Asianet Suvarna News Asianet Suvarna News

ಪುಟ್ಟ ವಯಸ್ಸಿನ ವಿಧವೆಗೆ ಕೀರ್ತಿ ಚಕ್ರ ನೀಡಿ ಸಂತೈಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

ಕ್ಯಾಪ್ಟನ್‌ ಆನ್ಶುಮನ್‌ ಸಿಂಗ್‌ ಅವರ ಪತ್ನಿ ಸೃಷ್ಟಿ ಸಿಂಗ್‌ ಗಂಡನ ಮರಣೋತ್ತರ ಕೀರ್ತಿ ಚಕ್ರ ಪಡೆದುಕೊಂಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಇಂದು ವೈರಲ್‌ ಆಗಿದೆ.
 

srishti Singh widow of Captain Anshuman Singh received Kirti Chakra on behalf of her husband san
Author
First Published Jul 5, 2024, 10:57 PM IST

ಬೆಂಗಳೂರು (ಜು.5): ಫ್ರೀಡಮ್‌ ಈಸ್‌ ನಾಟ್‌ ಫ್ರೀ.. ಅಂದರೆ ಸ್ವಾತಂತ್ರ್ಯ ಅನ್ನೋದು ಎಂದಿಗೂ ಉಚಿತವಾಗಿ ಸಿಗೋದಿಲ್ಲ. ಅದಕ್ಕಾಗಿ ತ್ಯಾಗ ಬಲಿದಾನಗಳ ಎಷ್ಟೋ ಆಗುತ್ತವೆ. ಕೆಲವೊಮ್ಮೆ ಮನೆಯಲ್ಲಿ ಕುಂತು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವವರಿಗೆ ಅದು ಅರ್ಥವೂ ಆಗೋದಿಲ್ಲ. ಶುಕ್ರವಾರ ರಾಷ್ಟ್ರಪತಿ ಭವನ ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು. ಮರಣೋತ್ತರವಾಗಿ ಕೀರ್ತಿ ಚಕ್ರ ಪುರಸ್ಕಾರಕ್ಕೆ ಭಾಜನರಾದ ಕ್ಯಾಪ್ಟನ್‌ ಅನ್ಶುಮನ್‌ ಸಿಂಗ್‌ ಕುಟುಂಬದ ಹೆಸರು ಕರೆಯುತ್ತಿದ್ದಂತೆ, ಚಿನ್ನದ ಬಣ್ಣದ ಅಂಚು ಹೊಂದಿರುವ ಬಿಳಿ ಸೀರೆಯುಟ್ಟು ಪುಟ್ಟ ವಯಸ್ಸಿನ ಹುಡುಗಿ ತನ್ನ ತಾಯಿಯ ಜೊತೆ ಆಗಮಿಸಿದಳು. ಆಕೆ ಪ್ರಶಸ್ತಿ ಸ್ವೀಕರಿಸಲು ನಡೆದುಕೊಂಡು ಬರುತ್ತಿರುವಾಗಲೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಮುಖದಲ್ಲೂ ಅಚ್ಚರಿ ಕಂಡಿತು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬಾಲಿ ಬದುಕಬೇಕಾದ ಹುಡುಗಿ ವಿಧವೆಯಾಗಿ ಬಿಟ್ಟಳಲ್ಲ ಎನ್ನುವ ನೋವು ಕೂಡ ಅವರಲ್ಲಿ ಕಾಣುತ್ತಿತ್ತು. ಬಹುಶಃ ರಾಜ್‌ನಾಥ್‌ ಸಿಂಗ್‌ ಅವರ ಮೊಮ್ಮಗಳಷ್ಟು ವಯಸ್ಸು ಆಕೆಗೆ ಆಗಿರಬಹುದು. ರಾಷ್ಟ್ರಪತಿ ಎದುರಿಗೆ ಬಂದು ನಿಂತಾಗ ಮದುವೆಯಾಗಿ ಬರೀ 5 ತಿಂಗಳಲ್ಲೇ ಗಂಡನನ್ನು ಕಳೆದುಕೊಂಡ ಸೃಷ್ಟಿ ಸಿಂಗ್‌ ಮುಖದಲ್ಲಿ ಶೋಕ ಮಡುಗಟ್ಟಿತ್ತು.

ಗಂಡನ ವೀರತೆಯನ್ನು ನಿರೂಪಕರು ತಿಳಿಸುತ್ತಿರುವಾಗಲೇ ಆಕೆಯ ಕಣ್ಣಲ್ಲಿ ಇನ್ನೇನು ಕಣ್ಣೀರು ಬರುವ ಹಾದಿಯಲ್ಲಿತ್ತು. ಆದರೆ, ಗಟ್ಟಿಗಿತ್ತು ಆಕೆ ಎಲ್ಲವನ್ನು ತಡೆದುಕೊಂಡು ನಿಂತಿದ್ದಳು. ಕೀರ್ತಿಚಕ್ರ ಪುರಸ್ಕಾರ ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಕೆಯ ಬಳಿ ಬಂದು ಪದಕವನ್ನು ಆಕೆಗೆ ಹಸ್ತಾಂತರ ಮಾಡಿದರು. ಹಸ್ತಾಂತರ ಮಾಡಿದ ಬಳಿಕ ಸೃಷ್ಟಿ ಸಿಂಗ್‌ ಅವರ ಕೈಗಳನ್ನು ಹಿಡಿದು ಸಂತೈಸುವ ಪ್ರಯತ್ನ ಮಾಡಿದರು. ಇದಕ್ಕೆ ಸೃಷ್ಟಿ ಸಿಂಗ್‌, ತಲೆ ಸಣ್ಣಗೆ ಅಲ್ಲಾಡಿಸಿದರಷ್ಟೇ. ಬಹುಶಃ ಆಕೆಯನ್ನು ನೋಡಿ ರಾಷ್ಟ್ರಪತಿಗೂ ಅಚ್ಚರಿಯಾಯಿತು. ರಾಷ್ಟ್ರಪತಿಯಾದವರು ಇಂಥ ಪ್ರಶಸ್ತಿಗಳು ಪ್ರದಾನ ಮಾಡುವ ವೇಳೆ ಸಂತೈಸಬೇಕಾದ ಅನಿವಾರ್ಯತವೇ ಇಲ್ಲ. ಇನ್‌ಫ್ಯಾಕ್ಟ್‌ ಅವರು ಹಾಗೆ ಮಾಡಲೂ ಕೂಡದು. ಆದರೆ, ರಾಷ್ಟ್ರಪತಿಗೆ ಹೆಣ್ಣಿನ ಮನಸ್ಸಿನ ಸಂಕಷ್ಟ ಅರಿವಾಯಿತು ಅಂತಾ ಕಾಣುತ್ತದೆ. ಅದಕ್ಕಾಗಿ ತನ್ನ ಮಗಳನ್ನು ಸಂತೈಸುವ ರೀತಿಯಲ್ಲಿ ಆಕೆಗೆ ಸಮಾಧಾನ ಮಾಡಿದರು.

ಕ್ಯಾಪ್ಟನ್‌ ಅನ್ಶುಮನ್‌ ಸಿಂಗ್‌ ನಿಧನರಾದ ಕ್ಷಣ: ಕಳೆದ ವರ್ಷದ ಜುಲೈನಲ್ಲಿ ಲಡಾಕ್‌ನ ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಆರ್ಮಿ ಬಂಕರ್‌ನಲ್ಲಿ ಬೆಂಕಿ ಬಿದ್ದಿತ್ತು. ಶಾರ್ಟ್‌ ಸರ್ಕ್ಯೂಟ್‌ನಿಂದ ಸಾಕಷ್ಟು ಟೆಂಟ್‌ಗಳು ಸುಟ್ಟು ಕರಕಲಾಗಿದ್ದವು. ಈ ಹಂತದಲ್ಲಿ ಸೇನೆಯಲ್ಲಿ ವೈದ್ಯರಾಗಿದ್ದ 26 ವರ್ಷದ ಕ್ಯಾಪ್ಟನ್‌ ಡಾ. ಅನ್ಶುಮನ್‌ ಸಿಂಗ್‌, ತನ್ನ ಸ್ನೇಹಿತರನ್ನು ರಕ್ಷಣೆ ಮಾಡುವುದರೊಂದಿಗೆ ಸಿಯಾಚಿನ್‌ನಲ್ಲಿ ಬದುಕಲು ಬೇಕಾದ ಅಗತ್ಯ ವೈದ್ಯಕೀಯ ವಸ್ತುಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ಆದರೆ, ಇದನ್ನು ರಕ್ಷಣೆ ಮಾಡುವ ಸಮಯಲ್ಲಿ ತೀವ್ರ ಸ್ವರೂಪದಲ್ಲಿ ಅವರು ಬೆಂಕಿಯಿಂದ ಸುಟ್ಟುಹೋಗಿದ್ದರು. ಅನ್ಶುಮನ್‌ರೊಂದಿಗೆ ಇನ್ನೂ ಮೂವರು ಕೂಡ ಬಂಕರ್‌ನ ಒಳಗಿನ ಹೊಗೆ ಹಾಗೂ ಬೆಂಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಏರ್‌ಲಿಫ್ಟ್‌ ಮಾಡಲಾಯಿತಾದರೂ ಅನ್ಶುಮನ್‌ ಚಿಕಿತ್ಸೆಗೆ ಸ್ಪಂದಿಸದೆ ಸಾವು ಕಂಡಿದ್ದರು.

ಗರ್ಲ್‌ಫ್ರೆಂಡ್‌ ಜೊತೆ ಚಕ್ಕಂದವಾಡಿ ಎಸ್ಕೇಪ್‌ ಆದ ಪ್ರಖ್ಯಾತ ನಟ, ದೂರು ದಾಖಲಿಸಿದ ಪ್ರೇಯಸಿ!

ಮೂಲತಃ ಇಂಜಿನಿಯರ್‌ ಆಗಿರುವ ಸೃಷ್ಟಿ ಸಿಂಗ್‌, 2023ರ ಫೆಬ್ರವರಿಯಲ್ಲಿ ಅನ್ಶುಮನ್‌ರನ್ನು ವಿವಾಹವಾಗಿದ್ದರು. ಮೂಲತಃ ಪಂಜಾಬ್‌ನ ಪಠಾನ್‌ಕೋಟ್‌ನವರಾದ ಸೃಷ್ಟಿ ಸಿಂಗ್‌, ಅನ್ಶುಮನ್‌ ಅವರ ಸಹೋದರಿ ಡಾ. ತಾನ್ಯಾ ಸಿಂಗ್‌ ಅವರೊಂದಿಗೆ ನೋಯ್ಡಾದಲ್ಲಿಯೇ ವಾಸವಾಗಿದ್ದಾರೆ.

ಆಗಸ್ಟ್‌ ವೇಳೆಗೆ ಕೇಂದ್ರದ ಮೋದಿ ಸರ್ಕಾರ ಪತನ, ಲಾಲೂ ಪ್ರಸಾದ್‌ ಯಾದವ್‌ ಭವಿಷ್ಯ

Latest Videos
Follow Us:
Download App:
  • android
  • ios