Asianet Suvarna News Asianet Suvarna News

ರಾಮ ಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್, ರಾಮ ವಿರೋಧಿಗಳಿಗೆ ಜಾಗವಿಲ್ಲ ಎಂದ ಜನ!

ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕ್ರಮ ಅನ್ನೋ ಕಾರಣ ನೀಡಿ ಉದ್ಘಾಟನೆಯಿಂದ ದೂರ ಉಳಿದಿದೆ. ಆದರೆ ಕಾಂಗ್ರೆಸ್ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲ ರಾಮನ ವಿರೋಧಿಗಳಿಗೆ ರಾಮಗರಿಯಲ್ಲಿ ಸ್ಥಾನವಿಲ್ಲ ಎಂದು ಪ್ರತಿಕ್ರೆಯಗಳು ವ್ಯಕ್ತವಾಗುತ್ತಿದೆ.
 

Social Media reaction on Congress decline Ram Mandir Pran Pratishta invitation ckm
Author
First Published Jan 10, 2024, 5:36 PM IST

ನವದೆಹಲಿ(ಜ.10) ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ರಾಮ ಮಂದಿರ ಉದ್ಘಾಟನೆಗೆ ಬಹುತೇಕ ಗಣ್ಯರನ್ನು ಆಹ್ವಾನಿಸಲಾಗಿದೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರನ್ನೂ ಪ್ರಾಣಪ್ರತಿಷ್ಠೆಗೆ ಆಹ್ವಾನಿಸಲಾಗಿದೆ. ಇಷ್ಟು ದಿನ ಶ್ರೀರಾಮ ಎಲ್ಲರಿಗೂ ಆದರ್ಶ, ಶ್ರೀರಾಮನ್ನು ಬಿಜೆಪಿ ಹೈಜಾಕ್ ಮಾಡಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಇದೀಗ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ತಿರಸ್ಕರಿಸಿದೆ. ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕ್ರಮ ಎಂದು ಕಾರಣನೀಡಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದೆ. ಕಾಂಗ್ರೆಸ್ ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆ ಪರ ವಿರೋಧಗಳು ವ್ಯಕ್ತವಾಗಿದೆ. ಈ ಪೈಕಿ ರಾಮ ವಿರೋಧಿಗಳಿಗೆ ರಾಮನಗರಿಯಲ್ಲಿ ಜಾಗವಿಲ್ಲ. ಉದ್ಘಾಟನೆಯಿಂದ ದೂರ ಉಳಿದಿರುವ ಕಾಂಗ್ರೆಸ್‌ಗೆ ಧನ್ಯವಾದ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀರಾಮ ಕಾಲ್ಪನಿಕ, ಶ್ರೀರಾಮ ಇರುವಿಕೆಗೆ ಇತಿಹಾಸದಲ್ಲಿ ಯಾವುದೇ ದಾಖಲೆ ಇಲ್ಲ ಎಂದು 2007ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಲವು ಬಾರಿ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾಂಗ್ರೆಸ್ ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿದಿರುವುದು ಆಶ್ಚರ್ಯವಿಲ್ಲ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ಮಾಡಿದ್ದಾರೆ.

Breaking: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಹೋಗೋದಿಲ್ಲ, ಕಾಂಗ್ರೆಸ್‌ ಅಧಿಕೃತ ಘೋಷಣೆ!

ಜೈ ಶ್ರೀರಾಮ ಘೋಷಣೆ ಕಾಂಗ್ರೆಸ್‌ಗೆ ಅಲರ್ಜಿ, ಮೋದಿ..ಮೋದಿ ಘೋಷಣೆ ಕೇಳಿದರೆ ಕಾಂಗ್ರೆಸ್ ಉರಿದು ಬೀಳುತ್ತದೆ. ಜನವರಿ 22ರ ರಾಮ ಮಂದಿರ ಪ್ರಾಣಪ್ರತಿಷ್ಛೆಯಲ್ಲಿ ಈ ಎರಡು ಘೋಷಣೆಗಳು ಇದ್ದೇ ಇರುತ್ತೆ. ರಾಮ ಮಂದಿರದೊಳಗೆ ಹಾಗೂ ರಾಮ ಮಂದಿರ ಆವರಣದೊಳಗೆ ಜೈಶ್ರೀರಾಮ ಘೋಷಣೆ ಇದ್ದರೆ, ಆಯೋಧ್ಯೆಯಲ್ಲಿ ಜೈಶ್ರೀರಾಮ್ ಜೊತೆಗೆ ಮೋದಿ ಮೋದಿ ಘೋಷಣೆಗಳು ಇರಲಿದೆ. ಇವೆರಡನ್ನು ಕಾಂಗ್ರಸ್‌ಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಬರದೇ ಇರುವುದು ಒಳ್ಳೆಯದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

 

 

ಕಾಂಗ್ರೆಸ್ ನಿರ್ಧಾರ ಮುಂಬರುವ ಲೋಕಸಭೆಯಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋ ಚರ್ಚೆಯೂ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದೆ. ರಾಮ ಮಂದಿರ ಆಹ್ವಾನ ತಿರಸ್ಕರಿಸುವ ಮೂಲಕ ಕಾಂಗ್ರೆಸ್ 40 ಸ್ಥಾನವನ್ನೂಪಡೆಯುವುದಿಲ್ಲ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಿರ್ಧಾರ ಸರಿಯಾಗಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಬಿಜೆಪಿ ರಾಮ ಮಂದಿರವನ್ನು ರಾಜಕೀಯವಾಗಿ ಬಳಸಿಕೊಂಡಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಅಯೋಧ್ಯೆ ರಾಮ ಮಂದಿರ ಪ್ರಸಾದ ರಾಮ್‌ ಹಲ್ವಾ ಸಿದ್ಧಪಡಿಸುವಾತ 12 ವಿಶ್ವ ದಾಖಲೆ ಹೊಂದಿರೋ ಬಾಣಸಿಗ
 

Follow Us:
Download App:
  • android
  • ios