ಸೋನಂ ವಾಂಗ್ಚುಕ್ ಕಿಡ್ನಾಪ್ ಮಾಡಿದ್ರು, ಅರೆಸ್ಟ್ ಮಾಡಿದ್ರು, ವಿಪಕ್ಷ ಸೇರಿ ನಮಗೂ ಭೇಟಿಗೆ ಅವಕಾಶ ನೀಡಿಲ್ಲ ಎಂದು ದೀಪ್ಕೆ ಹೇಳಿದ್ದಾರೆ. ಆದರೆ ಸೋನಂ ಭಿನ್ನ ಹೇಳಿಕೆ ನೀಡಿದ್ದಾರೆ. ಇಬ್ಬರಲ್ಲಿ ಸತ್ಯ ಹೇಳುತ್ತಿರುವುದು ಯಾರು?
ನವದೆಹಲಿ (ಜು.24) ಸಿಜೆಪಿ ಪ್ರತಿಭಟನೆ ಹೇಳ್ಳ ಹಿಡಿಯುತ್ತಿದೆಯಾ? ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆಯಲ್ಲಿನ ಕೆಲ ಘೋಷಣೆಗಳು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಿದ ಬೆನ್ನಲ್ಲೇ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಹಾಗೂ ಸೋನಂ ವಾಂಗ್ಚುಕ್ ಪತ್ನಿ ನೀಡಿದ ಹೇಳಿಕೆಗಳು ಭಿನ್ನವಾಗಿದೆ. ಸ್ವತಃ ಸೋನಂ ವಾಂಗ್ಚುಕ್ ನೀಡಿದ ಹೇಳಿಕೆಯೂ ದೀಪ್ಕೆ ಹೇಳಿಕೆಗಿಂತ ಭಿನ್ನವಾಗಿದೆ. ಭಿನ್ನ ಹೇಳಿಕೆಗಳಿಂದ ಪ್ರತಿಭನಿರತ ವಿದ್ಯಾರ್ಥಿಗಳು ಹಾಗೂ ಇತರರಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಪೈಕಿ ಸತ್ಯ ಹೇಳುತ್ತಿರುವುದು ಯಾರು ಅನ್ನೋ ಪ್ರಶ್ನೆ ಮೂಡಿದೆ.
ಸೋನಂ ವಾಂಗ್ಚುಕ್ ಬೇಡಿಕೆ ಈಡೇರಿಸುವ ಲಿಖಿತ ಭರವಸೆ ಸಿಕ್ಕ ಬಳಿಕ ಸೋನಂ ವಾಂಗ್ಚುಕ್ ತಮ್ಮ ಉಪವಾಸ ಅಂತ್ಯಗೊಳಿಸಿದ್ದುರ. ಇದರ ಬೆನ್ನಲ್ಲೇ ಖುದ್ದು ಸೋನಂ ವಾಂಗ್ಚುಕ್ ವಿಡಿಯೋ ಮೂಲಕ ಹೇಳಿಕೆ ನೀಡಿದ್ದರೆ, ಸೋನಂ ವಾಂಗ್ಚುಕ್ ಪತ್ನಿ ಗೀತಾಂಜಲಿ ಅಂಗ್ಮೋ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಸೋನಂ ವಾಂಗ್ಚುಕ್ ಪತ್ನಿ ಹೇಳಿದ್ದೇನು?
ಮಧ್ಯರಾತ್ರಿ ನಮಗೆ ಕೇಂದ್ರ ಸರ್ಕಾರ ಲಿಖಿತವಾಗಿ ಸೋನಂ ವಾಂಗ್ಚುಕ್ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಯಾವುದೇ ಎಫ್ಐಆರ್ ದಾಖಲಿಸಲ್ಲ, ನೀಟ್ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ನೀಟ್ ಹಾಗೂ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿ ಪತ್ರ ನೀಡಿದೆ ಎಂದು ಗೀತಾಂಜಲಿ ಅಂಗ್ಮೋ ಹೇಳಿದ್ದಾರೆ.
ಜೆಪಿ ನಡ್ಡಾ ಹಾಗೂ ಜೀತೇಂದ್ರ ಸಿಂಗ್ ಆಸ್ಪತ್ರೆಗೆ ಆಗಮಿಸಿ ಭರವಸೆ ಪತ್ರ ನೀಡಿದ್ದಾರೆ. ಇದಕ್ಕೂ ಮೊದಲು 16 ಸಂಸದರು ಭೇಟಿ ಮಾಡಿ ಮಾತನಾಡಿದ್ದಾರೆ, 65 ವಿಪಕ್ಷಗಳ ಸಂಸದರು ಸಂಸತ್ತಿನಲ್ಲಿ ಈ ಕುರಿತು ಚರ್ಚೆ ನಡೆಸುವ ಕುರಿತು ಭರವಸೆ ಪತ್ರ ನೀಡಿದ್ದಾರೆ. ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಹಿನ್ನಲೆಯಲ್ಲಿ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುತ್ತಿದ್ದಾರೆ ಎಂದು ಗೀತಾಂಜಲಿ ಅಂಗ್ಮೋ ಹೇಳಿದ್ದಾರೆ.

ಅಭಿಜಿತ್ ದೀಪ್ಕೆ ಹೇಳಿದ್ದೇನು?
ಸೋನಂ ವಾಂಗ್ಚುಕ್ ಅವರನ್ನು ಕಿಡ್ನಾಪ್ ಮಾಡಿ ಇಡಲಾಗಿತ್ತು ಎಂದು ನನಗನಿಸುತ್ತಿದೆ. ಯಾಕಂದರೆ, ಜೆಪಿ ನಡ್ಡಾಗೆ ಮಾತ್ರ ಸೋನಂ ವಾಂಗ್ಚುಕ್ ಅವರನ್ನು ಭೇಟಿ ಮಾಡಲು ಅವಕಾಶವಿತ್ತು. ವಿಪಕ್ಷಗಳ ಯಾವ ನಾಯಕರಿಗೂ ಅವಕಾಶ ಇರಲಿಲ್ಲ. ನಮ್ಮ ತಂಡದ ಯಾರಿಗೂ ಭೇಟಿಗೆ ಅವಕಾಶ ಇರಲಿಲ್ಲ. ಹೀಗಾಗಿ ಸೋನಂ ವಾಂಗ್ಚುಕ್ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಆದರೆ ಸೋನಂ ಉಪವಾಸ ಅಂತ್ಯಗೊಳಿಸಿರುವುದು ನಮಗೂ ಸಂತಸವಿದೆ ಎಂದು ಅಭಿಜಿತ್ ದೀಪ್ಕೆ ಹೇಳಿದ್ದಾರೆ.
ಬಿಜೆಪಿ ನಾಯಕರು, ಸಚಿವರು, ಸಂಸದರಿಗೆ ಬಿಟ್ಟು ಬೇರೆ ಯಾರಿಗೂ ಸೋನಂ ವಾಂಗ್ಚುಕ್ ಭೇಟಿಗೆ ಅವಕಾಶ ಇರಲಿಲ್ಲ ಎಂದು ಅಭಿಜಿತ್ ದೀಪ್ಕೆ ಹೇಳಿದರೆ, ಇತ್ತ ಎಲ್ಲರೂ ಭೇಟಿಯಾಗಿದ್ದಾರೆ, ಪತ್ರ ನೀಡಿದ್ದಾರೆ ಎಂದು ಗೀತಾಂಜಲಿ ಅಂಗ್ಮೋ ಹೇಳಿರುವ ಭಿನ್ನ ಹೇಳಿಕೆ ಇದೀಗ ಗೊಂದಲಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಇತ್ತೀಚೆಗೆ ಸೆಜಿಪಿ ಇಬ್ಬರು ಪ್ರತಿನಿಧಿಗಳು ಮೊದಲ ಹಂತದಲ್ಲಿ ಜೆಪಿ ನಡ್ಡಾ ನಿವಾಸಕ್ಕೆ ತೆರಳಿ ಬೇಡಿಕೆ ಪತ್ರ ನೀಡಿ ಚರ್ಚೆ ನಡೆಸಿದ್ದರು. ಇದರ ಬಳಿಕ ಹೊರಬಂದ ಫೋಟೋಗಳು ಹಾಗೂ ಅಭಿಜಿತ್ ದೀಪ್ಕೆ ನೀಡಿದ ಹೇಳಿಕೆ ಭಿನ್ನವಾಗಿತ್ತು.
ನಮ್ಮ ಪ್ರತಿನಿಧಿಗಳನ್ನು ಜೆಪಿ ನಡ್ಡಾ ನಿವಾಸದಲ್ಲಿ ಹೌಸ್ ಅರೆಸ್ಟ್ ಮಾಡಲಾಗಿತ್ತು. ಅವರ ಮೊಬೈಲ್ ಕಿತ್ತುಕೊಳ್ಳಲಾಗಿತ್ತು. ಅವರಿಗೆ ಸ್ವತಂತ್ರವಾಗಿ ಮಾತನಾಡುವ ಅವಕಾಶ ಇರಲಿಲ್ಲ ಎಂದು ಅಭಿಜಿತ್ ದೀಪ್ಕೆ ಹೇಳಿದ್ದರು. ಆದರೆ ಜೆಪಿ ನಡ್ಡಾ ಜೊತೆಗಿನ ಭೇಟಿ ಫೋಟೋ ಸಚಿವರ ಅಧೀಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವೇಳೆ ಕಾಂಕ್ರೋಚ್ ಜನತಾ ಪಾರ್ಟಿಯ ಇಬ್ಬರು ಪ್ರತಿನಿಧಿಗಳು ಮೊಬೈಲ್ ಕೈಯಲ್ಲಿ ಹಿಡಿದು, ಜೆಪಿ ನಡ್ಡಾ ಜೊತೆ ಚರ್ಚಿಸುವ ಫೋಟೋ ವೈರಲ್ ಆಗಿತ್ತು. ಹೀಗಾಗಿ ಅಭಿಜಿತ್ ದೀಪ್ಕೆ ಹೇಳಿಗೆ ಬಗ್ಗೆ ತೀವ್ರ ಗೊಂದಲ ಹಾಗೂ ಟೀಕೆಗಳು ವ್ಯಕ್ತವಾಗಿತ್ತು.


