Asianet Suvarna News Asianet Suvarna News

ರವಿ ಶಂಕರ್ ಗುರೂಜಿ ಹೆಲಿಕಾಪ್ಟರ್ ತುರ್ತು ಭೂಸ್ವರ್ಶ, ಅಪಾಯದಿಂದ ಪಾರು!

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್  ತುರ್ತು ಭೂಸ್ವರ್ಶ ಮಾಡಿದ ಘಟನ ನಡೆದಿದೆ. ತಮಿಳುನಾಡಿನ ಸತ್ಯಮಂಗಲ ಕಾಡಿನ ಬುಡಕಟ್ಟು ಸಮುದಾಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಭೂಸ್ವರ್ಶಿಸಿದೆ. ಹೆಚ್ಚಿನ ವಿವರ ಇಲ್ಲಿದೆ. 

Sri Sri Ravi Shankar Guruji helicopter emergency landed in Sathyamangalam forest tribal area tamil nadu ckm
Author
First Published Jan 25, 2023, 3:47 PM IST

ಈರೋಡು(ಜ.25): ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ  ಹೆಲಿಕಾಪ್ಟರ್ ತುರ್ತು ಭೂಸ್ವರ್ಶ ಮಾಡಿದೆ. ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಿಂದ ತಮಿಳುನಾಡಿನ ತಿರುಪುರ್‌ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸತ್ಯಮಂಗಲ ಸಂರಕ್ಷಿತ ಅರಣ್ಯ ಪ್ರದೇಶದ ವಲಯದಲ್ಲಿ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ಹವಾಮಾನ ಸಮಸ್ಯೆ ಎದುರಿಸಿದೆ. ಹೀಗಾಗಿ ಪೈಲೆಟ್ ಸತ್ಯಮಂಗಲ ಕಾಡಿನ ಉಕಿನಿಯಂ ಬುಡಕಟ್ಟು ಸಮುದಾಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಡಿಂಗ್ ಮಾಡಲಾಗಿದೆ. ರವಿ ಶಂಕರ್ ಗುರೂಜಿ, ಇಬ್ಬರು ಸಹಾಯಕರು ಹಾಗೂ ಓರ್ವ ಪೈಲೆಟ್ ಸುರಕ್ಷಿತವಾಗಿದ್ದಾರೆ.

ಬೆಳಗ್ಗೆ 10.30ರ ಸುಮಾರಿಗೆ ಸತ್ಯಮಂಗಲ ಕಾಡಿನ ವಲಯದಲ್ಲಿ ತೆರಳತ್ತಿದ್ದ ಹೆಲಿಕಾಪ್ಟರ್‌ಗೆ ಹವಾಮಾನ ವೈಪರಿತ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ಪೈಲೆಟ್ ಸಮಯಪ್ರಜ್ಞೆಯಿಂದ ತಕ್ಷಣವೇ ಉಕಿನಿಯಂ ಬಳಿ ಲ್ಯಾಂಡ್ ಮಾಡಿಸಿದ್ದಾರೆ. ಇದರಿಂದ ಯಾವುದೇ ಅಪಾಯ ಸಂಭವಿಸಿಲಿಲ್ಲ. ತಕ್ಷಣವೇ ಸ್ಥಳಕ್ಕೆ ಕದಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಿ ವಡಿವೇಲ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ.

ವಾಹನ ಪೂಜೆಗಾಗಿ ಹೆಲಿಕಾಪ್ಟರನ್ನೇ ದೇಗುಲಕ್ಕೆ ತಂದ ಹೈದರಾಬಾದ್‌ ಉದ್ಯಮಿ

10.30ಗೆ ಉಕಿನಿಯಂ ಬಲಿ ತುರ್ತು ಭೂಸ್ವರ್ಶ ಮಾಡಿದ ಹೆಲಿಕಾಪ್ಟರ್, 11.30ರ ವೇಳೆಗೆ ಮತ್ತೆ ಟೇಕ್ ಆಫ್ ಗೊಂಡಿತು. ಹವಾಮಾನ ಸುಧಾರಣೆ ಬಳಿಕ  ರವಿಶಂಕರ್ ಗುರೂಜಿ, ಇಬ್ಬರು ಸಹಾಯಕರು ಮತ್ತೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮುಂದುವರಿಸಿದರು. ಹೆಲಿಕಾಪ್ಟರ್ ಲ್ಯಾಂಡ್ ಆದ ಬೆನ್ನಲ್ಲೇ ಪಝಂಗುಡಿ ಮಕ್ಕಳ್ ಸಂಘ ಕಾರ್ಯದರ್ಶಿ ಕೆ ರಾಮಸ್ವಾಮಿ, ಸಿಬಿಐ ಶಾಸಕ ಪಿ ಸುಂದರಾಮ್ ಸ್ಥಳಕ್ಕೆ ಆಗಮಿಸಿದ್ದಾರೆ. 

ಕೆಲ ಹೊತ್ತು ಉಕಿನಿಯಂ ಬುಡಕಟ್ಟು ಸಮುದಾಯ ಪ್ರದೇಶದಲ್ಲಿ ಕಳೆದ ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತೆ ಕಾರ್ಯಕ್ರಮಕ್ಕಾಗಿ ಪ್ರಯಾಣ ಮುಂದುವರಿಸಿದರು. ಹವಾಮಾನ ಸುಧಾರಣೆಯಾದ ಬೆನ್ನಲ್ಲೇ ಕಂಟ್ರೂಲ್ ರೂಂನಿಂದ ಗ್ರೀನ್ ಸಿಗ್ನಲ್ ನೀಡಲಾಯಿತು. ಬಳಿಕ ಹೆಲಿಕಾಪ್ಟರ್ ಪ್ರಯಾಣ ಬೆಳೆಸಿತು.

ತಿರುಪುರ ಜಿಲ್ಲೆಯ ಆಂಧ್ರ ಕಪಿಲೇಶ್ವರ ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ರಮಕ್ಕಾಗಿ ರವಿ ಶಂಕರ್ ಗುರೂಜಿ ಖಾಸಗಿ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದರು. ತಿರುಪುರ್ ಜಿಲ್ಲೆಯ ಕಪಿಲೇಶ್ವರ ದೇವಸ್ಥಾನಕ್ಕೆ ಗುರೂಜಿ ಸುರಕ್ಷಿತವಾಗಿ ತಲುಪಿದ್ದಾರೆ. 

ಹವಾಮಾನ ವೈಪರಿತ್ಯ ಕಾರಣ ಹಲವು ನಾಯಕರ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಈ ವೇಳೆ ಪೈಲೆಟ್ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿಸಿದ ಹಲವು ಘಟನೆಗಳು ವರದಿಯಾಗಿದೆ. ಇದೀಗ ರವಿ ಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕೂಡ ತುರ್ತು ಭೂಸ್ಪರ್ಶ ಮಾಡುವು ಮೂಲಕ ಅಪಾಯದಿಂದ ಪಾರಾಗಿದೆ.

Travel Tips: ಹೆಲಿಕಾಪ್ಟರ್ ಸೌಲಭ್ಯವಿರುವ ಧಾರ್ಮಿಕ ಸ್ಥಳಗಳಿವು

ಫೆ.13ರಂದು ಗುಬ್ಬಿ ಎಚ್‌ಎಎಲ್‌ ಹೆಲಿಕಾಪ್ಟರ್‌ ಘಟಕ ಉದ್ಘಾಟಿಸಲಿರುವ ಪ್ರಧಾನಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್‌ನಲ್ಲಿ ನಿರ್ಮಾಣಗೊಂಡಿರುವ ಎಚ್‌ಎಎಲ್‌ ಹೆಲಿಕಾಪ್ಟರ್‌ ಘಟಕವನ್ನು ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಇದೇ ಫೆಬ್ರವರಿ 13ರಂದು ಉದ್ಘಾಟಿಸಲಿದ್ದಾರೆ ಎಂದು ತುಮಕೂರು ಲೋಕಸಭಾ ಸದಸ್ಯರಾದ ಜಿ.ಎಸ್‌. ಬಸವರಾಜು ತಿಳಿಸಿದರು. ತುಮಕೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಚ್‌ಎಎಲ್‌ ಹೆಲಿಕಾಪ್ಟರ್‌ ಘಟಕವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ 2016ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಅವರೇ ಘಟಕವನ್ನು ಉದ್ಘಾಟಿಸಲು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.

Follow Us:
Download App:
  • android
  • ios