Asianet Suvarna News Asianet Suvarna News

ಮಗಳ ಮದುವೆ ಸ್ವಾಗತ ಮೆರವಣಿಗೆಯಲ್ಲಿ ಶ್ರೀರಾಮುಲು ಭರ್ಜರಿ ಡ್ಯಾನ್ಸ್ ವಿಡಿಯೋ ವೈರಲ್!

ಗಣಿನಾಡು ಬಳ್ಳಾರಿಯ ಪ್ರಭಾವಿ ರಾಜಕಾರಣಿಯಾಗಿರುವ ಮಾಜಿ ಸಚಿವ ಬಿ ಶ್ರೀರಾಮುಲು ತಮ್ಮ ಪುತ್ರಿಯ ಮದುವೆಯ ಸ್ವಾಗತ ಮೆರವಣಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. 

Former Minister Sriramulu sakkat dance in Daughter Wedding at bellary video viral rav
Author
First Published Dec 10, 2023, 9:06 AM IST

ಬಳ್ಳಾರಿ (ಡಿ.10): ಗಣಿನಾಡು ಬಳ್ಳಾರಿಯ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಬಿ ಶ್ರೀರಾಮುಲು ಮುದ್ದಿನ ಪುತ್ರಿ ದೀಕ್ಷಿತಾ ಮದುವೆ ಅದ್ಧೂರಿಯಾಗಿ ನಡೆಯಿತು. ಶ್ರೀರಾಮುಲು ಕುಟುಂಬದ ಮದುವೆ ಎಂದರೆ ಕೇಳಬೇಕೇ? ವೈಭವೋಪೇತವಾಗಿ ನಡೆದ ಪುತ್ರಿಯ ಮದುವೆ ಸ್ವಾಗತ ಕಾಕಾರ್ಯಕ್ರಮದ ಸಂಭ್ರಮದಲ್ಲಿ ಸ್ವತಃ ಶ್ರೀರಾಮುಲು ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದರು.

Former Minister Sriramulu sakkat dance in Daughter Wedding at bellary video viral rav

ಮದುವೆ ಕಾರ್ಯಕ್ರಮ ಬಳಿಕ ಬಳ್ಳಾರಿಯ ಆಹಂಬಾವಿ ನಿವಾಸ ಬಳಿ ಪುತ್ರಿ - ಅಳಿಯ ಅದ್ದೂರಿ ಸ್ವಾಗತ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀರಾಮುಲು ಕುಟುಂಬಸ್ಥರು, ಸಂಬಂಧಿಕರು ಆಪ್ತರು ಭಾಗಿಯಾಗಿದ್ದರು. ಈ ವೇಳೆ ಹಾಡೊಂದಕ್ಕೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ ಶ್ರೀರಾಮುಲು. ಶ್ರೀರಾಮುಲು ಡ್ಯಾನ್ಸ್ ಗೆ ಫೀದಾ ಆದ ಅಭಿಮಾನಿಗಳು. ಆಪ್ತರು ಗೆಳೆಯರು ಶ್ರೀರಾಮುಲುಗೆ ಸಾಥ್ ನೀಡಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. 

Former Minister Sriramulu sakkat dance in Daughter Wedding at bellary video viral rav

ಡಿ.7 ರಂದು ಬೆಂಗಳೂರಿನಲ್ಲಿ ನಡೆದ ರಾಮುಲು ಪುತ್ರಿ ದೀಕ್ಷಿತಾ ಹಾಗೂ ವಿನಯ್ ವಿವಾಹ. ವಿವಾಹ ಬಳಿಕ ಬಳ್ಳಾರಿಗೆ ಆಗಮಿಸಿದ ನೂತನ ವಧು -ವರರಿಗೆ ಕುಟುಂಬಸ್ಥರು, ಬಂಧುಬಳಗದಿಂದ ಅದ್ದೂರಿ ಸ್ವಾಗತ. ಬಳ್ಳಾರಿಯ ಎಸ್ಪಿ ಸರ್ಕಲ್‌ನಲ್ಲಿ ರಾಮುಲು ಪುತ್ರಿ ಹಾಗೂ ಅಳಿಯನಿಗೆ ಕ್ರೇನ್ ಮೂಲಕ ಹಾರ ಹಾಕಿ ಸ್ವಾಗತಿಸಿದ ಅಭಿಮಾನಿಗಳು. ಈ ವೇಳೆ ಕುಣಿದು ಕುಪ್ಪಳಿಸಿದರು. 

Former Minister Sriramulu sakkat dance in Daughter Wedding at bellary video viral rav

Follow Us:
Download App:
  • android
  • ios