ಫೇಸ್‌ಬುಕ್‌ನಲ್ಲಿ ಸಂದೇಶ ಬರೆದು ಕಾಂಗ್ರೆಸ್ ಯುವ ನಾಯಕ ನಾಪತ್ತೆ ಶಿಕ್ಷಕಜೋಡಿಯ ಪುತ್ರನಾಗಿರುವ ಜನಾರ್ದನ್ ಗೊಗೊಯ್ ಉಲ್ಫಾ ಸಂಘಟನೆಗೆ ಬಗ್ಗೆ ಒಲವು ಹೊಂದಿದ್ದ ಗೊಗೊಯ್ 

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ಉಲ್ಫಾ-ಐ) ಗೆ ಯುವಕರು ಸೇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೆಲ ದಿನಗಳ ಬೆನ್ನಲೇ, ತಿನ್ಸುಕಿಯಾ ಜಿಲ್ಲೆಯ ಯುವ ಕಾಂಗ್ರೆಸ್ ಮುಖಂಡನೋರ್ವ ಪ್ರತ್ಯೇಕತಾವಾದಿ ಸಂಘಟನೆಗೆ ಸೇರಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಪ್ಪರ್ ಅಸ್ಸಾಂನ ಸಾದಿಯಾದ (Sadiya) ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ 29 ವರ್ಷದ ಜನಾರ್ದನ್ ಗೊಗೊಯ್(anardhan Gogoi), ತಮ್ಮ ಪತ್ನಿ ರೀಮಾ ಅವರನ್ನು ಉದ್ದೇಶಿಸಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅಸ್ಸಾಮಿಗಳು ವ್ಯವಸ್ಥಿತವಾಗಿ ನಾಶವಾಗುತ್ತಿರುವುದನ್ನು ಸಹಿಸಲು ಸಾಧ್ಯವಾಗದೇ ತಾನು 'ಹೊರಡುತ್ತಿದ್ದೇನೆ' ಎಂದು ಬರೆದಿದ್ದಾರೆ.

ನಾವು ಸ್ವೀಕರಿಸಿದ ಪ್ರಾಥಮಿಕ ವರದಿಗಳಿಂದ, ಅವರು ಉಲ್ಫಾ-I ಗೆ ಸೇರಿದ್ದಾರೆ ಎಂದು ತೋರುತ್ತದೆ ಎಂದು ಸಾದಿಯಾ ಎಸ್ಪಿ ಪುಷ್ಕಿನ್ ಜೈನ್ (Pushkin Jain) ಹೇಳಿದ್ದಾರೆ. ಗೊಗೋಯ್ ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ (FaceBook) ಉಲ್ಫಾ-ಐಗೆ ಸೇರಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎಂದು ಹೇಳಿದರು. ಆದಾಗ್ಯೂ, ನಮ್ಮೊಂದಿಗೆ ನಾವು ಹೊಂದಿರುವ ಯಾವುದೇ ಮಾಹಿತಿ ಪ್ರಕಾರ ಅವರು ಉಲ್ಫಾ ಸಂಘಟನೆ ಬಗ್ಗೆ ಸಹಾನುಭೂತಿ ಹೊಂದಿರುವುದು ತೋರುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಟೆಕಿ ಅಸ್ಸಾಂನಲ್ಲಿ ಉಗ್ರ!

ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಗೊಗೋಯ್ ಅವರು 'ಅಸ್ಸಾಮಿ ಸಮುದಾಯವನ್ನು ಉಳಿಸಲು' ಬಯಸಿದ್ದಾರೆ ಎಂದು ಹೇಳಿದರು. ಅಸ್ಸಾಂನಲ್ಲಿನ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ನಿಜವಾದ ಸ್ವಭಾವದ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಮ್ಮ ಜನರು ತಮ್ಮ ಸ್ವಂತ ಭೂಮಿಯಲ್ಲಿ ಅಸಹಾಯಕರಾಗಿದ್ದಾರೆ. ನಮ್ಮ ಸಮುದಾಯ ಮತ್ತು ಸಂಸ್ಕೃತಿಯನ್ನು ಈ ರೀತಿ ನಾಶಪಡಿಸುತ್ತಿರುವಾಗ ನಾನು ಏನೂ ಮಾಡದೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಭಾನುವಾರ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜೈನ್ ಹೇಳಿದ್ದಾರೆ. ಪೊಲೀಸರು ಗೊಗೊಯ್ ಅವರ ಹಿನ್ನೆಲೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಸೋಮವಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ನೆರೆಯ ಶಿವಸಾಗರದ (Sivasagar) 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಯಿತು. ನಾವು ಪ್ರಸ್ತುತ ಅವನನ್ನು ವಿಚಾರಣೆ ನಡೆಸುತ್ತಿದ್ದೇವೆ. ಅವನು ಲಿಂಕ್‌ಮ್ಯಾನ್ ಆಗಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದರು. ಪೊಲೀಸರ ಪ್ರಕಾರ, ಗೊಗೊಯ್ ಅವರ ಕುಟುಂಬಕ್ಕೆ ಅವರು ಉಲ್ಫಾ-I ಸಂಘಟನೆ ಬಗ್ಗೆ ಹೊಂದಿರುವ ಯಾವುದೇ ಹಿಂದಿನ ನಿಷ್ಠೆಯ ಬಗ್ಗೆ ತಿಳಿದಿಲ್ಲ.

ಗೊಗೊಯ್ ಅವರೊಂದಿಗೆ ಕೆಲಸ ಮಾಡಿದ ಕಾಂಗ್ರೆಸ್ ಪದಾಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅವರ ಬರಹಗಳು ದೊಡ್ಡ ಅಸ್ಸಾಮಿ ಸಮುದಾಯದ ಬಗ್ಗೆ ಅವರ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಅವರು ಏಕೆ ಈ ಹೆಜ್ಜೆ ಇಡಲು ನಿರ್ಧರಿಸಿದರು ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಅವರು ಅಸ್ಸಾಮಿ ಜಾತಿ, ಗುರುತು ಮತ್ತು ಅವರ ಸಮುದಾಯದ ಬಗ್ಗೆ ಬಲವಾದ ಅಭಿಮಾನ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ . ಅವರು ಉತ್ತಮ ಬರಹಗಾರರಾಗಿದ್ದರು ಎಂದು ಅವರು ಹೇಳಿದರು.

ಗಣರಾಜ್ಯೋತ್ಸವ: ಅಸ್ಸಾಂನಲ್ಲಿ ಉಲ್ಫಾದಿಂದ 4 ಬಾಂಬ್‌ ಸ್ಫೋಟ!

ಗೊಗೊಯ್ ಅವರ ಪೋಷಕರು ಶಿಕ್ಷಕರಾಗಿದ್ದು, ಕಾಂಗ್ರೆಸ್ ರಾಜ್ಯ ಘಟಕದ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಗೊಗೊಯ್ ಉತ್ತಮ ಕೆಲಸ ಮಾಡಿದರು ಮತ್ತು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಅವರನ್ನು ಸನ್ಮಾನಿಸಲಾಗಿತ್ತು. 2019ರಲ್ಲಿ, ಅವರನ್ನು ಪದಾಧಿಕಾರಿಯನ್ನಾಗಿ ಮಾಡಲಾಗಿತ್ತು ಎಂದು ಕಾಂಗ್ರೆಸ್ ಪದಾಧಿಕಾರಿ ಹೇಳಿದರು. ಗೊಗೊಯ್ ಅವರಿಗೆ ಚಿಕ್ಕ ಮಗನಿದ್ದಾನೆ ಮತ್ತು ದಂಪತಿಗಳು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದರು. ಭ್ರಮನಿರಸನಗೊಂಡ ಯುವಕರು, ಅದರಲ್ಲೂ ವಿಶೇಷವಾಗಿ ತಿನ್ಸುಕಿಯಾದಂತಹ ಜಿಲ್ಲೆಗಳಿಂದ ಉಲ್ಫಾ-I ಕಡೆಗೆ ಆಕರ್ಷಿತರಾಗುವುದು ಸಾಮಾನ್ಯ ಸಂಗತಿಯಲ್ಲ ಎಂದು ಕಾಂಗ್ರೆಸ್ ಪದಾಧಿಕಾರಿ ಹೇಳಿದರು. ಉದ್ಯೋಗ ಮತ್ತು ಪುನರ್ವಸತಿ ಕೊರತೆಯು ಇದಕ್ಕೊಂದು ಕಾರಣವಾಗಿದೆ ಎಂದು ಅವರು ಹೇಳಿದರು.