Asianet Suvarna News Asianet Suvarna News

ಭಿಕ್ಷೆ ಬೇಡುವ ಬಾಲಕಿಯನ್ನೂ ಬಿಡದೇ ಕಾರಿನಲ್ಲಿ ಕೈಕಾಲು ಕಟ್ಟಿ ಎತ್ತಾಕೊಂಡೋದ ಕೇರಳದ ಕಾಮಿಷ್ಟರು!

ಕಾರಿನ ಬಳಿ ಭಿಕ್ಷೆ ಬೇಡುತ್ತಾ ಬಂದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ್ದ ಕೇರಳದ ಕಾಮುಕರನ್ನು ಮಧುವನಹಳ್ಳಿ ಗ್ರಾಮಸ್ಥರು ಹಿಡಿದು ಧರ್ಮದೇಟು ಕೊಟ್ಟಿದ್ದಾರೆ.

Kollegal begging minor girl was Abducted by Kerala kidnappers sat
Author
First Published Jan 2, 2024, 7:28 PM IST

ಚಾಮರಾಜನಗರ (ಜ.02): ಕೇರಳದಿಂದ ಬಂದ ನಾಲ್ಕು ಯುವಕರ ಗುಂಪೊಂದು ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ವೇಗವಾಗಿ ಹೋಗುವಾಗ ಗ್ರಾಮವೊಂದರಲ್ಲಿ ಕಾರು ಅಪಘಾತ ಮಾಡಿದ್ದು, ಅಲ್ಲಿ ಅಪ್ರಾಪ್ತ ಹುಡುಗಿ ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ, ಕಾರಿನಲ್ಲಿದ್ದ ಎಲ್ಲ ಯುವಕರಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು ಅವರನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಕಾರಿನ ಬಳಿ ಬಿಕ್ಷೆ ಬೇಡಲು ಬಂದ ಅಪ್ರಾಪ್ತ ಹುಡುಗಿಯ ಅಪಹರಣ ಮಾಡಿ ರಾಜ್ಯದ ಗಡಿಯನ್ನು ದಾಟಿ ಎಸ್ಕೇಪ್‌ ಆಗುವಾಗ ಕಾರು ಚಾಲಕನ ಅಚಾತುರ್ಯದಿಂದ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತದ ವಿಚಾರಕ್ಕೆ ಯುವಕರನ್ನು ತರಾಟೆಗೆ ತೆಗೆದುಕೊಂಡಾಗ ಕಾರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಬಾಯಿಗೆ ಬಟ್ಟೆ ತುರುಕಿ ಕೂಡಿ ಹಾಕಿರುವುದು ಕಂಡುಬಂದಿದೆ. ಕೂಡಲೇ, ಗ್ರಾಮದ ಯುವಕರು ಹಾಗೂ ಹಿರಿಯರುಯ ಸೇರಿಕೊಂಡು ಯುವಕರನ್ನು ಕೆಳಗಿಳಿಸಿ ಆ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಅಪಹರಣ ಮಾಡುತ್ತಿದ್ದವರಿಗೆ ಗೂಸಾ ಕೊಟ್ಟಿದ್ದಾರೆ.

ಸ್ಕೂಲ್‌ ಬಸ್‌ ಡ್ರೈವರ್‌ ಅಂಕಲ್‌ ಪ್ರೇಮಪಾಶಕ್ಕೆ ಬಲಿಯಾದ 8ನೇ ಕ್ಲಾಸ್‌ ಹುಡುಗಿ!

ಇನ್ನು ಕಾರಿನೊಳಗೆ ಒದ್ದಾಡುತ್ತಾ ನರಳುತ್ತಿದ್ದ ಬಾಲಕಿಯನ್ನು ರಕ್ಷಣೆ ಮಾಡಿ ವಿಚಾರಿಸಿದಾಗ ತಾನು ಕೊಳ್ಳೇಗಾಲ ಬಸ್‌ ನಿಲ್ದಾಣದ ಬಳಿ ಭಿಕ್ಷೆ ಬೇಡುವಾಗ ಕಾರಿನ ಬಳಿ ಭಿಕ್ಷೆ ಬೇಡಲು ಹೋಗಿದ್ದೆ. ಆಗ, ಇವರು ತನ್ನನ್ನು ಕಾರಿನೊಳಗೆ ಎಳೆದುಕೊಂಡು ಬಾಯಿಗೆ ಬಟ್ಟೆ ತುರುಕಿ ಕರೆದೊಯ್ಯುತ್ತಿದ್ದಾರೆ. ನನ್ನನ್ನು ತರಕ್ಷಣೆ ಮಾಡಿ ಎಂದು ಕೇಳಿಕೊಂಡು ಕಣ್ಣೀರಿಟ್ಟಿದ್ದಾಳೆ. ಆಗ ಗ್ರಾಮಸ್ಥರು ಕೂಡಲೇ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿ ಅವರ ಕುಟುಂಬದೊಂದಿಗೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ.

ಹೈಸ್ಕೂಲ್‌ ವಿದ್ಯಾರ್ಥಿಯೊಂದಿಗೆ ಮುಖ್ಯ ಶಿಕ್ಷಕಿಯ ಖುಲ್ಲಂ ಖುಲ್ಲಾ ರೊಮ್ಯಾನ್ಸ್: ಅಮಾನತು ಮಾಡಿದ ಶಿಕ್ಷಣ ಇಲಾಖೆ!

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮಧುವನಹಳ್ಳಿಯ ಗ್ರಾಮಸ್ಥರು ಕೇರಳದ ಯುವಕರಿಂದ ಅಪಹರಣವಾಗಿದ್ದ ಬಾಲಕಿಯ ರಕ್ಷಣೆ ಮಾಡಿದ್ದಾರೆ. ಈ ಘಟನೆ ಕುರಿತಂತೆ ಕೊಳ್ಳೇಗಾಲ ಪೊಲೀಸ್‌ ಠಾಣೆಯಲ್ಲಿ ಸ್ವತಃ ಗ್ರಾಮದ ಹಿರಿಯ ಮುಖಂಡರೇ ಅಪಹರಣಾಕಾರರ ವಿರುದ್ಧ ದೂರು ದಾಖಲಿಸಿ ಬಾಲಕಿಯ ನೆರವಿಗೆ ನಿಂತಿದ್ದಾರೆ. ಅಪರಾಧ ಪ್ರಕರಣಗಳ ಬಗ್ಗೆ ಎಷ್ಟೇ ಕಾಯ್ದೆ, ಕಾನೂನು ರಚಿಸಿದರೂ ಇಂತಹ ಕಾಮುಕ ಕ್ರಿಮಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇವರಿಗೆ ಕಠಿಣ ಶಿಕ್ಷೆಯನ್ನೇ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಟ್ಟಾರೆ, ಈ ಘಟನೆಯಿಂದ ಬಾಲಕಿಯ ಜೀವ ಹಾಗೂ ಜೀವನವನ್ನು ರಕ್ಷಣೆ ಮಾಡಿದಂತಾಗಿದೆ. 

Follow Us:
Download App:
  • android
  • ios