ಅಯೋಧ್ಯೆ ರಾಮ ಮಂದಿರಕ್ಕಾಗಿ 8 ಅಡಿಯ ಬಾಲರಾಮನ ವಿಗ್ರಹ ಕೆತ್ತನೆ ಮುಗಿಸಿದ ಮೈಸೂರಿನ ಅರುಣ್
ಜ.22ರಂದು ಉದ್ಘಾಟನೆಯಾಗಲಿರುವ ಅಯೋಧ್ಯೆ ರಾಮ ಮಂದಿರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ರಾಮ ಲಲ್ಲಾ ವಿಗ್ರಹ ಕೆತ್ತನೆ ಮಾಡುತ್ತಿದ್ದ ದೇಶದ ಮೂವರು ಶಿಲ್ಪಿಗಳ ಪೈಕಿ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಈಗಾಗಲೇ ವಿಗ್ರಹ ಕೆತ್ತನೆಯನ್ನು ಪೂರ್ತಿಗೊಳಿಸಿದ್ದಾರೆ.
ನವದೆಹಲಿ: ಜ.22ರಂದು ಉದ್ಘಾಟನೆಯಾಗಲಿರುವ ಅಯೋಧ್ಯೆ ರಾಮ ಮಂದಿರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ರಾಮ ಲಲ್ಲಾ ವಿಗ್ರಹ ಕೆತ್ತನೆ ಮಾಡುತ್ತಿದ್ದ ದೇಶದ ಮೂವರು ಶಿಲ್ಪಿಗಳ ಪೈಕಿ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಈಗಾಗಲೇ ವಿಗ್ರಹ ಕೆತ್ತನೆಯನ್ನು ಪೂರ್ತಿಗೊಳಿಸಿದ್ದಾರೆ.
ಅರುಣ್ ಕೆತ್ತನೆ ಮಾಡಿರುವ ಶ್ರೀರಾಮನ ವಿಗ್ರಹವು 5 ವರ್ಷದ ಬಾಲ ರಾಮನ ವಿಗ್ರಹವಾಗಿದೆ. ಇದು 8 ಅಡಿ ಎತ್ತರ ಹಾಗೂ 3.5 ಅಡಿ ಅಗಲವಿದ್ದು, ಕೈಯಲ್ಲಿ ಬಿಲ್ಲು ಬಾಣ ಹಿಡಿದಿರುವ ಶ್ರೀರಾಮನ ವಿಗ್ರಹವಾಗಿದೆ. ಇದಕ್ಕಾಗಿ ಅರುಣ್ 6 ತಿಂಗಳ ಸಮಯ ತೆಗೆದುಕೊಂಡಿದ್ದಾರೆ. ಇನ್ನು ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಲಾದ 2,000 ಗಣ್ಯರ ಪೈಕಿ ಅರುಣ್ ಕೂಡ ಒಬ್ಬರಾಗಿದ್ದಾರೆ.
ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ, ಖರ್ಗೆ ಸೇರಿ ಕಾಂಗ್ರೆಸ್ ನಾಯಕರಿಗೆ ಆಹ್ವಾನ!
ಬೆಂಗಳೂರಿನ ಜಿಎಲ್ ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಮತ್ತು ಅರುಣ್ ಸೇರಿ ಮೂವರು ಕೆತ್ತನೆ ಮಾಡಿರುವ ಪೈಕಿ ಒಂದು ರಾಮನ ವಿಗ್ರಹವನ್ನು ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಜನವರಿ ಮೊದಲ ವಾರದಲ್ಲಿ ವಿಗ್ರಹ ಆಯ್ಕೆ ಪೂರ್ಣಗೊಳ್ಳುತ್ತದೆ.
ಅಯೋಧ್ಯಾ ಶ್ರೀರಾಮನಿಗೆ ಬೆಳಗಲು ಭಕ್ತನಿಂದ ಸಿದ್ಧವಾಯ್ತು 108 ಅಡಿ ಉದ್ದದ ಅಗರಬತ್ತಿ