ಕೇರಳದ ಈ ಪೊಲೀಸ್ ಠಾಣೆಗೆ ಹಾವುಗಳೇ ಕಾವಲುಗಾರರು
ಸಾಮಾನ್ಯವಾಗಿ ಪೊಲೀಸರನ್ನು ಊರಿನ ಕಾವಲುಗಾರರು ಅಂತಾನೇ ಹೇಳಬಹುದು. ಎಲ್ಲಿ ಏನೇ ಅನಾಹುತ ಸಂಭವಿಸಿದರು ಅಲ್ಲಿಗೆ ಮೊದಲು ತಲುಪುವುದು ಪೊಲೀಸರು.ಇಂತಹ ಪೊಲೀಸರಿರುವ ಠಾಣೆಗೆ ಹಾವುಗಳು ಕಾವಲು ನಿಂತಿವೆ.
ಸಾಮಾನ್ಯವಾಗಿ ಪೊಲೀಸರನ್ನು ಊರಿನ ಕಾವಲುಗಾರರು ಅಂತಾನೇ ಹೇಳಬಹುದು. ಎಲ್ಲಿ ಏನೇ ಅನಾಹುತ ಸಂಭವಿಸಿದರು ಅಲ್ಲಿಗೆ ಮೊದಲು ತಲುಪುವುದು ಪೊಲೀಸರು.ಇಂತಹ ಪೊಲೀಸರಿರುವ ಠಾಣೆಗೆ ಹಾವುಗಳು ಕಾವಲು ನಿಂತಿವೆ. ಹಾಗಂತ ಇವು ನಿಜವಾದ ಹಾವುಗಳಲ್ಲ. ಇವು ಚೈನೀಸ್ ಪ್ಲಾಸ್ಟಿಕ್ ಹಾವುಗಳು. ಇವು ಹೇಗೆ ಪೊಲೀಸ್ ಠಾಣೆ ಕಾಯುತ್ತವೆ. ಪ್ಲಾಸ್ಟಿಕ್ ಹಾವುಗಳು ಬೇರೆ ಅಂತ ಯೋಚಿಸುತ್ತಿದ್ದೀರಾ. ಮುಂದೆ ಓದಿ.
ಕೇರಳದ ಇಡುಕ್ಕಿಯಲ್ಲಿರುವ ಕಾಡಂಚಿನ ಗ್ರಾಮದಲ್ಲಿರುವ ಪೊಲೀಸ್ ಠಾಣೆಗೆ ಬರುವ ಕೋತಿಗಳು ಇಲ್ಲಿನ ಪೊಲೀಸರಿಗೆ ಕೋತಿಗಳು ಇನ್ನಿಲ್ಲದ ಹಾವಳಿ ನೀಡುತ್ತವೆ ಅಂತೆ. ಕೋತಿಗಳ ಕಿತಾಪತಿಯಿಂದ ಕಂಗೆಟ್ಟ ಪೊಲೀಸರು ಕೋತಿಗಳಿಗೆ ಬುದ್ದಿ ಕಲಿಸಲು ಹೊಸ ಪ್ಲಾನ್ ಮಾಡಿದ್ದಾರೆ. ಅದರಂತೆ ಕಾಡಾಂಚಿನಲ್ಲಿರುವ ಪೊಲೀಸ್ ಠಾಣೆ ಮುಂದೆ ಜೀವಂತ ಹಾವುಗಳಂತೆ ಕಾಣುವ ಪ್ಲಾಸ್ಟಿಕ್ ಹಾವುಗಳನ್ನು ತಂದಿಟ್ಟಿದ್ದಾರೆ.
ಮೊಸಳೆ ಜೊತೆ ಯುವಕನ ಚೆಲ್ಲಾಟ, ಆಮೇಲೇನಾಯ್ತು ನೋಡಿ
ಸಾಮಾನ್ಯವಾಗಿ ಹಾವುಗಳೆಂದರೆ ಎಲ್ಲರೂ ಹಾರಿಬಿದ್ದು, ಜೀವ ಉಳಿಸಿಕೊಳ್ಳಲು ಓಡುತ್ತಾರೆ. ಹಾಗಂತ ಹಾವುಗಳಿಗೆ ಕೇವಲ ಮನುಷ್ಯರು ಮಾತ್ರ ಹೆದರಿಕೊಳ್ಳುತ್ತಾರೆ ಎಂದು ಭಾವಿಸಬೇಡಿ, ಮನುಷ್ಯರ ಪೂರ್ವಜರು ಎಂದು ಕರೆಯುವ ಮಂಗಗಳು ಕೂಡ ಹಾವಿಗೆ(Snake) ಹೆದರುತ್ತವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಈ ಕೋತಿಗಳ ಉಪಟಳದಿಂದ ಬಚಾವಾಗಾಲು ಹಾವು ತಂದಿಟ್ಟಿದ್ದು, ಈ ಹಾವುಗಳು ಬಂದ ಮೇಲೆ ಕೋತಿಗಳ ಉಪಟಳ ಕಡಿಮೆ ಆಗಿದೆ ಅಂತೆ.
ಕೇರಳದ (Kerala) ಇಡುಕಿಯ(Idukki) ನೆಡುಮ್ಕಂಡಮ್, ಸಮೀಪದ ಕುಂಬುಮ್ಮೆಟ್ಟು ಪೊಲೀಸ್ ಠಾಣೆಯೂ (Cumbummettu police station) ಕಾಡಂಚಿನಲ್ಲಿದ್ದು, ಕೇರಳ ಹಾಗೂ ತಮಿಳುನಾಡು ಗಡಿಗೆ ಹತ್ತಿರದಲ್ಲಿದೆ. ಈ ಪೊಲೀಸ್ ಠಾಣೆಗೆ ಹತ್ತಿರದ ಕಾಡಿನಿಂದ ಕೋತಿಗಳು ಬಂದು ನಿರಂತರ ಹಾವಳಿ ನೀಡುತ್ತಿವೆ. ಈ ಕೋತಿಗಳ ಹಾವಳಿಯಿಂದ ಬೇಸತ್ತ ಪೊಲೀಸರು ಪೊಲೀಸ್ ಠಾಣೆಯ ಸುತ್ತಮುತ್ತ ಮರಗಳಲ್ಲಿ ಪೊಲೀಸ್ ಠಾಣೆಯ ಕಿಟಕಿಯ ಸರಳುಗಳ ಮಧ್ಯೆ ಮರಗಳ ಟೊಂಗೆಗಳ ಮೇಲೆ ಈ ಚೀನಾ ನಿರ್ಮಿತ ಹಾವುಗಳನ್ನು ಅಳವಡಿಸಿದ್ದಾರೆ. ಈ ಹಾವುಗಳು ನೋಡಲು ನಿಜವಾದ ಹಾವುಗಳಂತೆಯೇ ಕಾಣುತ್ತಿದ್ದು, ಇವುಗಳನ್ನು ಅಳವಡಿಸಿದ ನಂತರ ಪೊಲೀಸರಿಗೆ ಕೋತಿಗಳ ಕಾಟ ತಪ್ಪಿದೆಯಂತೆ.
ಬಿಹಾರದ ಶಾಕಿಂಗ್ ಫೋಟೋ ವೈರಲ್, ವಿಷಸರ್ಪಗಳನ್ನು ಹಿಡಿದು ಕುಣಿದ ಜನ, ಮಕ್ಕಳ ಕೈಯ್ಯಲ್ಲೂ ಹಾವುಗಳು!
ಸಮೀಪದಲ್ಲಿ ಇರುವ ಎಸ್ಟೇಟ್ ನೋಡಿಕೊಳ್ಳುವವರು ಈ ಉಪಾಯವನ್ನು ಪೊಲೀಸರಿಗೆ ತಿಳಿಸಿದರಂತೆ, ಅವರು ಕೂಡ ಕೋತಿಗಳನ್ನು ಓಡಿಸಲು ತಮ್ಮ ತೋಟದ ಸುತ್ತ ಈ ರೀತಿಯ ಪ್ಲಾಸ್ಟಿಕ್ ಹಾವುಗಳನ್ನು ಅಳವಡಿಸಿದ್ದರಂತೆ. ಹೀಗೆ ಈ ಪ್ಲಾಸ್ಟಿಕ್ ಹಾವುಗಳನ್ನು ತಂದಿಟ್ಟ ಮೇಲೆ ಕೋತಿಗಳ ಹಾವಳಿ ಸಂಪೂರ್ಣವಾಗಿ ತಪ್ಪಿದೆ. ಯಾವೊಂದು ಕೋತಿಯೂ ಇದುವರೆಗೆ ಪೊಲೀಸ್ ಠಾಣೆ ಸಮೀಪ ತುಳಿದಿಲ್ಲ ಎಂದು ಹೇಳುತ್ತಾರೆ ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್ ಪಿಕೆ ಲಾಲ್‌ಭಾಯ್ (PK Lalbhai).
ನಗರ ಪ್ರದೇಶಗಳ ದೇಗುಲದ ಪರಿಸರದಲ್ಲಿ ವಾಸವಿರುವ ಕೋತಿಗಳು ಅಲ್ಲಿಗೆ ಬಂದವರ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಓಡುವ, ಜೊತೆಗೆ ವಸ್ತುಗಳನ್ನು ಕಿತ್ತುಕೊಳ್ಳಲು ನೋಡಿ ಬೆದರಿಸುವ ದೃಶ್ಯಗಳನ್ನು ನೀವು ಈಗಾಗಲೇ ನೋಡಿರಬಹುದು. ಕೋತಿಗಳ ಉಪಟಳಕ್ಕೆ ಸಿಲುಕಿ ಜನ ಪರದಾಡುವ ಹಲವು ವಿಡಿಯೋಗಳಿವೆ. ಅದೇ ರೀತಿ ಕೆಲ ದಿನಗಳ ಹಿಂದೆ ಕೋತಿ ಯೊಂದು ಮಥುರಾದ ಜಿಲ್ಲಾ ನ್ಯಾಯಾಧೀಶರ ಕೈಯಲ್ಲಿದ್ದ ಸನ್‌ಗ್ಲಾಸ್ ಎತ್ತಿಕೊಂಡು ಓಡಿ ಹೋಗಿತ್ತು. ಸನ್‌ಗ್ಲಾಸ್ ಹಾಕಿಕೊಂಡು ಬಿಸಿಲಿನಲ್ಲಿ ನಡೆಯುತ್ತಿದ್ದರೆ ಅದು ಕಣ್ಣಿಗೆ ತಂಪು ನೀಡುವುದು. ಅದೇ ರೀತಿ ದೊಡ್ಡ ಅಧಿಕಾರಿಗಳು ಗಣ್ಯರು ಸಿನಿಮಾ ತಾರೆಯರು ಹೀಗೆ ಉಳ್ಳವರೆಲ್ಲಾ ಸನ್‌ಗ್ಲಾಸ್ ಹಾಕಿಕೊಂಡು ತಿರುಗಾಡುತ್ತಾರೆ. ಹೀಗೆ ಸನ್‌ಗ್ಲಾಸ್ ಹಾಕಿಕೊಂಡು ಕೂಲಾಗಿ ಬಿಸಿಲಿನಲ್ಲಿ ತಿರುಗಾಡುತ್ತಿದ್ದ ಜನರನ್ನು ನೋಡಿದ ಕೋತಿಗೆ ಏನನಿಸಿತೋ ಏನೋ. ತನಗೂ ಹಾಗೆ ಕೂಲಾಗಿ ಕಣ್ಣಿಗೆ ಕನ್ನಡಕ ಹಾಕಿ ತಿರುಗಾಡಬೇಕು ಅನಿಸಿರಬೇಕು. ನ್ಯಾಯಾಧೀಶರ ಕೈಯಲ್ಲಿದ್ದ ಕೂಲಿಂಗ್ ಗ್ಲಾಸ್ ಎತ್ತಿಕೊಂಡು ಓಡಿ ಹೋಗಿ ಮಹಡಿ ಏರಿತ್ತು.