ಸೋನಾಲಿ ಫೋಗಟ್ ಅವರ ಹೈ-ಫೈ ಗ್ಲಾಮರ್ಸ್ ಲೈಫ್‌ಸ್ಟೈಲ್ ಹೇಗಿತ್ತು ನೋಡಿ
ಪ್ರಖ್ಯಾತ ಟಿಕ್ ಟಾಕ್ ಸ್ಟಾರ್ ಹಾಗೂ ಹರ್ಯಾಣ ಬಿಜೆಪಿ ನಾಯಕಿ ಸೋನಾಲಿ ಪೋಗಟ್(Sonali Phogat) ಗೋವಾದಲ್ಲಿ ನಿಧನರಾಗಿದ್ದಾರೆ. 14ನೇ ಅವೃತ್ತಿಯ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ 42 ವರ್ಷದ ಸೋನಾಲಿ ಪೋಗಟ್ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ. ಅವರ ಸಾವಿನ ಸುದ್ದಿ ತಿಳಿದ ತಕ್ಷಣ ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅವರು ತುಂಬಾ ಹೈ-ಫೈ ಜೀವನಶೈಲಿಯನ್ನು ನಡೆಸುತ್ತಿದ್ದರು ಎಂಬುದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದರೆ ತಿಳಿಯುತ್ತ.ದೆ.
ಸೋನಾಲಿ ಫೋಗಟ್ ಅವರ ಇನ್‌ಸ್ಟಾಗ್ರಾಮ್ ಅನ್ನು ನೋಡಿದರೆ, ಅವರ ಅನೇಕ ಮನಮೋಹಕ ಫೋಟೋಗಳು ಕಂಡುಬರುತ್ತವೆ. ಅವರೇ ಕಾಲಕ್ಕೆ ತಕ್ಕಂತೆ ಸ್ಟೈಲ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಅವರಿಗೆ ಕಾರು ಓಡಿಸುವ ಉತ್ಸಾಹವೂ ಇತ್ತು.
ಅವರ ಲುಕ್ ಜೊತೆಗೆ ಅವರ ಜೀವನ ಶೈಲಿಯೂ ತುಂಬಾ ಐಷಾರಾಮಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆ್ಯಕ್ಟಿವ್ ಆಗಿದ್ದರು. ಸೋನಾಲಿ ಫೋಗಟ್ ಕುದುರೆ ಸವಾರಿಯನ್ನು ಕೂಡ ಇಷ್ಟಪಡುತ್ತಿದ್ದರು.
ಅವರು ಪಾಶ್ಚಿಮಾತ್ಯ ಉಡುಪುಗಳನ್ನು ಸಹ ತುಂಬಾ ಇಷ್ಟಪಡುತ್ತಿದ್ದರು ಎಂಬುದನ್ನು ಫೋಟೋಗಳಲ್ಲಿ ಕಾಣಬಹುದು. ಸೋನಾಲಿ ಫೋಗಟ್ ಗ್ಲಾಮರ್ ಪ್ರಪಂಚದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು.
ಅವರು ಕೆಲವು ವರ್ಷಗಳ ಹಿಂದೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಮೆಲ್ಬೋರ್ನ್‌ನಲ್ಲಿ ಗಾಲ್ಫ್ ಆಡುತ್ತಿರುವುದು ಕಂಡುಬಂದಿದೆ.
ಸೋನಾಲಿ ಫೋಗಟ್ ಅವರ ಹವ್ಯಾಸಗಳು ಸಾಕಷ್ಟು ವಿಶಿಷ್ಟವಾದವು. ಕಾರು ಉತ್ಸಾಹಿಯಾಗಿದ್ದ ಸೋನಾಲಿ ಬೈಕ್ ಓಡಿಸುವುದರಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದರು. ಅಷ್ಟೇ ಅಲ್ಲ, ಚಿತ್ರದ ಶೂಟಿಂಗ್ ವೇಳೆಯೂ ಇಂತಹ ದೃಶ್ಯಗಳನ್ನು ಅವರೇ ಚಿತ್ರೀಕರಿಸಿದ್ದಾರೆ.
ಗಿಟಾರ್ ನುಡಿಸುವುದನ್ನು ಇಷ್ಟಪಡುವ ಸೋನಾಲಿ ಫೋಗಟ್ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಕೆಲವು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಗಿಟಾರ್ ನುಡಿಸುತ್ತಿದ್ದಾರೆ.
ಸಲ್ಮಾನ್ ಖಾನ್ ಅವರ ವಿವಾದಾತ್ಮಕ ಶೋ ಬಿಗ್ ಬಾಸ್ 14 ರಲ್ಲಿ ಸೋನಾಲಿ ಫೋಗಟ್ ಎಂಟ್ರಿ ಪಡೆದಾಗ ಹೆಚ್ಚು ಗಮನ ಸೆಳೆದರು. ಶೋನಲ್ಲಿ ಆಕೆಯ ಗ್ಲಾಮರಸ್ ಲುಕ್ ಕೂಡ ಕಂಡು ಬಂದಿತ್ತು.
ಬಿಗ್ ಬಾಸ್ 14 ರಲ್ಲಿ, ಸೋನಾಲಿ ಫೋಗಟ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ಆಕೆಯ ಪತಿ ಸಂಜಯ್ ಫೋಗಟ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು.
ಸೋನಾಲಿ ಫೋಗಟ್ ತನ್ನ ಟಿವಿ ವೃತ್ತಿಜೀವನವನ್ನು 2006 ರಲ್ಲಿ ಆಂಕರ್ ಆಗಿ ಪ್ರಾರಂಭಿಸಿದರು, ಅವರು ಹರಿಯಾಣ ದೂರದರ್ಶನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು.
ಅವರು ಟಿವಿ ಧಾರಾವಾಹಿಯಲ್ಲೂ ಕೆಲಸ ಮಾಡಿದರು. ಇದಲ್ಲದೆ, ಅವರು ಹರ್ಯಾನ್ವಿ ಚಲನಚಿತ್ರ ಛೋರಿಯನ್ ಛೋರೋನ್ ಸೆ ಕಮ್ ನಹಿ ಹೋತಿಯಲ್ಲಿ ಕಾಣಿಸಿಕೊಂಡಿದ್ದರು.