2020 ರ ಜನವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್‌-19 ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವ ಮುನ್ನವೇ, ಸಾಂಕ್ರಾಮಿಕದ ನಿರ್ವಹಣೆಯ ವಿವಿಧ ಅಂಶಗಳ ಮೇಲೆ ಸಾಕಷ್ಟು ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಮನ್ಸುಖ್‌ ಮಾಂಡವಿಯಾ ಹೇಳಿದ್ದಾರೆ.

ನವದೆಹಲಿ (ಫೆ.24): ಸರಿಯಾದ ಸಮಯದಲ್ಲಿ ಸೂಕ್ತವಾಗಿ ಕೋವಿಡ್‌-19 ನಿಯಂತ್ರಣದ ಕ್ರಮಗಳನ್ನು ಭಾರತ ಸರ್ಕಾರ ಕೈಗೊಂಡಿದ್ದರಿಂದ, ಅಗತ್ಯ ಸಮಯದಲ್ಲಿ ದೇಶವ್ಯಾಪಿ ಉಚಿತವಾಗಿ ಲಸಿಕೆ ಪೂರೈಕೆ ಮಾಡಲು ಸಾಧ್ಯವಾಗಿದ್ದರಿಂದ ಅಂದಾಜು 34 ಲಕ್ಷ ಜನರ ಜೀವ ಉಳಿಸಲು ಸಾಧ್ಯವಾಗಿತ್ತು ಎಂದು ಸ್ಟ್ಯಾನ್‌ಫೋರ್ಡ್‌ ವಿವಿ ತನ್ನ ವರದಿಯಲ್ಲಿ ತಿಳಿಸಿದೆ. ಕೋವಿಡ್ ಲಸಿಕೆ ಅಭಿಯಾನವು 18.3 ಶತಕೋಟಿ ಅಮೆರಿಕನ್‌ ಡಾಲರ್‌ ನಷ್ಟವನ್ನು ತಡೆಯುವ ಮೂಲಕ ಧನಾತ್ಮಕ ಆರ್ಥಿಕ ಪರಿಣಾಮವನ್ನು ನೀಡಿದೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಸ್ಪರ್ಧಾತ್ಮಕ ಸಂಸ್ಥೆಯು 'ಹೀಲಿಂಗ್ ದಿ ಎಕಾನಮಿ: ಎಸ್ಟಿಮೇಟಿಂಗ್ ದ ಎಕನಾಮಿಕ್ ಇಂಪ್ಯಾಕ್ಟ್ ಆನ್ ಇಂಡಿಯಾಸ್ ವ್ಯಾಕ್ಸಿನೇಷನ್ ಆಂಡ್ ರಿಲೇಟೆಡ್‌ ಇಶ್ಯೂ' ಎಂಬ ಶೀರ್ಷಿಕೆಯ ಕೃತಿಯನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಜನವರಿ 2020 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್‌-19 ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವ ಮುನ್ನವೇ, ಸಾಂಕ್ರಾಮಿಕ ರೋಗದ ನಿಯಂತ್ರಣ ಹಾಗೂ ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಸಮರ್ಪಕವಾದ ಯೋಜನೆಗಳನ್ನು ಜಾರಿಗೆ ತರಲಾಗಿತ್ತು ಎಂದು ಮಾಂಡವಿಯಾ ಹೇಳಿದ್ದಾರೆ.


ವ್ಯಾಕ್ಸಿನೇಷನ್ ಮತ್ತು ಸಂಬಂಧಿತ ವಿಷಯಗಳ ಆರ್ಥಿಕ ಪರಿಣಾಮದ ಕುರಿತು ಅವರು 'ದಿ ಇಂಡಿಯಾ ಡೈಲಾಗ್' ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು. 'ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು, ಸಂಪೂರ್ಣ ಸರ್ಕಾರ ಹಾಗೂ ಸಂಪೂರ್ಣ ಸಮಾಜದ ಅಡಿಯಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆಗಳನ್ನು ಕೈಗೊಂಡಿದ್ದೆವು ಎಂದು ಸಚಿವರು ತಿಳಿಸಿದ್ದಾರೆ.

ಕೊರೋನಾ ಬಳಿಕ ದೇಶದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದ ಬಾಬಾ ರಾಮ್‌ದೇವ್‌!

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಫಾರ್ ಕಾಂಪಿಟೇಟಿವ್‌ನೆಸ್‌ ಮತ್ತು ಯುಎಸ್-ಏಷ್ಯಾ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಸೆಂಟರ್ ಈ ಸಂವಾದವನ್ನು ಆಯೋಜನೆ ಮಾಡಿತ್ತು. ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮವಾಗಿ ನಿಯಂತ್ರಣದ ಪಾತ್ರವನ್ನು ಈ ವರದಿ ತಿಳಿಸುತ್ತದೆ. ಕೇವಲ ಕ್ವಾರಂಟೈನ್‌ ಮಾಡುವಂಥ ಟಾಪ್‌ ಡೌನ್‌ ವಿಧಾನದ ವಿರುದ್ಧವಾಗಿ, ವೈರಸ್‌ಅನ್ನು ಒಳಗೊಂಡಿರುವ ವ್ಯಕ್ತಿಗಳೊಂದಿಗೆ ಸರ್ಕಾರದ ಬಾಟಮ್‌ ಅಪ್‌ ವಿಧಾನವು ಹೇಗೆ ನಿರ್ಣಾಯಕವಾಗಿ ಕೆಲಸ ಮಾಡಿತು ಎನ್ನುವುದನ್ನೂ ವರದಿ ಹೈಲೈಟ್‌ ಮಾಡಿದೆ.

ಭಾರತದ ಮೊದಲ ಕೋವಿಡ್ ಪತ್ತೆಯಾಗಿ 3 ವರ್ಷ, ಸರಿಯಾಗಿ ನೆನಪಿದೆ ಕೊರೋನಾ ಸಂಕಷ್ಟ!

ಇದಲ್ಲದೆ, ಸಂಪರ್ಕ ಪತ್ತೆಹಚ್ಚುವಿಕೆ, ಸಾಮೂಹಿಕ ಪರೀಕ್ಷೆ, ಹೋಮ್ ಕ್ವಾರಂಟೈನ್, ಅಗತ್ಯ ವೈದ್ಯಕೀಯ ಉಪಕರಣಗಳ ವಿತರಣೆ, ಆರೋಗ್ಯ ಮೂಲಸೌಕರ್ಯಗಳ ಪುನರುಜ್ಜೀವನ ಮತ್ತು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮಧ್ಯಸ್ಥಗಾರರ ನಡುವೆ ನಿರಂತರ ಸಮನ್ವಯ ಮುಂತಾದ ನೆಲಮಟ್ಟದಲ್ಲಿ ದೃಢವಾದ ಕ್ರಮಗಳನ್ನು ವರದಿಯು ಗಮನಾರ್ಹವಾಗಿ ಗಮನಿಸುತ್ತದೆ. 
ಇದು ಭಾರತದ ಕಾರ್ಯತಂತ್ರದ ಮೂರು ಮೂಲಾಧಾರಗಳಾದ ನಿಯಂತ್ರಣ, ಪರಿಹಾರ ಪ್ಯಾಕೇಜ್ ಮತ್ತು ಲಸಿಕೆ ಮ್ಯಾನೇಜ್‌ಮೆಂಟ್‌ಅನ್ನು ವಿವರಿಸುತ್ತದೆ.