'ಜ.22ಕ್ಕೆ ಬಾಬ್ರಿ ಮಸೀದಿ ವಾಪಾಸ್ ಬರಲಿ ಎಂದು ಅಲ್ಲಾನಿಗೆ ಪ್ರಾರ್ಥಿಸುವೆ..' I.N.D.I.A ಮೈತ್ರಿಯ ಸಂಸದನ ಹೇಳಿಕೆ!
I.N.D.I.A ಮೈತ್ರಿಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷದ ಸಂಸದ ಶಫೀಕುರ್ ರೆಹಮಾನ್ ಬರ್ಕ್ ತಮ್ಮ ಹೇಳಿಕೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸ್ವತಃ ಪ್ರಧಾನಿಯಿಂದಲೇ ಆಹ್ವಾನ ಬಂದರೂ ಯಾವುದೇ ಕಾರಣಕ್ಕೂ ಜನವರಿ 22ಕ್ಕೆ ಅಯೋಧ್ಯೆಗೆ ತಾವು ಹೋಗೋದಿಲ್ಲ ಎಂದು ಹೇಳಿದ್ದಾರೆ.
ನವದೆಹಲಿ (ಡಿ.26): ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆ ಎಸ್‌ಪಿ ಸಂಸದ ಶಫೀಕರ್ ರೆಹಮಾನ್ ಬರ್ಕ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ರಾಮಮಂದಿರ ಉದ್ಘಾಟನೆಗೆ ಯಾವುದೇ ಕಾರಣಕ್ಕೂ ತಾವು ಬರೋದಿಲ್ಲ ಎಂದು ಅವರು ಹೇಳಿದ್ದಾರೆ. ಅವರುಗಳು ಬಲದ ಮೂಲಕ ನಮ್ಮ ಮಸೀದಿಯನ್ನು ವಶಪಡಿಸಿಕೊಂಡಿದ್ದಾರೆ. ಜನವರಿ 22ರ ದಿನದಂದು ನಮ್ಮಿಂದ ಕಿತ್ತುಕೊಂಡಿರುವ ಬಾಬ್ರ ಮಸೀದಿಯ ಜಾಗವನ್ನು ನಮಗೆ ಮರಳಿ ಕೊಡಬೇಕು ಎಂದು ನಾವು ಅಲ್ಲಾಹ್‌ನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ್ ಲಾಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಉದ್ಘಾಟನೆಯ ಮರುದಿನದಿಂದ ಅಂದರೆ ಜನವರಿ 23 ರಿಂದ ಶ್ರೀರಾಮನ ದರ್ಶನಕ್ಕೆ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗುತ್ತದೆ.
ದೇವಾಲಯದ ಉದ್ಘಾಟನೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ, ಸರ್ ಸಂಘಚಾಲಕ್ ಮೋಹನ್ ಭಾಗವತ್, ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲರು ಮತ್ತು ಎಲ್ಲಾ ಟ್ರಸ್ಟಿಗಳು ರಾಮಮಂದಿರದ ಎದುರು ಉಪಸ್ಥಿತರಿರುತ್ತಾರೆ. ಇದಲ್ಲದೆ ಇನ್ನೂ ಹಲವು ಗಣ್ಯರು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ನಿಟ್ಟಿನಲ್ಲಿ, ಎಸ್ಪಿ ಸಂಸದ ಶಫೀಕರ್ ರಹಮಾನ್ ಬರ್ಕ್ ಅವರಿಗೆ ದೇವಸ್ಥಾನದ ಉದ್ಘಾಟನೆಗೆ ಹೋಗುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಈ ಕುರಿತು ಅವರು, ನಾನು ಹೋಗುವುದೇ ಇಲ್ಲ. ನಾನು ಅಲ್ಲಿರುವ ಪ್ರಶ್ನೆಯೇ ಇಲ್ಲ. ನನ್ನ ಮಸೀದಿಯನ್ನು ಅಲ್ಲಿ ಬಹಳ ಹಿಂದಿನಿಂದಲೂ ನಿರ್ಮಿಸಲಾಗಿತ್ತು, ಆದರೆ ಅದು ನಾಶವಾಯಿತು. ಬಲವಂತದ ಎಲ್ಲರೂ ಸೇರಿ ಮಸೀದಿಯನ್ನು ಧ್ವಂಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅವರು ನಮ್ಮ ಮಸೀದಿಯನ್ನು ಬಲವಂತವಾಗಿ ವಶಪಡಿಸಿಕೊಂಡರು ಎಂದು ಶಫೀಕರ್ ರಹಮಾನ್ ಹೇಳಿದ್ದಾರೆ. ನಮ್ಮಿಂದ ಕಿತ್ತುಕೊಂಡಿರುವ ಬಾಬರಿ ಮಸೀದಿಯನ್ನು ನಮಗೆ ಮರಳಿ ಕೊಡಬೇಕೆಂದು ನಾವು ಅಲ್ಲಾಹನಲ್ಲಿ ಅದೇ ದಿನ ಪ್ರಾರ್ಥಿಸುತ್ತೇವೆ. ನಮ್ಮ ಪ್ರಕರಣ ನ್ಯಾಯಾಲಯದ ಎದುರು ಕೂಡ ಹೋಗಿತ್ತು. ಆದರೆ, ಕೋರ್ಟ್‌ನಲ್ಲಿಯೂ ತೀರ್ಪು ನಮ್ಮ ನಿರೀಕ್ಷೆಗೆ ವಿರುದ್ಧವಾಗಿಯೇ ಬಂದಿದೆ. ಎಷ್ಟರಮಟ್ಟಿಗೆಂದರೆ ಈಗ ಅದರ ಮೇಲೆ ದೇವಸ್ಥಾನ ಕಟ್ಟುವ ಆದೇಶ ಬಂದಿದೆ. ಹುತಾತ್ಮರ ನೆನಪಿಗಾಗಿ ಕಟ್ಟಿದದ ಮಸೀದಿಯ ಮೇಲೆ ಇಂದು ಮಂದಿರ ನಿರ್ಮಾಣವಾಗಿದೆ. ಇದು ಸಂಪುರ್ಣವಾಗಿ ಕಾನೂನಿನ ವಿರುದ್ಧವಾಗಿದೆ. ಮಾನವೀಯತೆಗೆ ವಿರುದ್ಧವಾಗಿದೆ. ಜಗತ್ತಿನ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಬುಲ್ಡೋಜರ್ ಯೋಗಿ ಆದಿತ್ಯನಾಥ್ ಕಡೆ ತಿರುಗಲಿದೆ, SP ನಾಯಕ ಶಫೀಖುರ್ ಎಚ್ಚರಿಕೆ!
ಜಗತ್ತಿನಲ್ಲಿ ಎಲ್ಲ ಧರ್ಮದವರೂ ಇದ್ದಾರೆ ಎಂದು ಶಫೀಕರ್ ರೆಹಮಾನ್ ಹೇಳಿದ್ದಾರೆ. ಆದರೆ ಅಂತಹ ಕೆಲಸ ನಡೆಯಲೇ ಇಲ್ಲ. ಈ ರೀತಿ ಮಸೀದಿಯನ್ನು ಕೆಡವಿ ಅದರ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಬೇಕು ಎನ್ನುವುದು ಯಾವ ರೀತಿಯ ಮಾನವೀಯತೆ? ಇದು ಮಾನವೀಯತೆಯ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಇದು ಧರ್ಮಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರಕ್ಕಾಗಿ 8 ಅಡಿಯ ಬಾಲರಾಮನ ವಿಗ್ರಹ ಕೆತ್ತನೆ ಮುಗಿಸಿದ ಮೈಸೂರಿನ ಅರುಣ್