಗಾಂವ್ ಮಾರ್ಗದಲ್ಲಿ ಹೋಗಬೇಕಾದರ ರೈಲು ಸ್ಟೇಷನ್ ಮಾಸ್ಟರ್‌ನ ಅವಾಂತರದಿಂದಾಗಿ ಸೀದಾ ವಾಶಿ ಕಡೆಗೆ ಹೋಗಿದೆ. ಕೂಡಲೇ ರೈಲಿನಲ್ಲಿದ್ದ ಸಿಬ್ಬಂದಿ ಹಾಗೂ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಆದರೆ ಈ ರೈಲು ಹೀಗೆ ತಪ್ಪು ಮಾರ್ಗದಲ್ಲಿ ಚಲಿಸಿದ್ದರಿಂದ . ಛತ್ರಪತಿ ಶಿವಾಜಿ ಮಹಾರಾಜ ಟೆರ್ಮಿನಲ್‌ನಿಂದ ಮತ್ತು ವಡಾಲಾ ನಡುವೆ ಸಾಗುವ ಇತರ ರೈಲುಗಳ ಪ್ರಯಾಣಕ್ಕೆ ತೊಂದರೆಯಾಗಿ ಹಲವು ರೈಲುಗಳ ವಿಳಂಬಕ್ಕೆ ಕಾರಣವಾಯ್ತು.
ಇದಾಗಿ ಸ್ವಲ್ಪ ಹೊತ್ತಿನ ನಂತರ ರೈಲನ್ನು ಹಿಮ್ಮುಖವಾಗಿ ಚಲಿಸಿ ಸರಿಯಾದ ಹಳಿಗೆ ತರಲಾಯ್ತು. ಹೀಗೆ ರೈಲಿಗೆ ರಾಂಗ್ ಸಿಗ್ನಲ್ ನೀಡಿದ ಸ್ಟೇಷನ್ ಮಾಸ್ಟರ್‌ಗೆ ಮೆಮೊ ನೀಡಲಾಗಿದೆ. ಕೆಲ ವರದಿಗಳ ಪ್ರಕಾರ, ಸ್ಟೇಷನ್ ಮಾಸ್ಟರ್ ಬಳಿ ಸರಿಯಾದ ವೇಳಾಪಟ್ಟಿಯ ಪ್ರತಿ ಇಲ್ಲದ ಕಾರಣ ಈ ಅವಾಂತರವಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದ ಆಹಾರ ಕೌಂಟರ್ ತೆರೆದ ಭಾರತೀಯ ರೈಲ್ವೆ, ನಿಮ್ಮ ಜಿಲ್ಲೆಯಲ್ಲಿದೆಯೇ?