Asianet Suvarna News Asianet Suvarna News

ಗಣರಾಜ್ಯೋತ್ಸವ: ಅಸ್ಸಾಂನಲ್ಲಿ ಉಲ್ಫಾದಿಂದ 4 ಬಾಂಬ್‌ ಸ್ಫೋಟ!

ಗಣರಾಜ್ಯೋತ್ಸವ ಮುನ್ನ ಅಸ್ಸಾಂನಲ್ಲಿ ಉಲ್ಫಾದಿಂದ 4 ಕಡೆ ಬಾಂಬ್‌ ಸ್ಫೋಟ| ದಿಬ್ರುಗಢ ಜಿಲ್ಲೆಯಲ್ಲಿ 3 ಹಾಗೂ ಚರೈದೇವ್‌ ಜಿಲ್ಲೆಯಲ್ಲಿ 1 ಸ್ಫೋಟ

Amid Republic Day Celebrations Four Explosions Rock Assam ULFA Role Suspected
Author
Bangalore, First Published Jan 27, 2020, 10:42 AM IST
  • Facebook
  • Twitter
  • Whatsapp

ಗುವಾಹಟಿ[ಜ.27]: ಅಸ್ಸಾಂನಲ್ಲಿ ಗಣರಾಜ್ಯೋತ್ಸವ ನಡೆಯುವ ಮುನ್ನ ಭಾನುವಾರ 4 ಕಡೆ ಬಾಂಬ್‌ ಸ್ಫೋಟಗಳು ಸಂಭವಿಸಿವೆ.

ದಿಬ್ರುಗಢ ಜಿಲ್ಲೆಯಲ್ಲಿ 3 ಹಾಗೂ ಚರೈದೇವ್‌ ಜಿಲ್ಲೆಯಲ್ಲಿ 1 ಸ್ಫೋಟ ಬೆಳಗ್ಗೆ 8.15ರಿಂದ 8.25ರ ನಡುವೆ ಈ 4 ಸ್ಫೋಟಗಳು ಘಟಿಸಿವೆ. ಇದರ ಬೆನ್ನಲ್ಲೇ ಸಂಜೆ ನಿಷೇಧಿತ ಉಲ್ಫಾ-ಐ ಉಗ್ರ ಸಂಘಟನೆಯು ಘಟನೆಯ ಹೊಣೆ ಹೊತ್ತುಕೊಂಡಿದೆ. ಇದೇ ಸಂಘಟನೆಯು ಗಣರಾಜ್ಯೋತ್ಸವ ಆಚರಣೆ ನಿಷೇಧಕ್ಕೂ ಕರೆ ನೀಡಿತ್ತು.

ಸ್ಫೋಟ ಸಂಭವಿಸಿದ 1 ಸ್ಥಳದ ಸಿಸಿಟೀವಿ ದೃಶ್ಯ ಲಭಿಸಿದ್ದು, ಅದರಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು, ಗ್ರೆನೇಡ್‌ ಎಸೆದು ಪರಾರಿಯಾಗಿರುವುದು ಕಂಡುಬರುತ್ತದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ಕೃತ್ಯ ಖಂಡಿಸಿದ್ದು, ಉಗ್ರ ಗುಂಪುಗಳು ಹತಾಶರಾಗಿ ಈ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ.

Follow Us:
Download App:
  • android
  • ios