ಪಾಕಿಸ್ತಾನದಲ್ಲಿ ಲ್ಯಾಂಡ್ ಆದ ಸ್ಪೈಸ್‌ಜೆಟ್ ವಿಮಾನ, ಇಂಧನ ಸೋರಿಕೆ ಶಂಕೆ!
100 ಜನ ಪ್ರಯಾಣಿಕರಿದ್ದ ಭಾರತದ ಸ್ಪೈಸ್ ಜೆಟ್ ವಿಮಾನ ಪಾಕಿಸ್ತಾನದಲ್ಲಿ ಕ್ರ್ಯಾಶ್ ಲ್ಯಾಂಡಿಂಗ್ ಆಗಿರುವ ಬಗ್ಗೆ ವರದಿಯಾಗಿದೆ. ವಿಮಾನದ ಪೈಲಟ್ ಇಂಧನ ಸೋರಿಕೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾನೆ ಎಂದು ವರದಿಯಾಗಿದೆ.
ನವದೆಹಲಿ (ಜುಲೈ.5): ಭಾರತದ ಸ್ಪೈಸ್ ಜೆಟ್ (SpiceJet) ವಿಮಾನ ಪಾಕಿಸ್ತಾನದಲ್ಲಿ (Pakistan) ಮುನ್ನೆಚ್ಚರಿಕೆಯ ಲ್ಯಾಂಡಿಗ್ ಆಗಿದೆ. ಪಾಕಿಸ್ತಾನದ ಕರಾಚಿ ಇಂಟರ್‌ನ್ಯಾಷನಲ್ ವಿಮಾನನಿಲ್ದಾಣದಲ್ಲಿ (Karachi International Airport) ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ಲ್ಯಾಂಡ್ ಆಗಿದೆ.
ಭಾರತೀಯ ವಿಮಾನಯಾನ ಕಂಪನಿ ಸ್ಪೈಸ್ ಜೆಟ್‌ನ ವಿಮಾನ ಸಂಖ್ಯೆ SG. 11, ಬೋಯಿಂಗ್ 737 ಮ್ಯಾಕ್ಸ್- 8 ದೆಹಲಿಯಿಂದ (New Delhi) ದುಬೈಗೆ (Dubai) ತೆರಳುತ್ತಿತ್ತು. ಬಲೂಚಿಸ್ತಾನ್ ಪ್ರದೇಶದ ಮೇಲೆ 3600 ಅಡಿ ಎತ್ತರದಲ್ಲಿ ಒಂದು ತಾಂತ್ರಿಕ ಕಾರಣದಿಂದಾಗಿ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ 150 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
ಕಳೆದ ಮೂರು ತಿಂಗಳಿನಲ್ಲಿ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ತೊಂದರೆ ಎದುರಿಸಿದ್ದು ಇದು 8ನೇ ಬಾರಿಯಾಗಿದೆ. ಇದರ ಬೆನ್ನಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ಸ್ಫೈಸ್ ಜೆಟ್ ವಿಮಾನದ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತಲಾಗಿದೆ.
ಜೂನ್ 19 ರಂದು 185 ಪ್ರಯಾಣಿಕರಿದ್ದ ಸ್ಫೈಸ್ ಜೆಟ್ ವಿಮಾನ ಒಂದು ಇಂಜಿನ್‌ನ ವೈಫಲ್ಯದಿಂದಾಗಿ ಪಾಟ್ನಾ (Patna International Airport) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇಂಡಿಕೇಟರ್ ಲೈಟ್‌ನ ಅಸಮರ್ಪಕ ಕಾರ್ಯನಿರ್ವಹಣೆಯ ಕಾರಣದಿಂದಾಗಿ ಸ್ಪೈಸ್‌ಜೆಟ್ B737 ವಿಮಾನವಾದ SG-11 (ದೆಹಲಿ-ದುಬೈ) ವಿಮಾನವನ್ನು ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಪ್ರಸ್ತುತ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗೆ ಇಳಿಸಲಾಗಿದ ಎಂದು ಸ್ಪೈಸ್ ಜೆಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವುದೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿಲ್ಲ ಮತ್ತು ವಿಮಾನವು ಸಾಮಾನ್ಯ ಲ್ಯಾಂಡಿಂಗ್ ಮಾಡಿತು. ವಿಮಾನದಲ್ಲಿ ಯಾವುದೇ ಅಸಮರ್ಪಕ ಕಾರ್ಯದ ಬಗ್ಗೆ ಈ ಹಿಂದೆ ವರದಿಯಾಗಿಲ್ಲ. ಪ್ರಯಾಣಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರನ್ನು ದುಬೈಗೆ ಕರೆದೊಯ್ಯುವ ಬದಲಿ ವಿಮಾನವನ್ನು ಕರಾಚಿಗೆ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
185 ಪ್ರಯಾಣಿಕರಿದ್ದ SpiceJet ವಿಮಾನದಲ್ಲಿ ಬೆಂಕಿ, ಪಾಟ್ನಾದಲ್ಲಿ ತುರ್ತು ಭೂ ಸ್ಪರ್ಶ
ಬೋಯಿಂಗ್ 737 ಮ್ಯಾಕ್ಸ್ 8 ವಿಮಾನದಲ್ಲಿದ್ದ ಪೈಲಟ್‌ಗಳು ಜೆಟ್‌ನ ರೆಕ್ಕೆಗಳಲ್ಲಿರುವ ಒಂದು ಟ್ಯಾಂಕ್‌ನಿಂದ ಸಂಭವನೀಯ ಇಂಧನ ಸೋರಿಕೆಯ ಆಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.. ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಪ್ರಕಾರ, ''ಸಿಬ್ಬಂದಿ ಅಸಾಮಾನ್ಯ ಇಂಧನ ಪ್ರಮಾಣ ಕಡಿತವನ್ನು ಗಮನಿಸಿದ ಕಾರಣ, ತುರ್ತು ಭೂಸ್ಪರ್ಶ ಮಾಡಿದ್ದಾಗಿ ತಿಳಿಸಿದ್ದಾರೆ. ಸುಲಭವಾಗಿ ಹೆಳುವುದಾದರೆ, ಕಾಕ್‌ಪಿಟ್‌ನಲ್ಲಿದ್ದ ಸೂಚಕದಲ್ಲಿ ಇಂಧನವನ್ನು ತೋರಿಸುವ ವಿಭಾಗದಲ್ಲಿ, ಅನಿರೀಕ್ಷಿತ ಇಂಧನ ನಷ್ಟವನ್ನು ತೋರಿಕೆ ಮಾಡುತ್ತಿತ್ತು. ಇದರಿಂದಾಗಿ ಪೈಲಟ್ ವಿಮಾನವನ್ನು ಕರಾಚಿಯಲ್ಲಿ ಲ್ಯಾಂಡ್ ಮಾಡಿದ್ದಾರೆ. ಇದು ತುರ್ತು ಲ್ಯಾಂಡಿಂಗ್ ಆಗಿರಲಿಲ್ಲ. ಮುನ್ನೆಚ್ಚರಿಕೆಯ ಲ್ಯಾಂಡಿಂಗ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.
185 ಜನರ ಪ್ರಾಣ ಉಳಿಸಿದ ಕ್ಯಾಪ್ಟನ್ ಮೋನಿಕಾ ಖನ್ನಾಗೆ ಜಗದ ಮೆಚ್ಚುಗೆ!
ಏವಿಯೇಷನ್ ರೆಗ್ಯುಲೇಟರ್ ಕಳೆದ ತಿಂಗಳಷ್ಟೇ ಸ್ಪೈಸ್‌ಜೆಟ್ ವಿಮಾನದ ಫ್ಲೀಟ್-ವೈಡ್ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ನಡೆಸಿತು ಮತ್ತು ಪ್ರಕರಣದ ಆಧಾರದ ಮೇಲೆ ತಪಾಸಣೆಗಳನ್ನು ಮುಂದುವರೆಸಿದೆ. ದೆಹಲಿಯಿಂದ ಜಬಲ್‌ಪುರಕ್ಕೆ ಹಾರುತ್ತಿದ್ದ ಸ್ಪೈಸ್‌ಜೆಟ್ Q400 ವಿಮಾನದ ಪೈಲಟ್ ಕ್ಯಾಬಿನ್‌ನಲ್ಲಿ ಹೊಗೆ ಪತ್ತೆಯಾದ ನಂತರ 'ಮೇ ಡೇ' ಸಂಕಷ್ಟದ ಕರೆ ಮಾಡಿ ದೆಹಲಿಗೆ ಹಿಂತಿರುಗಿದ ಎರಡು ದಿನಗಳ ನಂತರ ಕರಾಚಿಯಲ್ಲಿ ಲ್ಯಾಂಡಿಂಗ್ ಆಗಿರುವ ಸುದ್ದಿ ಬಂದಿದೆ.