ಬಿಜೆಪಿ ತೊರೆದ ಶ್ರೀರಾಮುಲು ತಂಗಿ ಶಾಂತಾ, ಬಳ್ಳಾರಿ ಬಿಟ್ಟು ಆಂಧ್ರದ ವೈಎಸ್‌ಆರ್‌ನಿಂದ ಲೋಕಸಭೆಗೆ ಸ್ಪರ್ಧೆ!
ಕರ್ನಾಟಕ ಚುನಾವಣೆಯಲ್ಲಿ ಸೋಲುಂಡ ಮಾಜಿ ಸಚಿವ ಶ್ರೀರಾಮುಲು ತಂಗಿ ಜೆ.ಶಾಂತಾ ಅವರು ಲೋಕಸಭಾ ಚುನಾವಣೆಗೆ ಮುಂಚೆಯೇ ಬಿಜೆಪಿ ತೊರೆದಿದ್ದಾರೆ.
ಬಳ್ಳಾರಿ (ಜ.02): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತವರು ಕ್ಷೇತ್ರದಲ್ಲಿಯೇ ಸೋಲುಂಡ ಮಾಜಿ ಸಚಿವ ಶ್ರೀರಾಮುಲು ಅವರ ತಂಗಿ ಮಾಜಿ ಸಂಸದೆ ಜೆ.ಶಾಂತಾ ಅವರು ಲೋಕಸಭಾ ಚುನಾವಣೆಯ ಬೆನ್ನಲ್ಲಿಯೇ ಬಿಜೆಪಿಯನ್ನು ತೊರೆದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣವನ್ನು ಬಿಜೆಪಿ ವಿರೋಧಿಸುತ್ತದೆಯಾದರೂ 2009ರಲ್ಲಿ ಶ್ರೀರಾಮುಲು ಅವರ ಸಹೋದರಿ ಜೆ.ಶಾಂತಾ ಅವರಿಗೆ ಬಳ್ಳಾರಿ ಲೋಕಸಭೆಯ ಎಸ್‌ಟಿ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲ್ಲಿಸಿ ಸಂಸತ್‌ಗೆ ಕಳುಹಿಸಲಾಗಿತ್ತು. ಇದಾದ ನಂತರ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ನಡುವಿನ ವೈಮನಸ್ಸಿನ ನಡುವೆ ಮತ್ತೊಮ್ಮೆ ಜೆ.ಶಾಂತಾ ಅವರು ಬಳ್ಳಾರಿಯಿಂದ ಸ್ಪರ್ಧೆ ಮಾಡಿದರೂ ಅವರಿಗೆ ಗೆಲುವು ಸಿಕ್ಕಿರಲಿಲ್ಲ. ಈಗ ಪುನಃ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿರುವ ಮಾಜಿ ಸಂಸದೆ ಜೆ. ಶಾಂತಾ ಅವರು ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಯಿಂದ ಸ್ಪರ್ಧಿಸಿ ಸೋತು ಸುಣ್ಣವಾಗಿರುವ ಅಣ್ಣ ಶ್ರೀರಾಮುಲು ಇರುವ ಪಕ್ಷವನ್ನು ತೊರೆದಿದ್ದಾರೆ.
ಮಗಳ ಮದುವೆ ಸ್ವಾಗತ ಮೆರವಣಿಗೆಯಲ್ಲಿ ಶ್ರೀರಾಮುಲು ಭರ್ಜರಿ ಡ್ಯಾನ್ಸ್ ವಿಡಿಯೋ ವೈರಲ್!
ಆಂಧ್ರದಲ್ಲಿ ವೈಎಸ್‌ಆರ್ ಸೇರ್ಪಡೆ: ತವರೂರು ಬಳ್ಳಾರಿಯಿಂದ ಸ್ಪರ್ಧಿಸಿ ರಾಜಕೀಯ ನೆಲೆ ಕಂಡುಕೊಂಡಿದ್ದ ಜೆ. ಶಾಂತಾ ಈಗ, ರಾಜ್ಯದಲ್ಲಿ ತಮಗೆ ನೆಲೆ ಇಲ್ಲವೆಂದು ಖಚಿತವಾಗುತ್ತಿದ್ದಂತೆ ಅವರು ಬಿಜೆಪಿ ಹಾಗೂ ಕರ್ನಾಟಕ ರಾಜ್ಯವನ್ನೇ ತೊರೆದು ಆಂಧ್ರಪ್ರದೇಶ ರಾಜಕಾರಣದತ್ತ ವಾಲಿದ್ದಾರೆ. ಆಂಧ್ರ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷ ವೈಎಸ್‌ಆರ್ ಕಾಂಗ್ರೆಸ್ ಪ್ರಭಲವಾಗಿದ್ದು, ಈ ಸ್ಥಳೀಯ ಪಕ್ಷದಡಿಯೇ ಸ್ಪರ್ಧೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆದ್ದರಿಂದ, ವೈಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕರೂ ಆಗಿರುವ ಆಂಧ್ರಪ್ರದೇಶದ ಮುಖ್ಯಂತ್ರಿ ವೈ.ಎಸ್. ಜಗನ್ ಅವರ ಸಮ್ಮುಖದಲ್ಲಿ ವೈಎಸ್‌ಆರ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಭಿಕ್ಷೆ ಬೇಡುವ ಬಾಲಕಿಯನ್ನೂ ಬಿಡದೇ ಕಾರಿನಲ್ಲಿ ಕೈಕಾಲು ಕಟ್ಟಿ ಎತ್ತಾಕೊಂಡೋದ ಕೇರಳದ ಕಾಮಿಷ್ಟರು!
ಈ ಕುರಿತು ಶ್ರೀರಾಮುಲು ಸಹೋದರಿ ವೈಎಸ್ ಆರ್ ಸೇರ್ಪಡೆ ಕುರಿತು ಕಳೆದ ವಾರವೇ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. ಈಗ ವೈಎಸ್‌ಆರ್ ಸೇರ್ಪಡೆಯಾಗಿರುವ ಜೆ. ಶಾಂತಾ ಆಂಧ್ರಪ್ರದೇಶ ರಾಜ್ಯದ ಹಿಂದೂಪುರ ಅಥವಾ ಅನಂತಪುರ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಆದ್ದರಿಂದ ತವರು ಮನೆ ಬಳ್ಳಾರಿ ತೊರೆದು ಗಂಡನ ಮನೆ ಆಂಧ್ರಕ್ಕೆ ತೆರಳಿದ್ದಾರೆ. ಈ ಮೂಲಕ ಮಾಜಿ ಸಂಸದೆ ಜೆ. ಶಾಂತಾ ಆಂಧ್ರಪ್ರದೇಶ ರಾಜ್ಯದಿಂದ ಎರಡನೇ ರಾಜಕೀಯ ಇನ್ಸಿಂಗ್ಸ್ ಪ್ರಾರಂಭ ಮಾಡಲು ಮುಂದಾಗಿದ್ದಾರೆ.