ಅಮಿತ್ ಶಾ ರಾಜಕೀಯ ಕರಿಯರ್‌ನಲ್ಲಿ ಸೊಹ್ರಬುದ್ದೀನ್ ಎನ್‌ಕೌಂಟ್ ಕೇಸ್ ಅತ್ಯಂತ ಪ್ರಮುಖ ಘಟ್ಟ. ಈ ಪ್ರಕರಣದಲ್ಲಿ ಅಮಿತ್ ವಿರುದ್ಧ ಪ್ರಕರಣ ವಜಾ ಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದೇನು?
ನವದೆಹಲಿ (ಸೆ.28) ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಇತ್ತೀಚೆಗೆ ಸಲ್ಲಿಕೆಯಾಗಿದ್ದ ಅರ್ಜಿಯೊಂದು ಭಾರಿ ಕುತೂಹಲ ಕೆರಳಿಸಿತ್ತು. 2005ರಲ್ಲಿ ಗುಜರಾತ್‌ನಲ್ಲಿ ನಡೆದ ಸೊಹ್ರಬುದ್ದೀನ್ ಎನ್‌ಕೌಂಟ್ ಪ್ರಕರಣ ಸಂಬಂಧ ಈ ಅರ್ಜಿ ಸಲ್ಲಿಕೆಯಾಗಿತ್ತು. ಅಮಿತ್ ಮೇಲಿನ ಪ್ರಕರಣ ವಜಾಗೊಳಿಸಿದ್ದು ಹಾಗೂ 22 ಆರೋಪಿಗಳ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸೊಹ್ರಬುದ್ದೀನ್ ಸಹೋದರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಅಮಿತ್ ಶಾ ವಜಾಗೊಳಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದೇ ವೇಳೆ ಖುಲಾಸೆಗೊಂಡಿರುವ 22 ಆರೋಪಿಗಳ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸೇರಿದಂತೆ ತ್ರಿಸದಸ್ಯ ಪೀಠ ಸೊಹ್ರಬುದ್ದೀನ್ ಸಹೋದರ ರುಬಾಬುದ್ದಿನ್ ಶೇಕ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಈ ಸೂಚನೆ ನೀಡಿದೆ. ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ 43ನೇ ಪ್ಯಾರಾ ಪರಾಮರ್ಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಮಿತ್ ಶಾರನ್ನು ಈ ಪ್ರಕರಣದಿಂದ ವಜಾಗೊಳಿಸಿ ಪ್ರಶ್ನಿಸಿದ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದಕ್ಕೆ ಕಾರಣಗಳನ್ನು ಹೇಳಿದೆ. ಇದೇ ವೇಳೆ 22 ಆರೋಪಿಗಳನ್ನು ಖುಲಾಸೆಗೊಳಿಸಿದ ತೀರ್ಪು ಎತ್ತಿಹಿಡಿದ ಬಾಂಬೆ ಹೈಕೋರ್ಟ್ ತೀರ್ಪಿನ ಕುರಿತು ಮರುಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಅಮಿತ್ ಶಾ ವಜಾ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ್ದೇಕೆ?
ಸೊಹ್ರಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾರನ್ನು ಸಿಬಿಐ ಕೋರ್ಟ್ 2014ರಲ್ಲಿ ವಜಾ ಮಾಡಿತ್ತು. ಈ ವಜಾ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ದಾಖಲಾಗಿತ್ತು. ಈ ಕುರಿತು ಎರಡೂ ಕೋರ್ಟ್‌ಗಳು ಪುನರ್ ಪರಿಶೀಲನೆ ನಡೆಸಿದೆ. ಹೀಗಾಗಿ ಮತ್ತೆ ಇದೇ ಅರ್ಜಿಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
22 ಆರೋಪಿಗಳ ಖುಲಾಸೆ ವೇಳೆ ಅಮಿತ್ ಶಾ ಕುರಿತು ಪ್ರಶ್ನೆ ಎದುರಾಗಿತ್ತು. ಈ ವೇಳೆ ಬಾಂಬೆ ಹೈಕೋರ್ಟ್ ಇದು ರಾಜಕೀಯ ಪ್ರೇರಿತ ಎಂದು ವಾದವನ್ನು ತಳ್ಳಿ ಹಾಕಿದೆ. ಮತ್ತೆ ಇದೇ ಅರ್ಜಿ ಕೈಗೆತ್ತಿಕೊಳ್ಳುವುದಿಲ್ಲ. ಆದರೆ 22 ಆರೋಪಿಗಳ ಖುಲಾಸೆಯನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೆಲ ಸಾಕ್ಷಿಗಳ ಹೇಳಿಕೆಯನ್ನು ನಾವು ನೋಡುತ್ತೇವೆ ಎಂದು ಕೋರ್ಟ್ ಹೇಳಿದೆ.
2005ರಲ್ಲಿ ಸೊಹ್ರಬುದ್ದೀನ್‌ನ್ನು ಗುಜರಾತ್ ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಬಳಿಕ ಸೊಹ್ರಬುದ್ದಿನ್ ಪತಿ ಕೌಸರ್‌ನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು. ಗುಜರಾತ್ ಗೃಹ ಸಚಿವನಾಗಿದ್ದ ಅಮಿತ್ ಶಾ ವಿರುದ್ಧ ನಕಲಿ ಎನ್‌ಕೌಂಟರ್ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಸಂಬಂಧ 2014ರಲ್ಲಿ ಅಮಿತ್ ಶಾರನ್ನು ಪ್ರಕರಣದಿಂದ ವಜಾಗೊಳಿಸಲಾಗಿತ್ತು. ಇಷ್ಟೇ ಅಲ್ಲ 22 ಆರೋಪಿಗಳನ್ನು ಖುಲಾಸಗೊಳಿಸಲಾಗಿತ್ತು.


