ಕೊಲೆಗೂ ಮುನ್ನ ಸೋನಾಲಿ ರೇಪ್‌: ಸಹೋದರ ರಿಂಕು ಆರೋಪ!

ಬಿಜೆಪಿ ನಾಯಕಿ ಹಾಗೂ ಟಿಕ್‌ ಸ್ಟಾರ್‌ ಸೋನಾಲಿ ಪೋಗಟ್‌ ಸಾವಿನ ವಿಚಾರ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮಂಗಳವಾರ ಗೋವಾದಲ್ಲಿ ಬಿಗ್‌ ಬಾಸ್‌-14 ಸ್ಪರ್ಧಿ ಸೋನಾಲಿ ಪೋಗಟ್‌ ಸಾವು ಕಂಡಿದ್ದರು. ಆದರೆ, ತನ್ನ ಸಹೋದರಿಯನ್ನು ರೇಪ್‌ ಮಾಡಿ ಸಾಯಿಸಲಾಗಿದೆ ಎಂದು ಸಹೋದರ ರಿಂಕು ಆರೋಪ ಮಾಡಿದ್ದಾರೆ.

Sonali Phogat was killed after raping Brother Rinku alleges PA Sudhir raped by feeding him intoxicants san

ನವದೆಹಲಿ (ಆ.24): ಬಿಜೆಪಿ ನಾಯಕಿ ಹಾಗೂ ಬಿಗ್‌ ಬಾಸ್‌ ಸ್ಪರ್ಧಿ ಸೋನಾಲಿ ಪೋಗಟ್‌ ಸಾವಿನ ಪ್ರಕರಣ ಇನ್ನಷ್ಟು ತಿರುವು ಪಡೆದುಕೊಂಡಿದೆ. ಸಾವಿಗೂ ಮುನ್ನ ಆಕೆಯನ್ನು ರೇಪ್‌ ಹಾಗೂ ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ ಎಂದು ಅವರ ಕಿರಿಯ ಸಹೋದರ ರಿಂಕು ಢಾಕಾ ಆರೋಪ ಮಾಡಿದ್ದಾರೆ.  ಫತೇಹಾಬಾದ್‌ನ ಭೂತಂಕಲನ್ ಗ್ರಾಮದ ನಿವಾಸಿಯಾಗಿರುವ ರಿಂಕು, ಸೋನಾಲಿ ಪೋಗಟ್‌ ಅವರ ಆಪ್ತ ಸಹಾಯಕ ಸುಧೀರ್‌ ಸಂಗ್ವಾನ್‌ ಹಾಗೂ ಆತನ ಸ್ನೇಹಿತ ಸುಖ್ವಿಂದರ್‌, ಸೋನಾಲಿ ಅವರು ಸೇವನೆ ಮಾಡಿದ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿದ್ದಾರೆ. ಬಳಿಕ ಆಕೆಯನ್ನು ರೇಪ್‌ ಮಾಡಿದ್ದಲ್ಲದೆ, ಅದನ್ನು ವಿಡಿಯೋ ಮಾಡಿ, ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದರೊಂದಿಗೆ ರಾಜಕೀಯ ಷಡ್ಯಂತ್ರ ರೂಪಿಸುವ ಭರದಲ್ಲಿ ಸೋನಾಲಿಯ ಆಸ್ತಿ ಕಬಳಿಸಿ ಹತ್ಯೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಬಗ್ಗೆ ರಿಂಕು ಗೋವಾ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರಿಂಕು ಢಾಕಾ ಅವರು ತಮ್ಮ ಸಹೋದರಿ ಸೋನಾಲಿ ಫೋಗಟ್, ಹಿಸಾರ್‌ನಲ್ಲಿ ಮದುವೆಯಾಗಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಸೋದರ ಮಾವ ಸಂಜಯ್‌ ಪೋಗಟ್‌ ನಿಧನರಾದರು. ಇದಾದ ನಂತರ ಸೋನಾಲಿ ಬಿಜೆಪಿ ಸೇರಿದ್ದಲ್ಲದೆ, ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಕಂಡುಕೊಂಡಿದ್ದರು. 2019 ರ ಚುನಾವಣೆಯ ಸಮಯದಲ್ಲಿ, ರೋಹ್ಟಕ್ ನಿವಾಸಿ ಸುಧೀರ್ ಸಾಂಗ್ವಾನ್ ಮತ್ತು ಭಿವಾನಿ ನಿವಾಸಿ ಸುಖ್ವಿಂದರ್, ಸೋನಾಲಿ ಅವರ ಬಳಿ ಕೆಲಸಗಾರರಾಗಿ ಸೇರಿಕೊಂಡಿದ್ದರು.

ಸುಧೀರ್‌ ಹಾಗೂ ಸುಖ್ವಿಂದರ್‌ ಇಬ್ಬರೂ ಕೂಡ ಸೋನಾಲಿಯ ವಿಶ್ವಾಸವನ್ನು ಗಳಿಸಿಕೊಂಡಿದ್ದರು. ಇದರಲ್ಲಿ ಸುಧೀರ್‌, ಸೋನಾಲಿ ಅವರ ಪಿಎ ಆಗಿ ಕೆಲಸ ಮಾಡುತ್ತಿದ್ದರು. ರಿಂಕು ಅವರು ನೀಡಿದ ದೂರಿನ ಅಧಾರದಲ್ಲಿ ಹೇಳುವುದಾದರೆ, 2021ರಲ್ಲಿ ಕೂಡ ಸೋನಾಲಿ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಸುಧೀರ್‌ ಅವರ ಮುಂದಾಳತ್ವದಲ್ಲಿಯೇ ಈ ಕಳ್ಳತನ ನಡೆದಿತ್ತು. ಆದರೆ, ಅದಾದ ಬಳಿಕ, ಮನೆ ಕೆಲಸದವರು ಹಾಗೂ ಇತರ ಸಿಬ್ಬಂದಿಯನ್ನ ತೆಗೆದುಹಾಕಲಾಗಿತ್ತು. ಅಂದಿನಿಂದ ಸೋನಾಲಿ ಅವರ ಆಹಾರದ ಬಗ್ಗೆ ಸುಧೀರ್‌ ಗಮನ ನೀಡುತ್ತಿದ್ದ. ಕೆಲವೊಮ್ಮೆ ಸೋನಾಲಿ ಅವರೇ, ಸುಧೀರ್‌ ಅವರು ನನಗೆ ಖೀರ್‌ ತಿನಿಸಿದ ಬಳಿಕ ನನ್ನ ಕೈ ಕಾಲುಗಳು ಮರಗಟ್ಟಿ ಹೋದಂತಾಗುತ್ತಿದೆ ಎಂದು ಅವರು ಹಿಂದೊಮ್ಮೆ ಹೇಳಿದ್ದರು ಎಂದು ದೂರಿದ್ದಾರೆ.

ಸುಧೀರ್ ಎಲ್ಲಾ ವಹಿವಾಟು ಮತ್ತು ಕಾಗದ ಪತ್ರಗಳ ಕೆಲಸ ಮಾಡುತ್ತಿದ್ದ ಎಂದು ರಿಂಕು ಹೇಳಿದ್ದಾರೆ. ಆಗಸ್ಟ್ 22 ರಂದು, ಸೋನಾಲಿ ತನ್ನ ಕಿರಿಯ ಅಳಿಯ ಅಮನ್‌ಗೆ ಕರೆ ಮಾಡಿ, ಸುಧೀರ್ ತನಗೆ ಆಹಾರದಲ್ಲಿ ಏನೋ ಹಾಕಿದ್ದಾನೆ. ಇದರಿಂದ ನಾನು ವಿಚಲಿತಳಾಗಿದ್ದೇನೆ ಹೇಳಿದ್ದಳು. ಮೂರು ವರ್ಷಗಳ ಹಿಂದೆ ಹಿಸಾರ್‌ನಲ್ಲಿನ ಮನೆಯಲ್ಲಿ ಅಮಲು ಪದಾರ್ಥ ಬೆರೆಸಿದ ಆಹಾರವನ್ನು ಸೋನಾಲಿಗೆ ನೀಡಿದ್ದ. ಆಕೆಗೆ ಪ್ರಜ್ಞೆ ತಪ್ಪಿದಾಗ ಅವಳ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಕೂಡ ಮಾಡಿದ್ದ. ಈ ವಿಡಿಯೋವನ್ನು ತೋರಿಸಿ ಆಕೆಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಆತ, ಆ ಬಳಿಕವೂ ಹಲವು ಬಾರಿ ಅತ್ಯಾಚಾರ ಮಾಡಿದ್ದ ಎಂದಿದ್ದಾರೆ.

ಬಿಜೆಪಿ ನಾಯಕಿ, ಟಿಕ್‌ ಟಾಕ್‌ ಸ್ಟಾರ್‌ ಸೋನಾಲಿ ಪೋಗಟ್‌ ನಿಧನ!

ಆಕೆಯ ಸಿನಿಮಾ ಹಾಗೂ ರಾಜಕೀಯ ಜೀವನವನ್ನು ಅಂತ್ಯ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆಕೆಯ ಮನೆಯ ಕೀಗಳು, ಆಕೆಯ ಎರಡೂ ಫೋನ್‌ಗಳು, ಆಸ್ತಿ ಪತ್ರಗಳು, ಎಟಿಎಂ ಕಾರ್ಡ್‌ಗಳು ಸುಧೀರ್‌ ಬಳಿಯೇ ಇದ್ದವು. ಸುಧೀರ್‌ ಹಾಗೂ ಸುಖ್ವಿಂದರ್‌ ನನಗೆ ಏನಾದರೂ ಮಾಡಬಹುದು ಎನ್ನುವ ಆತಂಕ ಆಕೆಯಲ್ಲಿತ್ತು. ಇದನ್ನು ಫೋನ್‌ನಲ್ಲಿ ಕೂಡ ಹೇಳಿದ್ದಳು. ಬೆಳಗ್ಗೆ ವೇಳೆಗೆ ಫೋನ್‌ ಮಾಡಿದ ಸುಧೀರ್‌, ಶೂಟಿಂಗ್‌ ವೇಳೆ ಸೋನಾಲಿ ಸಾವು ಕಂಡಿದ್ದಾಳೆ ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಬರೆದಿದ್ದಾರೆ.

ಸೋನಾಲಿ ಫೋಗಟ್ ಅವರ ಹೈ-ಫೈ ಗ್ಲಾಮರ್ಸ್‌ ಲೈಫ್‌ಸ್ಟೈಲ್‌ ಹೇಗಿತ್ತು ನೋಡಿ

ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿರುವ ಸುಧೀರ್‌: ನಮ್ಮ ಕುಟುಂಬ ಗೋವಾಕ್ಕೆ ಹೋದಾಗ ಅಲ್ಲಿ ಯಾವುದೇ ಶೂಟಿಂಗ್‌ ಕೂಡ ನಡೆಯುತ್ತಿರಲಿಲ್ಲ. ಸೋನಾಲಿ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸುವ ಸಲುವಾಗಿ ಹಾಗೂ ಆಕೆಯ ಆಸ್ತಿಗಾಗಿ ಸುಧೀರ್‌ ಹಾಗೂ ಸುಖ್ವಿಂದರ್‌ ಆಕೆಯ ಕೊಲೆ ಮಾಡಿದ್ದಾರೆ. ಸೋನಾಲಿ ಸಾವಿನ ಬಗ್ಗೆ ನಮಗೆ ಮೊದಲು ತಿಳಿಸಿದ್ದು ಸುಧೀರ್‌. ಅದಾದ ಬಳಿಕ ನಾವು ಆತನಿಗೆ ಕರೆ ಮಾಡಿದರೆ, ಫೋನ್‌ ಸ್ವಿಚ್‌ ಆಫ್‌ ಆಗಿದೆ. ಸೋನಾಲಿ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಸೋನಾಲಿ ಪೋಗಟ್‌ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಆಕೆಯ ಮಗಳು ಯಶೋಧರ ಮಾತನಾಡಿದ್ದಾರೆ. 15 ವರ್ಷದ ಯಶೋಧರ ತನ್ನ ತಾಯಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರನ್ನು ಕೇಳಿಕೊಂಡಿದ್ದಾರೆ. ಹಿಸಾರ್‌ನಲ್ಲಿರುವ ಫಾರ್ಮ್‌ ಹೌಸ್‌ನಲ್ಲಿ ಚಿಕ್ಕಮ ರಮೋನ್‌ ಪೋಗಟ್‌ ಜೊತೆ ಯಶೋಧರ ವಾಸವಿದ್ದಾರೆ. ತನ್ನ ತಾಯಿಯ ಸಾವಿಗೆ ಕಾರಣರಾದವರನ್ನು ಹುಡುಕಿ ಶಿಕ್ಷೆ ನೀಡಬೇಕು ಎಂದು ಕಣ್ಣೀರಿಡುತ್ತಲೇ ಹೇಳಿದ್ದಾರೆ.

Latest Videos
Follow Us:
Download App:
  • android
  • ios