ಕೊರೋನಾ ಬಳಿಕ ದೇಶದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದ ಬಾಬಾ ರಾಮ್‌ದೇವ್‌!

ಕೊರೋನಾವೈರಸ್‌ ಬಂದ ಬಳಿಕ ದೇಶದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆಯಲ್ಲಿ ವಿಪರೀತವಾಗಿ ಏರಿಕೆಯಾಗಿದೆ. ಅದರೊಂದಿಗೆ ಹೆಚ್ಚಿನ ವ್ಯಕ್ತಿಗಳು ದೃಷ್ಟಿ ಕಳೆದುಕೊಂಡಿದ್ದಾರೆ. ಕಿವುಡರ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್‌ ಹೇಳಿದ್ದಾರೆ.

Cancer Patients Increased In India After Corona says baba Ramdev san

ಪಣಜಿ (ಫೆ.18): ದೇಶದಲ್ಲಿ ಕೊರೋನಾವೈರಸ್‌ ಸಾಂಕ್ರಾಮಿಕ ಬಂದ ಬಳಿಕ ಕ್ಯಾನ್ಸರ್‌ ರೋಗಿಗಳಲ್ಲಿ ವಿಪರೀತವಾಗಿ ಏರಿಕೆಯಾಗಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್‌ ಹೇಳಿದ್ದಾರೆ. ಶನಿವಾರ ಗೀವಾದ ಮಿರಾಮರ್‌ ಬೀಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ರಾಮ್‌ದೇವ್‌ ಈ ಹೇಳಿಕೆ ನೀಡಿದ್ದಾರೆ. ನೀವು ಬೇಕಾದರೆ ಗಮನಿಸಿ ನೋಡಿ ಕೊರೋನಾವೈರಸ್‌ ಬಂದ ಬಳಿಕ ದೇಶದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ. ಅದರೊಂದಿಗೆ ದೃಷ್ಟಿ ಕಳೆದುಕೊಂಡವರು, ಶ್ರವಣ ಸಾಮರ್ಥ್ಯ ಕಳೆದುಕೊಂಡವರ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದಿದ್ದಾರೆ. ಗೋವಾದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಮೂರು ದಿನಗಳ ಯೋಗ ಶಿಬಿರವನ್ನು ಆಯೋಜಿಸಲಾಗಿದ್ದು, ರಾಮ್‌ದೇವ್ ಅವರೊಂದಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ವೇದಿಕೆಯಲ್ಲಿದ್ದರು. ಈ ವೇಳೆ ಮಾತನಾಡಿದ ರಾಮ್‌ದೇವ್‌, ಗೋವಾ ಸ್ವಾಸ್ಥ್ಯದ ಕೇಂದ್ರವಾಗಬೇಕು ಎಂಬ ಕನಸು ನನಗೂ ಇದೆ. ಭಾರತವು ಸ್ವಾಸ್ಥ್ಯದ ಜಾಗತಿಕ ಕೇಂದ್ರವಾಗಬೇಕು ಎಂಬ ಕನಸು ಪ್ರಧಾನಿ ನರೇಂದ್ರ ಮೋದಿಯವರಿಗೂ ಇದೆ ಎಂದರು.

ಗೋವಾಗೆ ಬರೀ ಟೂರ್‌ಗಾಗಿ ಬರಬೇಡಿ: ಪ್ರವಾಸಿಗರು ಕೇವಲ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಮಾತ್ರವಲ್ಲದೆ ರಕ್ತದೊತ್ತಡ, ಶುಗರ್, ಥೈರಾಯ್ಡ್, ಕ್ಯಾನ್ಸರ್ ಮತ್ತಿತರ ಕಾಯಿಲೆಗಳ ಚಿಕಿತ್ಸೆಗಾಗಿಯೂ ಗೋವಾಕ್ಕೆ ಬರಬೇಕು ಎಂದು ರಾಮದೇವ್ ಹೇಳಿದರು. ಯೋಗ, ಆಯುರ್ವೇದ, ಸನಾತನ, ಆಧ್ಯಾತ್ಮದ ಪ್ರವಾಸೋದ್ಯಮ ಕೇಂದ್ರವಾಗಿ ಗೋವಾ ರೂಪುಗೊಳ್ಳಬೇಕು ಎಂದರು. ರಾಜ್ಯದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವ ಎರಡು ತಿಂಗಳಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಬಹುದು. ಪ್ರಪಂಚದಾದ್ಯಂತ ಜನರು ಇಲ್ಲಿಗೆ ಆ ಸಮಯದಲ್ಲಿ ಬರಬೇಕು. ಹೊಟೇಲ್ ಉದ್ಯಮಕ್ಕೆ ‘ಪಂಚಕರ್ಮ’ ಚಿಕಿತ್ಸಾ ಪದ್ಧತಿಯನ್ನು ಪರಿಚಯಿಸಿ ಪ್ರವಾಸಿಗರಿಗೆ ಯೋಗವನ್ನು ಪರಿಚಯಿಸಬೇಕು ಎಂದು ಒತ್ತಾಯಿಸಿದರು. ಬರೀ ತಿನ್ನುವುದು ಹಾಗೂ ಕುಡಿಯುವ ಕ್ಷೇತ್ರವಾಗಿ ಗೋವಾ ಉಳಿದುಕೊಳ್ಳಬಾರದು. ಬದುಕೆಂದರೆ ಬರೀ ತಿಂದು, ಕುಡಿದು ಸಾಯೋದಲ್ಲ ಎಂದು ರಾಮ್‌ದೇವ್‌ ಹೇಳಿದ್ದಾರೆ.

'5 ಬಾರಿ ನಮಾಜ್‌ ಮಾಡು, ಬೇಕಾದ ಪಾಪಗಳನ್ನ ಮಾಡು.. ಮುಸ್ಲಿಮರಿಗೆ ಇದನ್ನೇ ಕಲಿಸೋದು' ಎಂದ ಬಾಬಾ ರಾಮ್‌ದೇವ್‌!

ಗೋವಾವನ್ನು ಯೋಗಭೂಮಿ ಮಾಡುತ್ತೇನೆ ಎಂದ ಸಿಎಂ ಪ್ರಮೋದ್‌ ಸಾವಂತ್‌: ಈ ಸಂದರ್ಭದಲ್ಲಿ ಸಿಎಂ ಸಾವಂತ್ ಅವರು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ರಾಮ್‌ದೇವ್ ಅವರ ಮಾರ್ಗದರ್ಶನದ ತಂಡ ನಡೆಸಿದ ಸಂಶೋಧನೆಯನ್ನು ಶ್ಲಾಘಿಸಿದರು. ಗೋವಾವನ್ನು ‘ಯೋಗಭೂಮಿ’ಯನ್ನಾಗಿ ಪರಿವರ್ತಿಸಲು ರಾಜ್ಯ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದರು. ಕಾರ್ಯಕ್ರಮದ ಬಳಿಕ ಬಾಬಾ ರಾಮ್‌ದೇವ್‌ ಮಿರಾಮರ್‌ ಬೀಚ್‌ನಲ್ಲಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರೊಂದಿಗೆ ಯೋಗ ಕೂಡ ಮಾಡಿದರು. ಸಮುದ್ರ ತೀರದಲ್ಲಿ ವಿಶೇಷವಾಗಿ ನಿರ್ಮಿಸಿದ ವೇದಿಕೆಯಲ್ಲಿ ಯೋಗಾಸನಗಳನ್ನು ಪ್ರದರ್ಶಿಸಿದರು. ಬಳಿಕ ಕಡಲತೀರದಲ್ಲಿ ಕೆಲ ಹೊತ್ತು ಓಡಿದರು. ಈ ವೇಳೆ ಸಿಎಂ ಸಾವಂತ್ ಕೂಡ ರಾಮ್‌ದೇವ್ ಅವರ ಜೊತೆಯಲ್ಲಿದ್ದರು.

 

ಬೂದಿ ಎಂದು ಲೇವಡಿ ಮಾಡ್ತೀರಲ್ಲ, ಅಮೆಜಾನ್‌ನಲ್ಲಿ 1 ಕೆಜಿಗೆ 1800ರೂಪಾಯಿ ಎಂದ ಬಾಬಾ ರಾಮ್‌ದೇವ್‌!

ಅಶ್ಲೀಲ ಚಿತ್ರಗಳು, ಧಾರವಾಹಿಗಳ ಕೆಟ್ಟ ದೃಶ್ಯಗಳಿಂದ ಯುವಕರು ಹಾಳು:  ದೇಶದ ಯುವಕರು ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಶ್ಲೀಲ ಕಂಟೆಂಟ್ ಮತ್ತು ಅಸಭ್ಯ ದೃಶ್ಯಗಳನ್ನು ಕಂಡು ಹಾಳಾಗುತ್ತಿದ್ದಾರೆ ಇದು ತೀವ್ರ ಕಳವಳಕಾರಿ ವಿಷಯ ಎಂದು ಯೋಗ ಗುರು ರಾಮದೇವ್ ಹೇಳಿದ್ದಾರೆ. 'ಯಾವುದೇ ಔಷಧವಿಲ್ಲದೆ ಸ್ವಾಭಾವಿಕವಾಗಿ ಆರೋಗ್ಯಕರ ಜೀವನ ನಡೆಸಲು ಜನರಿಗೆ ಮಾರ್ಗದರ್ಶನ ನೀಡುವುದು ನನ್ನ ಗುರಿಯಾಗಿದೆ. ಸಮಾಜದಲ್ಲಿ ಅಶ್ಲೀಲತೆ ಹರಡುತ್ತಿರುವ ರೀತಿಯ ಬಗ್ಗೆ ನನಗೂ ಕಾಳಜಿ ಇದೆ... ಪೋರ್ನ್ ಚಿತ್ರಗಳು ನಿರ್ಮಾಣವಾಗುತ್ತಿವೆ... ಚಲನಚಿತ್ರಗಳು ಮತ್ತು ಧಾರಾವಾಹಿಗಳು ಸಹ ಯುವಕರನ್ನು ದಾರಿ ತಪ್ಪಿಸುವಷ್ಟು ಅಸಭ್ಯತೆಯನ್ನು ಹೊಂದಿವೆ. ಅಂತಹ ವಿಷಯಗಳಿಗೆ ಯುವಕರು ದಾಸರಾಗಬಾರದು ಆ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು' ಎಂದು ರಾಮ್‌ದೇವ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios