ಮೊಸಳೆ ಜೊತೆ ಯುವಕನ ಚೆಲ್ಲಾಟ, ಆಮೇಲೇನಾಯ್ತು ನೋಡಿ
ಮೊಸಳೆ ಹಾಗೂ ಹಾವುಗಳು ಮನುಷ್ಯರ ಜೀವಕ್ಕೆ ಅಪಾಯ ಉಂಟು ಮಾಡಬಲ್ಲ ಸರೀಸೃಪಗಳು. ಹಾವು ಮೊಸಳೆ ಕಂಡ ಕೂಡಲೇ ಜನ ಹೆದರಿ ಹೌಹಾರಿ ಸ್ಥಳದಿಂದ ಕಾಲ್ಕಿಳೋದೆ ಹೆಚ್ಚು. ಆದರೆ ಇಲ್ಲೊಬ್ಬ ಅಪಾಯಕಾರಿ ಮೊಸಳೆಗೆ ಧೈರ್ಯವಾಗಿ ಆಹಾರ ತಿನ್ನಿಸುತ್ತಿದ್ದಾನೆ.
ಮೊಸಳೆ ಹಾಗೂ ಹಾವುಗಳು ಮನುಷ್ಯರ ಜೀವಕ್ಕೆ ಅಪಾಯ ಉಂಟು ಮಾಡಬಲ್ಲ ಸರೀಸೃಪಗಳು. ಹಾವು ಮೊಸಳೆ ಕಂಡ ಕೂಡಲೇ ಜನ ಹೆದರಿ ಹೌಹಾರಿ ಸ್ಥಳದಿಂದ ಕಾಲ್ಕಿಳೋದೆ ಹೆಚ್ಚು. ಆದರೆ ಇಲ್ಲೊಬ್ಬ ಅಪಾಯಕಾರಿ ಮೊಸಳೆಗೆ ಧೈರ್ಯವಾಗಿ ಆಹಾರ ತಿನ್ನಿಸುತ್ತಿದ್ದಾನೆ. ಆ ಮಕ್ಕಳಂತೆ ತನ್ನೆರಡು ಕಾಲುಗಳ ಮಧ್ಯೆ ಮೊಸಳೆಯನ್ನು ಇರಿಸಿಕೊಂಡು ಆಹಾರ ನೀಡುವುದು ನೋಡಿದರೆ ನೀವು ಒಂದು ಕ್ಷಣ ದಂಗಾಗುವುದು ಸಹಜ. ಆದರೆ ಈ ಅಸಾಮಿಗೆ ಯಾವ ಭಯವೂ ಇಲ್ಲ. ಕೆರೆಯಂತೆ ಕಾಣುವ ಪ್ರದೇಶವೊಂದರಲ್ಲಿ ಬೋಟೊಂದರಲ್ಲಿ ಕುಳಿತಂತೆ ಕಾಣುವ ಇತ್ತ ಮೊಸಳೆಯನ್ನು ತನ್ನ ಕಾಲುಗಳ ಮಧ್ಯೆ ನಿಲ್ಲಿಸಿಕೊಂಡು ಸ್ವಲ್ಪ ಹೊತ್ತು ಅದರೊಂದಿಗೆ ಆಟವಾಡುತ್ತಾ ಅದಕ್ಕೆ ಮಾಂಸದ ತುಣುಕುಗಳನ್ನು ನೀಡುತ್ತಾನೆ.
ಮೊಸಳೆಯೂ ಕೂಡ ಈತನನ್ನು ಬಹುಕಾಲದ ಗೆಳೆಯನಂತೆ ನೋಡುತ್ತಿದ್ದು, ಯಾವುದೇ ಭಯ ಆತಂಕವಿಲ್ಲದೇ ಈತನ ಬಳಿ ಬಂದು ಈತನ ಕಾಲುಗಳ ಮಧ್ಯೆ ನುಸುಳಿ ಬಂದು ಆತ ನೀಡುವ ಆಹಾರವನ್ನು ಸೇವಿಸಿ ಮತ್ತೆ ನೀರಿನೊಳಗೆ ಸೇರಿಕೊಳ್ಳುತ್ತದೆ. ಈ ಮನುಷ್ಯ ಹಾಗೂ ಮೊಸಳೆಯ ಈ ಅನುಬಂಧಕ್ಕೆ ಇಂಟರ್‌ನೆಟ್ ವಿಚಿತ್ರ ವಿಭಿನ್ನವಾಗಿ ಪ್ರತಿಕ್ರಿಯಿಸಿದೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪಿಜೆನ್ ಎಂಬ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದ್ದು, 4.3 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 4800ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದಾರೆ. ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನೂರಾರು ಜನ ಕಾಮೆಂಟ್ ಮಾಡಿದ್ದಾರೆ.
ಓ ಮೈ ಗಾಡ್ ನಾನು ಇದನ್ನು ನೋಡಲು ಕೂಡ ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು, ಮೊಸಳೆಗಳು ತುಂಬಾ ಅಪಾಯಕಾರಿಯಾದ ಪರಭಕ್ಷಕ ಸರೀಸೃಪಗಳು ಆದಾಗ್ಯೂ ಅವುಗಳು ಸರೀಸೃಪಗಳಲ್ಲೇ ಅತ್ಯಂತ ಬುದ್ದಿವಂತರು ಎಂದು ಕಾಮೆಂಟ್ ಮಾಡಿದ್ದಾರೆ. ಈ ಅಪಾಯಕಾರಿ ಪ್ರಾಣಿಗಳು ಸ್ನೇಹದಿಂದ ವರ್ತಿಸಿದರೂ ಇವುಗಳಿಂದ ಅಪಾಯ ತಪ್ಪಿದ್ದಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಈ ವಿಡಿಯೋ ನೋಡುಗರಿಗೆ ಭಯ ಹುಟ್ಟಿಸುತ್ತಿರುವುದಂತೂ ನಿಜ ಬಹುತೇಕ ನೋಡುಗರು ಯುವಕನ ಭಂಡ ಧೈರ್ಯಕ್ಕೆ ಬೆರಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಾಕಷ್ಟು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ.
ಸುಯ್ ಅಂತ ಜಾರಿ ಬಂದು ಮೊಸಳೆ ಬಾಯಿಗೆ ತಲೆ ಕೊಟ್ಟೇ ಬಿಟ್ಟ..!
ಮೊಸಳೆಯ ಓಡಿಸಿದ ವ್ಯಕ್ತಿ
ಮೊಸಳೆ ತುಂಬಾ ಅಪಾಯಕಾರಿ ಪ್ರಾಣಿ, ಆಹಾರ ಅರಸಿ ಕೆಲವೊಮ್ಮೆ ನೀರಿನಿಂದ ಮೇಲೆ ಬರುವ ಮೊಸಳೆ ಎದುರು ಸಿಕ್ಕವರ ಮೇಲೆ ದಾಳಿ ಮಾಡದೇ ಬಿಡದು. ಹೀಗಾಗಿ ಮೊಸಳೆ ಕಂಡರೆ ಭಯ ಬಿದ್ದು ಜೀವ ಉಳಿಸಿಕೊಳ್ಳಲು ದೂರ ಓಡುವವರೇ ಹೆಚ್ಚು. ಆದರೆ ಹೀಗೆ ದಾಳಿ ಮಾಡಲು ಬಂದ ಮೊಸಳೆಯೊಂದನ್ನು ವ್ಯಕ್ತಿಯೊಬ್ಬರು ದೋಸೆ ಮಾಡುವ ಕಾವಲಿಯಿಂದ ಹೊಡೆದು ಓಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವ್ಯಕ್ತಿಯ ಧೈರ್ಯಕ್ಕೆ ಶಹಭಾಷ್ ಎಂದಿದ್ದಾರೆ.
ಮೂರು ಸಿಂಹಗಳೊಂದಿಗೆ ಜೀವಕ್ಕಾಗಿ ಕಾದಾಡುತ್ತಿರುವ ಮೊಸಳೆ: ವಿಡಿಯೋ ವೈರಲ್
ಆಸ್ಟ್ರೇಲಿಯಾದ ಪ್ರಾಂತ್ಯದ ಡಾರ್ವಿನ್‌ನಲ್ಲಿ ಗೋಟ್ ಐಲ್ಯಾಂಡ್‌ನಲ್ಲಿ ನಡೆದ ಘಟನೆ ಇದಾಗಿದೆ. ಪಬ್ಬೊಂದರ ಮುಂಭಾಗದ ಅಂಗಳದಲ್ಲಿ ಮೊಸಳೆಯು ತೆವಳುತ್ತಾ ಬರುತ್ತಿದ್ದು ಇದನ್ನು ನೋಡಿದ ಕೋಡಲೇ ಪಬ್ ಮಾಲೀಕರು ಭಯಪಡುವ ಬದಲು, ತಮ್ಮ ಕೈಯಲ್ಲಿದ್ದ ದೋಸೆ ಕಾವಲಿಯಲ್ಲಿ ಅದರ ತಲೆಗೆ ಸರಿಯಾಗಿ ಬಾರಿಸಿದ್ದಾರೆ. ಈ ವೇಳೆ ಮೊಸಳೆ ಹೆದರಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹೊರಟು ಹೋಗುವುದು. ಈತನ ಅಚಾನಕ್ ದಾಳಿಯಿಂದ ಮೊಸಳೆಯೇ ಕಂಗೆಟ್ಟಿದೆ. ಕೂಡಲೇ ಅದು ಜಲಮೂಲದ ಕಡೆ ಬಿರ ಬಿರನೇ ಸಾಗಿ ಹೋಗಿದೆ.