Sorry ಅಮ್ಮಾ ನಿನ್ನನ್ನು ಕೊಂದು ಬಿಟ್ಟೆ.. ಇನ್‌ಸ್ಟಾಗ್ರಾಂ ಪೋಸ್ಟ್ ಹಾಕ್ಕೊಂಡ ಮಗ!
ರಾಜ್‌ಕೋಟ್‌ನಲ್ಲಿ ಯುವಕನೋರ್ವ ತಾಯಿಯನ್ನು ಕೊಲೆ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದ ಪೊಲೀಸರು ಆರೋಪಿ ಮಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳೆಯ ಅಂತಿಮ ಸಂಸ್ಕಾರಕ್ಕೆ ಪೊಲೀಸರೇ ಸಿದ್ಧತೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಗಾಂಧಿನಗರ: ಯುವಕನೋರ್ವ ತಾಯಿಯನ್ನು ಕೊಲೆ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಲೇ ಓರ್ವ ವ್ಯಕ್ತಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಮಹಿಳೆಯ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಆರೋಪಿ ಮಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರೇ ಮಹಿಳೆಯ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆ ಗುಜರಾತಿನ ರಾಜ್‌ಕೋಟ್‌ನಲ್ಲಿ ಮಗನೇ ತಾಯಿಯನ್ನು ಕೊಲೆ ಮಾಡಿದ್ದಾನೆ. ರಾಜ್‌ಕೋಟ್ ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ನೀಲೇಶ್ ಎಂಬ ಯುವಕ ತಾಯಿಯನ್ನು ಕೊಲೆ ಮಾಡಿದ್ದಾನೆ. ಈ ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಎಸ್‌ಪಿ ರಾಧಿಕಾ ಭಾರಧ್ವಜ್, ನಮಗೆ ಮೊದಲು ಭರತ್ ಎಂಬವರಿಂದ ಕರೆ ಬರುತ್ತದೆ. ನೀಲೇಶ್ ಎಂಬ ಯುವಕ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದರು. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಹೋದ ನಮ್ಮ ಪೊಲೀಸರು 48 ವರ್ಷದ ಜ್ಯೋತಿಬೆನ್ ಗೊಸಾಯಿ ಎಂಬವರ ಶವ ವಶಪಡಿಸಿಕೊಂಡಿದ್ದಾರೆ. ಆರೋಪಿ ಸಹ ತಾಯಿಯನ್ನು ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಆರೋಪಿ ನೀಲೇಶ್ ಮಾನಸಿಕ ಅಸ್ವಸ್ಥನಾಗಿದ್ದು, ಮೊದಲಿಗೆ ಚಾಕುವಿನಿಂದ ಇರಿದುಕೊಳ್ಳಲು ಮುಂದಾಗಿದ್ದನು. ಆ ಸಂದರ್ಭದಲ್ಲಿ ಮಗನನ್ನು ತಡೆದ ತಾಯಿ ಆತನ ಕೈಯಲ್ಲಿದ್ದ ಚಾಕು ಕಸಿದುಕೊಂಡಿದ್ದಾರೆ. ನಂತರ ನೀಲೇಶ್, ಬೆಡ್‌ಶೀಟ್‌ನಿಂದ ತಾಯಿ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಒಂಟಿಯಾಗಿ ಕುಳಿತಿದ್ದ ನೀಲೇಶ್ , ತಾಯಿ ಜೊತೆ ಕುಳಿತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು, ಅಮ್ಮಾ… ಕ್ಷಮಿಸು ನಾನು ನಿನ್ನನ್ನು ಕೊಂದೆ, ನನಗೆ ನಿನ್ನ ನೆನಪು ಬರುತ್ತಿದೆ. ಓಂ ಶಾಂತಿ ಎಂದು ಬರೆದುಕೊಂಡದ್ದನು.
ಸೀಮಂತದ ದಿನವೇ ಪತ್ನಿಯ MMS ಲೀಕ್ ಮಾಡಿ ಅತಿಥಿಗಳಿಗೆ ತೋರಿಸಿದ ಗಂಡ- ವಿಶ್ ಮಾಡೋಕೆ ಬಂದು ತಗ್ಲಾಕೊಂಡ ಗೆಳೆಯ!
ಆರೋಪಿ ನೀಲೇಶ್ ತಾಯಿ ಜ್ಯೋತಿಬೆನ್, ಹಲವು ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ನೀಲೇಶ್ ತಂದೆ 20 ವರ್ಷಗಳ ಹಿಂದೆಯೇ ಇವರನ್ನು ಬಿಟ್ಟು ಹೋಗಿದ್ದರಿಂದ, ತಾಯಿ-ಮಗ ಜೊತೆಯಾಗಿ ವಾಸವಾಗಿದ್ದರು. ಕಳೆದ ಕೆಲವು ದಿನಗಳಿಂದ ಜ್ಯೋತಿಬೆನ್ ತಮ್ಮ ಮಾನಸಿಕ ರೋಗಕ್ಕೆ ಸಂಬಂಧಿಸಿದ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರಿಂದ ರೋಗದ ಉಲ್ಬಣತೆ ಹೆಚ್ಚಾಗಿತ್ತು. ಇದೇ ವಿಚಾರವಾಗಿ ತಾಯಿ-ಮಗನ ನಡುವೆ ಗಲಾಟೆ ಆಗುತ್ತಿತ್ತು. ತಾಯಿಯ ಆರೋಗ್ಯದಿಂದ ನೀಲೇಶ್ ಸಹ ಮಾನಸಿಕ ಒತ್ತಡಕ್ಕೊಳಗಾಗಿದ್ದನು. ಔಷಧಿ ತೆಗೆದುಕೊಳ್ಳುವ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ವರದಿಯಾಗಿದೆ.
ಜ್ಯೋತಿಬೆನ್ ಗೊಸಾಯಿ ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ನಂತರ ಪೊಲೀಸರು ಕರೆ ಮಾಡಿ ಜ್ಯೋತಿಬೆನ್ ಪತಿಗೆ ವಿಷಯ ತಿಳಿಸಿದ್ದಾರೆ. ಆದ್ರೆ ಜ್ಯೋತಿಬೆನ್ ಶವವನ್ನು ಸ್ವೀಕರಿಸಲು ಪತಿ ಹಿಂದೇಟು ಹಾಕಿದ್ದಾನೆ. ನನಗೂ ಮತ್ತು ಜ್ಯೋತಿಬೆನ್ ಗೊಸಾಯಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಕೊನೆಗೆ ಪೊಲೀಸರೇ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ ಎಂದು ವರದಿಯಾಗಿದೆ.
ಮದುವೆಗೆ ಪ್ರಿಯಕರನ ಕಂಡೀಷನ್.. 3 ವರ್ಷದ ಮಗಳ ಉಸಿರು ನಿಲ್ಲಿಸಿ, ಟ್ರೋಲಿ ಬ್ಯಾಗ್‌ನಲ್ಲಿ ತುಂಬಿ ಎಸೆದ ಕಟುಕಿ ತಾಯಿ