ಹಾವೊಂದು ಹೆಂಚಿನ ಮನೆ ಮೇಲೆ ಹತ್ತಿ ಭಯಂಕರ ಪೋಸ್ ಕೊಟ್ಟಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ನೇಕ್ಸ್ ಆಫ್ ಇಂಡಿಯಾ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ.
ಹೆಂಚಿನ ಮನೆ ಮೇಲೆ ಹೆಬ್ಬಾವಿನ ಭಯಂಕರ ಫೋಸ್: ವಿಡಿಯೋ ವೈರಲ್
ಹಾವೊಂದು ಹೆಂಚಿನ ಮನೆ ಮೇಲೆ ಹತ್ತಿ ಭಯಂಕರ ಪೋಸ್ ಕೊಟ್ಟಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ನೇಕ್ಸ್ ಆಫ್ ಇಂಡಿಯಾ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಾವೊಂದು ಹೆಂಚಿನ ಮನೆ ಮೇಲೆ ಹತ್ತಿದ್ದು, ಅಲ್ಲಿಂದ ಮರವೇರುವುದಕ್ಕೆ ನೋಡುತ್ತಿದೆ. ಇದಕ್ಕಾಗಿ ಅದು ಜಿರಾಫೆಯಂತೆ ಕತ್ತನ್ನು ನೇರವಾಗಿ ನಿಲ್ಲಿಸಿದೆ. ಜಿರಾಫೆಗಳು ಆಹಾರ ತಿನ್ನಲು ಮರದತ್ತ ಕತ್ತೆತ್ತಿದಂತೆ ಈ ಹಾವು ಕೂಡ ಹೀಗೆ ದೇಹವನ್ನು ನೇರಗೊಳಿಸಿ ನಿಂತಿದ್ದು, ಈ ವಿಡಿಯೋ ನೋಡುಗರನ್ನು ದಂಗು ಬಡಿಸುತ್ತಿದೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಹಾವುಗಳು(snake) ತಮ್ಮ ದೇಹದ ಅರ್ಧ ಭಾಗವನ್ನು ನೇರವಾಗಿ ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿವೆಯಂತೆ. ಹಾವುಗಳ ಈ ಪೋಸ್ ಅನ್ನು ಕೆಲವೊಮ್ಮ ಅವುಗಳ ರಕ್ಷಣಾತ್ಮಕ ನಡೆ ಎಂದು ಭಾವಿಸಿದರೆ ಮತ್ತೆ ಕೆಲವೊಮ್ಮೆ ಸುತ್ತಲೂ ನೋಡುವುದಕ್ಕಾಗಿ ಹಾಗೂ ಮೇಲೇರಲು ಕೂಡ ಈ ರೀತಿ ತಮ್ಮ ದೇಹವನ್ನು ನೇರವಾಗಿಸುತ್ತವೆ ಎಂದು ತಿಳಿದು ಬಂದಿದೆ. ಹಾವುಗಳು ಜೀವ ವೈವಿಧ್ಯ ಅಥವಾ ಜೈವಿಕ ಸರಪಳಿಯ ಪ್ರಮುಖ ಭಾಗವಾಗಿದೆ.
ವಿಡಿಯೋಗಾಗಿ ಹಾವು ಸಾಕ್ತಿದ್ದವನ ಬಂಧನ
ಇತ್ತೀಚೆಗೆ ಹಾವುಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿರುತ್ತವೆ. ಅಲ್ಲದೇ ಹಾವುಗಳನ್ನು ಇಟ್ಟುಕೊಂಡು ವಿಡಿಯೋ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ವಿಡಿಯೋ ಮಾಡುವುದಕ್ಕೋಸ್ಕರ ಹಾವುಗಳನ್ನು ಹಿಡಿದು ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿಯೊರ್ವನನ್ನು ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದರು. 31 ವರ್ಷದ ಯೂಟ್ಯೂಬರ್ ರಾಮಚಂದ್ರ ರಾಣಾ (Ramachandra Rana) ಬಂಧಿತ ವ್ಯಕ್ತಿ. ಒಡಿಶಾದ (Odisha) ಸಂಬಾಲ್‌ಪುರ ಜಿಲ್ಲೆಯ ಕಂರಂಜುಲಾ ಪ್ರದೇಶದಲ್ಲಿ ಈತನನ್ನು ಒಡಿಶಾದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು.
ಈತ ವಿಡಿಯೋ ಮಾಡುವುದಕ್ಕೋಸ್ಕರ ಮನೆಯಲ್ಲಿ ಆರು ಹಾವುಗಳನ್ನು ಸಾಕಿದ್ದ. ಇವುಗಳಲ್ಲಿ ನಾಗರಹಾವುಗಳು ಇದ್ದವು, ಜೊತೆಗೆ ಈತ ನಾಲ್ಕು ಊಸರವಳ್ಳಿಗಳನ್ನು ಕೂಡ ತನ್ನೊಂದಿಗೆ ಇರಿಸಿಕೊಂಡಿದ್ದ. ಆರೋಪಿ ರಾಮಚಂದ್ರ ರಾಣಾ, ಪಶ್ಚಿಮ ಒಡಿಶಾದ ರೆಡಾಖೋಲೆ ಪ್ರದೇಶದ ನಿವಾಸಿಯಾಗಿದ್ದು, ಈತ ಜನರನ್ನು ಸೆಳೆಯುವ ಸಲುವಾಗಿ ತನ್ನ ವಿಡಿಯೋಗಳಲ್ಲಿ ಹಾವುಗಳು, ಊಸರವಳ್ಳಿಗಳು ಹಾಗೂ ಇತರ ಸರೀಸೃಪಗಳು ಹಾಗೂ ವನ್ಯಜೀವಿಗಳನ್ನು ಬಳಸಿಕೊಂಡಿದ್ದ. ಈತನಿಗೆ ಈತನ ಯುಟ್ಯೂಬ್ ಚಾನಲ್‌ನಲ್ಲಿ ಒಂದು ಲಕ್ಷ ಜನ ಸಬ್‌ಸ್ಕ್ರೈಬರ್‌ಗಳಿದ್ದಾರೆ.
ಸ್ಕೂಲ್ ಬ್ಯಾಗ್‌ನಲ್ಲಿ ಹಾವು ಪತ್ತೆ
ಶಾಲಾ ಬಾಲಕಿಯೊಬ್ಬಳ ಬ್ಯಾಗ್‌ನಿಂದ ಶಿಕ್ಷಕರು ಹಾವೊಂದನ್ನು ಹೊರಗೆ ಓಡಿಸುತ್ತಿರುವ ವಿಡಿಯೋ ಕೆಲ ದಿನಗಳ ಹಿಂದೆ ನಡೆದಿತ್ತು. ಮಧ್ಯಪ್ರದೇಶದ (MP) ಶಾಜಾಪುರದಲ್ಲಿ (Shajapur) ಈ ಘಟನೆ ನಡೆದಿದೆ. ಬ್ಯಾಗ್ ಏರಿಸಿಕೊಂಡು ಶಾಲೆಗೆ ಹೊರಟ 10ನೇ ತರಗತಿ ವಿದ್ಯಾರ್ಥಿನಿಗೆ (Student) ತನ್ ಬ್ಯಾಗ್ ಒಳಗೇನೋ ಜೀವಿಯೊಂದು ಹೊರಳಾಡುತ್ತಿರುವಂತೆ ಭಾಸವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ತಲುಪಿದ ಬಳಿಕ ಆಕೆ ಶಿಕ್ಷಕರ (Teacher) ಬಳಿ ತನ್ನ ಬ್ಯಾಗ್ ಒಳಗೆ ಏನೋ ಇರುವ ಬಗ್ಗೆ ಹೇಳಿದ್ದಾಳೆ. ಈ ವೇಳೆ ತಪಾಸಣೆ ನಡೆಸಿದ ಶಿಕ್ಷಕರು ಬ್ಯಾಗ್‌ನಿಂದ ಪುಸ್ತಕವನ್ನೆಲ್ಲಾ ಹೊರತೆಗೆದು, ಬ್ಯಾಗ್‌ನ ಎಲ್ಲಾ ಜಿಪ್‌ಗಳನ್ನು ತೆರೆದು ಅಡಿಕೋಲಿನಿಂದ ತಪಾಸಣೆ ನಡೆಸಿದ್ದಾರೆ. ಆದರು ಹಾವು ಮಾತ್ರ ಹೊರ ಬಂದಿಲ್ಲ. ನಂತರ ಬ್ಯಾಗ್‌ನ್ನು ತಲೆಕೆಳಗೆ ಮಾಡಿ ಅಲುಗಾಡಿಸಿದಾಗ ಕಪ್ಪು ಬಣ್ಣದ ಹಾವೊಂದು ಬ್ಯಾಗ್‌ನಿಂದ ಕೆಳಗೆ ಬಿದ್ದು ಹೊರಟು ಹೋಗಿದೆ. ಬ್ಯಾಗ್‌ನಿಂದ ಹಾವು ಹೊರಟು ಹೋಗಿದ್ದು ನೋಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಂಗಾಗಿದ್ದಾರೆ. ಪುಣ್ಯಕ್ಕೆ ಹಾವಿನಿಂದಾಗಿ ಯಾರಿಗೂ ಯಾವುದೇ ಹಾನಿಯಾಗಿಲ್ಲ.