ಪ್ರಿಯಕರನ ಮಗುವಿಗೆ ಗರ್ಭಿಣಿಯಾಗಿ ಗಂಡನಿಗೆ ನಿನ್ನದೇ  ಮಗು ಎಂದು ಹೇಳಿದ್ದಳು. ಎಲ್ಲಾ ಸಾಕ್ಷಿ ಸಂಗ್ರಹ ಮಾಡಿಕೊಂಡ ಗಂಡ ಎಲ್ಲರ ಮುಂದೆಯೇ ಪತ್ನಿಯ ಎಂಎಂಎಸ್ ವಿಡಿಯೋ ರಿಲೀಸ್ ಮಾಡಿದ್ದಾನೆ.

ನವದೆಹಲಿ: ವ್ಯಕ್ತಿಯೋರ್ವ ಸೀಮಂತ ದಿನವೇ ಪತ್ನಿಯ ಎಂಎಂಎಸ್ ಲೀಕ್ ಮಾಡಿ, ಬಂದಿದ್ದ ಅತಿಥಿಗಳೆಲ್ಲರಿಗೂ ವಿಡಿಯೋ ತೋರಿಸಿದ್ದಾನೆ. ತನ್ನ ಪತ್ನಿಗೆ ನಾನಿಲ್ಲದ ಸಮಯದಲ್ಲಿ ಬೇರೆಯವರನ್ನು ಕರೆಸಿಕೊಂಡು ಮುದ್ದಾಡಿದ ವಿಡಿಯೋವನ್ನು ರಿವೀಲ್ ಮಾಡಿ, ಹುಟ್ಟಲಿರುವ ಮಗು ನನ್ನದಲ್ಲ ಎಂದು ಘೋಷಣೆ ಮಾಡಿ, ಮಡದಿಯ ಮೋಸದಾಟವನ್ನು ಬಯಲು ಮಾಡಿದ್ದಾನೆ. ಪತ್ನಿ ಅಕ್ರಮ ಸಂಬಂಧ ಹೊಂದಿರುವ ವಿಷಯ ತಿಳಿಯುತ್ತಲೇ ಗಂಡ ಹಂತ ಹಂತವಾಗಿ ಸಾಕ್ಷಿಗಳನ್ನು ಸಂಗ್ರಹ ಮಾಡಿಕೊಂಡಿದ್ದಾನೆ. ಈ ಸಾಕ್ಷಿಗಳಲ್ಲಿ ಪತ್ನಿಯ ಎಂಎಂಎಸ್ ಸಹ ಇತ್ತು. 

ಪ್ರೇಮಿಯಿಂದ ಗರ್ಭಿಣಿಯಾದ್ರೂ ಗಂಡನಿಗೆ ನಿನ್ನದೇ ಮಗು ಎಂದು ಹೇಳಿದ್ದಳು. ಅಕ್ರಮ ಸಂಬಂಧದ ವಿಷಯ ತಿಳಿದರೂ ಗಂಡ ಸುಮ್ಮನಿದ್ದನು. ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಸೀಮಂತ ಕಾರ್ಯಕ್ರಮ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಈ ವೇಳೆಗಾಗಲೇ ವ್ಯಕ್ತಿಯ ತಾಳ್ಮೆಯ ಕಟ್ಟೆ ಒಡೆದಿತ್ತು. ಸೀಮಂತ ಕಾರ್ಯಕ್ರಮಕ್ಕೆ ಪತಿ ತನ್ನ ವಕೀಲರನ್ನು ಕರೆಸಿಕೊಂಡಿದ್ದನು. ವಕೀಲ ಹಾಗೂ ಸೀಮಂತಕ್ಕೆ ಆಗಮಿಸಿದ್ದ ಎಲ್ಲಾ ಅತಿಥಿಗಳ ಮುಂದೆ ಮಡದಿಯ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ ಎಂದು ಘೋಷಣೆ ಮಾಡಿದ್ದಾನೆ. ಈ ಘೋಷಣೆಯಯಿಂದಾಗಿ ಅತಿಥಿಗಳೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದರು.

ಸರಸ ಸಲ್ಲಾಪದಲ್ಲಿದ್ದಾಗಲೇ ಸಿಕ್ಕಿ ಬಿದ್ದ ಮಹಿಳೆ; ಮಕ್ಕಳ ಮುಂದೆ ಕಟ್ಟಿ ಹಾಕಿ ಥಳಿಸಿದ್ರು!

ಇಷ್ಟು ಮಾತ್ರವಲ್ಲ ಹುಟ್ಟಲಿರುವ ಮಗುವಿನ ಡಿಎನ್‌ಎ ವರದಿಯನ್ನು ಬಹಿರಂಗಪಡಿಸಿದ್ದು, ಇದು ನನ್ನ ಮಗು ಅಲ್ಲ ಎಂದು ಸಾಬೀತು ಆಗಿದೆ ಎಂದು ಹೇಳಿದ ವಕೀಲರು, ಮಹಿಳೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದಾಗ ಲ್ಯಾಪ್‌ಟಾಪ್‌ನಲ್ಲಿ ಬೇರೊಬ್ಬನ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಎಲ್ಲರಿಗೂ ತೋರಿಸಿದ್ದಾರೆ. ಇದನ್ನು ನೋಡುತ್ತಲೇ ಮಹಿಳೆ ಶಾಕ್ ಆಗಿದ್ದಳು. ಪ್ರೇಯಸಿ ಸೀಮಂತಕ್ಕೆ ಆಕೆಯ ಗೆಳೆಯ ಬಂದಿದ್ದನು. ವಿಡಿಯೋ ನೋಡುತ್ತಿದ್ದಂತೆ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದನು. ಮಹಿಳೆಯ ಪತಿ ಆತನನ್ನು ಹಿಡಿದು ಎಲ್ಲರ ಮುಂದೆ ನಿಲ್ಲಿಸಿದ್ದಾನೆ.

ಇದರಿಂದ ಕೋಪಗೊಂಡ ವ್ಯಕ್ತಿಯ ಪೋಷಕರು, ಪ್ರಿಯಕರನನ್ನ ಹಿಡಿದು ಧರ್ಮದೇಟು ನೀಡಿದ್ದಾರೆ. ಇತ್ತ ಮಹಿಳೆ ಕುಟುಂಬಸ್ಥರಿಗೆ ಸ್ಪಷ್ಟನೆ ನೀಡಲು ಪ್ರಯತ್ನಿಸುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಧರ್ಮದೇಟು ತಿನ್ನುತ್ತಲೇ ಪ್ರಿಯಕರ ಅಲ್ಲಿಂದ ಓಡಿ ಹೋಗಿದ್ದಾನೆ. ಇತ್ತ ವ್ಯಕ್ತಿ ಡಿವೋರ್ಸ್ ನೀಡುವುದಾಗಿ ಘೋಷಿಸಿ ಮಡದಿ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿ ಹೊರಟಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, 19 ಮಿಲಿಯನ್ ವ್ಯೂವ್ ಪಡೆದುಕೊಂಡಿದ್ದು, 73 ಸಾವಿರಕ್ಕೂ ಅಧಿಕ ಕಮೆಂಟ್ ಬಂದಿವೆ. 

ಅಕ್ರಮ ಸಂಬಂಧದ ಭಯಾನಕ ಅಂತ್ಯ - ಬೆರಳು ಕತ್ತರಿಸಿ, ಮೂಳೆ ಮುರಿದು, ಕಣ್ಣು ಕಿತ್ತು ಮರ್ಮಾಂಗವನ್ನೇ ಕಟ್ ಮಾಡಿದ್ರು!

Scroll to load tweet…