ಶೌಚಕ್ಕೆ ಹೋಗುವುದಕ್ಕೂ ವಾಕಿಟಾಕಿಯಲ್ಲಿ ಅನುಮತಿ ಕೇಳೋದು ಅಗತ್ಯ: ಪೇಚಿಗೆ ಸಿಲುಕಿದ ರೈಲ್ವೆ ಮಹಿಳಾ ಚಾಲಕರು

ಭಾರತೀಯ ರೈಲ್ವೆಯ ಮಹಿಳಾ ಚಾಲಕರು ತಾವು ಶೌಚಾಲಯಕ್ಕೆ ಹೋಗಬೇಕಾದರೂ ವಾಕಿಟಾಕಿಯಲ್ಲೇ ಮೊದಲೇ ಮಾಹಿತಿ ನೀಡಬೇಕು ಎಂಬ ಸಮಸ್ಯೆ ಬಗ್ಗೆ ನೋವು ತೋಡಿಕೊಂಡಿದ್ದಾರೆ.

Indian railway It is necessary to ask permission to go to the toilet Railway women drivers in trouble akb

ನವದೆಹಲಿ: ರೈಲಿನ ಪುರುಷ ಮತ್ತು ಮಹಿಳಾ ಚಾಲಕರು ಪರಸ್ಪರ ಸಂವಹನಕ್ಕಾಗಿ ಅಥವಾ ಸಮೀಪದ ರೈಲ್ವೆ ನಿಲ್ದಾಣದ ಜೊತೆ ಸಂವಹನಕ್ಕಾಗಿ ವಾಕಿಟಾಕಿ ಬಳಸುವುದು ಸಾಮಾನ್ಯ. ಆದರೆ ಮಹಿಳಾ ಚಾಲಕರು ತಾವು ಶೌಚಾಲಯಕ್ಕೆ ಹೋಗಬೇಕಾದರೂ ವಾಕಿಟಾಕಿಯಲ್ಲೇ ಮೊದಲೇ ಮಾಹಿತಿ ನೀಡಬೇಕು ಎಂಬ ಸಮಸ್ಯೆ ಬಗ್ಗೆ ನೋವು ತೋಡಿಕೊಂಡಿದ್ದಾರೆ.

ಶೌಚದ ವಿಷಯವನ್ನೂ ಹೀಗೆ ನೂರಾರು ಜನರು ಆಲಿಸುವ ವಾಕಿಟಾಕಿಯಲ್ಲಿ ಹೇಳಬೇಕಾದ ಅನಿವಾರ್ಯತೆಯು ಮುಜುಗರದ ಜೊತೆಗೆ, ಕೆಲವೊಮ್ಮೆ ಅಸುರಕ್ಷತೆಗೂ ಕಾರಣವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಹಾಲಿ ಭಾರತೀಯ ರೈಲ್ವೆಯಲ್ಲಿ 1700 ಮಹಿಳಾ ಚಾಲಕರಿದ್ದಾರೆ. ಈ ಪೈಕಿ ಬಹುತೇಕರು ಸಹ ಚಾಲಕರು. ಪ್ರತಿ ವಿಷಯಕ್ಕೂ ಮುನ್ನ ತಮ್ಮ ಪುರುಷ ಚಾಲಕರ ಅನುಮತಿ ಕೇಳಬೇಕಾಗುತ್ತದೆ.

ಕರ್ನಾಟಕದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದ ಆಹಾರ ಕೌಂಟರ್‌ ತೆರೆದ ಭಾರತೀಯ ರೈಲ್ವೆ, ನಿಮ್ಮ ಜಿಲ್ಲೆಯಲ್ಲಿದೆಯೇ?

ಒಂದು ವೇಳೆ ಶೌಚಾಲಯಕ್ಕೆ ಹೋಗಬೇಕೆಂದರೆ ಚಾಲಕರ ಕ್ಯಾಬಿನ್‌ನಿಂದ ಇಳಿದು ಪ್ರಯಾಣಿಕರ ಕ್ಯಾಬಿನ್‌ನ ಶೌಚಾಲಯಕ್ಕೆ ತೆರಳಬೇಕು. ಇದಕ್ಕೂ ಮುನ್ನ ಅವರ ಪುರುಷ ಚಾಲಕರ ಅನುಮತಿ ಪಡೆದ ಹೋಗಬೇಕು. ಪ್ರಯಾಣಿಕರ ರೈಲಿನಲ್ಲಿ ಈ ವಿಷಯ ಹೆಚ್ಚು ಸಮಸ್ಯೆ ತರದು.

ಆದರೆ ಸರಕು ಸಾಗಣೆ ರೈಲಿನಲ್ಲಿನ ಮಹಿಳಾ ಚಾಲಕರಿಗೆ ಶೌಚಕ್ಕೆ ಹೋಗುವುದೇ ದೊಡ್ಡ ಸಮಸ್ಯೆ. ಕಾರಣ ಅದರಲ್ಲಿ ಶೌಚಾಲಯ ಇರುವುದಿಲ್ಲ. ಹೀಗಾಗಿ ಮಹಿಳಾ ಚಾಲಕರು ತಾವು ಶೌಚಕ್ಕೆ ಹೋಗಬೇಕಿದ್ದರೆ ಮೊದಲೇ ಮುಂದಿನ ನಿಲ್ದಾಣದ ಅಧಿಕಾರಿಗಳಿಗೆ ವಾಕಿಟಾಕಿ ಮೂಲಕ ಸಂದೇಶ ರವಾನಿಸಬೇಕು. ಅದು ಬಹಳಷ್ಟು ಜನರ ಕಿವಿಗೆ ಬೀಳುತ್ತದೆ. ಜೊತೆಗೆ ನಿಲ್ದಾಣದಲ್ಲಿ ಇಳಿದು ಹೋಗುವಾಗ ಕೆಲವು ಅಧಿಕಾರಿಗಳು ವಿಚಿತ್ರವಾಗಿ ನಮ್ಮನ್ನು ನೋಡುತ್ತಾರೆ. 

ದೇಶದ ಮೊದಲ ವಂದೇ ಭಾರತ್‌ ಮೆಟ್ರೋ ರೈಲು, ಸ್ಲೀಪರ್ ಆವೃತ್ತಿ ಪ್ರಾಯೋಗಿಕ ಸಂಚಾರ ಜುಲೈನಲ್ಲಿ ಆರಂಭ

ಇನ್ನು ಕೆಲವು ಕಡೆ ನಿರ್ಜನ ನಿಲ್ದಾಣಗಳಲ್ಲಿ ಹೀಗೆ ಮೊದಲೇ ಮಾಹಿತಿ ನೀಡಿ ಶೌಚಾಲಯಕ್ಕೆ ಹೋಗುವುದು ಸುರಕ್ಷತೆಗೂ ಧಕ್ಕೆ ತರುತ್ತದೆ ಎಂದು ಮಹಿಳಾ ಚಾಲಕರು ತಮ್ಮ ನೋವು ತೋಡಿಕೊಂಡಿದ್ದಾರೆ.ಈ ಸಮಸ್ಯೆಗಳ ಜೊತೆಗೆ ಮಹಿಳಾ ಸಿಬ್ಬಂದಿಗಳಿಗೆ ಶೌಚಾಲಯಕ್ಕೆ ಹೋಗಬೇಕಾದಾಗ ಎಲ್ಲ ಸಂದರ್ಭದಲ್ಲಿ ಅನುಮತಿಯೂ ಸಿಗುವುದಿಲ್ಲ. ಸಮಯ ಉಳಿಸಲು, ಹಿಂದಿನಿಂದ ಪ್ರಮುಖ ರೈಲುಗಳು ಬರುವ ವೇಳೆ ಶೌಚಾಲಯಕ್ಕೆ ಹೋಗದಂತೆ ಅಧಿಕಾರಿಗಳು ತಿಳಿಸುತ್ತಾರೆ ಎಂದು ಝಾನ್ಸಿ ವಿಭಾಗದ ಮಹಿಳಾ ಪೈಲೆಟ್ ತಿಳಿಸಿದ್ದಾರೆ.

ಅಲ್ಲದೇ ಈ ಮುಜಗರದ ಪರಿಸ್ಥಿತಿಯನ್ನು ತಡೆಯುವುದಕ್ಕಾಗಿಯೇ ಹಲವರು ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ನೀರು ಕುಡಿಯುವುದಕ್ಕೆ ಹಿಂದೇಟು ಹಾಕುತ್ತಾರೆ. ಅಲ್ಲದೇ ಕರ್ತವ್ಯದ ವೇಳೆಯಲ್ಲಿಯೂ ನೀರು ಕುಡಿಯುವುದಿಲ್ಲ. ಮಾತ್ರವಲ್ಲದೇ, ನೀರಿನ ಅಂಶ ಇರುವ ಯಾವುದೇ ಪದಾರ್ಥವನ್ನು ಸೇವಿಸುವುದಿಲ್ಲ., ಇದರಿಂದ ಮಹಿಳಾ ಲೋಕೋ ಪೈಲೆಟ್‌ಗಳಿಗೆ ನಿರ್ಜಲೀಕರಣ ಸೇರಿದಂತೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ ಎಂದು ಮಹಿಳಾ ಚಾಲಕರು ಹೇಳಿದ್ದಾರೆ.

Latest Videos
Follow Us:
Download App:
  • android
  • ios