Asianet Suvarna News Asianet Suvarna News

ಐಐಟಿ ಮದ್ರಾಸ್‌ನ ಕೋತಿಗಳು ಕೂಡ ತುಂಬಾ ಸ್ಮಾರ್ಟ್... ವಿಡಿಯೋ ನೋಡಿ

ಮದ್ರಾಸ್ ಐಐಟಿಯ ಹೊರಭಾಗದಲ್ಲಿ ಸೆರೆಯಾಗಿದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೋತಿಯೊಂದು ಅಲ್ಲೆ ಅಲೆದಾಡುತ್ತಿರುವ ಜಿಂಕೆಯ ಬೆನ್ನೇರಿ ಸವಾರಿ ಮಾಡುತ್ತಿದೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

Smart monkey riding on deer, rare video captured in Madrass IIT campus akb
Author
First Published Oct 11, 2022, 5:26 PM IST | Last Updated Oct 11, 2022, 5:26 PM IST

ಚೆನ್ನೈ: ಮದ್ರಾಸ್ ಐಐಟಿಯ ಹೊರಭಾಗದಲ್ಲಿ ಸೆರೆಯಾಗಿದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೋತಿಯೊಂದು ಅಲ್ಲೆ ಅಲೆದಾಡುತ್ತಿರುವ ಜಿಂಕೆಯ ಬೆನ್ನೇರಿ ಸವಾರಿ ಮಾಡುತ್ತಿದೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಮದ್ರಾಸ್ ಐಐಟಿಯಲ್ಲಿ ಕೋತಿಗಳು ಎಂದು ಅವರು ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ಕೋತಿ ಹಾಗೂ ಜಿಂಕೆಯ ಈ ಮುದ್ದಾದ ಒಡನಾಟ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋವನ್ನು ಇದರ ಜೊತೆಗೆ ಐಐಟಿ ಕಾಲೇಜು ಹಾಸ್ಟೆಲ್ ಕಾರಿಡಾರ್‌ನಲ್ಲಿ ಕೋತಿ ಹಾಗೂ ಬೆಕ್ಕು ಹೊಡೆದಾಡುಕೊಳ್ಳುತ್ತಿರುವ ವಿಡಿಯೋವೊಂದನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಕಾಣಿಸುವಂತೆ ಮದ್ರಾಸ್ ಕ್ಯಾಂಪಸ್‌ನ ಬಿಳಿ ಚುಕ್ಕೆಯ ಜಿಂಕೆಯೊಂದು (deer) ಸಾಗುತ್ತಿದ್ದ ಅದರ ಬೆನ್ನ ಮೇಲೆ ಕೋತಿಯೊಂದು ಆರಾಮವಾಗಿ ಕುಳಿತುಕೊಂಡು ಸವಾರಿ ಮಾಡುತ್ತಿದೆ. ಹೀಗೆ ಕ್ಯಾಂಪಸ್‌ನಲ್ಲಿ ಅಲೆದಾಡುತ್ತಿರುವ ಜಿಂಕೆ ಮಧ್ಯೆ ಮಧ್ಯೆ ತಲೆ ಬಗ್ಗಿಸಿ ಹುಲ್ಲು ತಿನ್ನುತ್ತಿದೆ. ಈ ವೇಳೆ ಕೋತಿ ಜಿಂಕೆಯನ್ನು ಗಟ್ಟಿಯಾಗಿ ಬೆನ್ನಿನಲ್ಲಿ ಹಿಡಿದುಕೊಂಡು ಸಾಗುತ್ತಿದೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ಪ್ರಾಣಿಗಳ ಉಬರ್ ವೆಹಿಕಲ್ ಅಂತ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಐಐಟಿಯ ಕೋತಿ ಅಂದ್ರೆ ಸುಮ್ನೆನಾ ಪಕ್ಕಾ ಅದೂ ಕೂಡ ಅಲ್ಲಿಯ ವಿದ್ಯಾರ್ಥಿಗಳಂತೆ ಸ್ಮಾರ್ಟ್ ಇರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. 

 

ಮದ್ರಾಸ್ ಐಐಟಿಯ ಕ್ಯಾಂಪಸ್ (IIT Madras campus), ಚೆನ್ನೈನಲ್ಲಿರುವ (Chennai) ಗಿಂಡಿ ರಾಷ್ಟ್ರೀಯ ಉದ್ಯಾನವನದ (Guindy National Park) ವ್ಯಾಪ್ತಿಯಲ್ಲಿದ್ದು, ಕ್ಯಾಂಪಸ್‌ನ ಹೆಚ್ಚಿನ ಭಾಗವೂ ಸಂರಕ್ಷಿತ ಅರಣ್ಯವಾಗಿದೆ (protected forest). ಈ ಕಾರಣದಿಂದಾಗಿ ಕ್ಯಾಂಪಸ್ ಸುತ್ತಮುತ್ತ ಜಿಂಕೆ, ಅಳಿಲು ಕೋತಿಗಳು ಮುಂತಾದ ಕಾಡು ಪ್ರಾಣಿಗಳು ಸಾಮಾನ್ಯ ಎನಿಸಿವೆ.

ತಬ್ಬಿ ಹಿಡಿದು ಜಿಂಕೆಗೆ ಮುತ್ತಿಕ್ಕಿದ ಪೋರ: ವಿಡಿಯೋ ವೈರಲ್
ಜಿಂಕೆಯ ಬೇಟೆಯಾಡಿದ ಕಪ್ಪು ಚೀತಾ
ದಿನದ ಹಿಂದಷ್ಟೇ ಕಪ್ಪು ಚಿರತೆಯೊಂದು ಕತ್ತಲಿನಲ್ಲಿ ಜಿಂಕೆಯನ್ನು ಬೇಟೆಯಾಡಿದ ಅಪರೂಪದ ದೃಶ್ಯದ ವಿಡಿಯೋವೊಂದು ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಕಾಣಿಸುವಂತೆ ಕಪ್ಪು ಬಣ್ಣದ ಚಿರತೆಯೊಂದು (Leopard) ಜಿಂಕೆಯೊಂದನ್ನು ಬೇಟೆಯಾಡಿದೆ. ಬೇಟೆಯಾಡಿ ಸುಸ್ತಾದ ಚಿರತೆ ಬಾಯಲ್ಲಿ ಜಿಂಕೆಯನ್ನು ಕಚ್ಚಿಕೊಂಡು ಎದುಸಿರು ಬಿಡುತ್ತಾ ಒಂದೆಡೆ ವಿಶ್ರಮಿಸುತ್ತಿದೆ. ನಂತರ ಬೇಟೆಯನ್ನು ಬಾಯಿಯಿಂದ ಕೆಳಗಿರಿಸಿ ಸುತ್ತಮುತ್ತ ನೋಡುತ್ತಿದೆ. ಅಷ್ಟರಲ್ಲೇ ಮತ್ತೊಂದು ಹಳದಿ ಬಣ್ಣದ ಚಿರತೆಯೊಂದು ಬಂದಿದ್ದು, ಅದನ್ನು ನೋಡಿ ಕಪ್ಪು ಚಿರತೆ ತನ್ನ ಬೇಟೆಯನ್ನು ಅಲ್ಲೇ ಬಿಟ್ಟು ಓಡಿದರೆ ಇತ್ತ ಹಳದಿ ಬಣ್ಣದ ಚಿರತೆ ಜಿಂಕೆಯನ್ನು ಎತ್ತಿಕೊಂಡು ಓಡುತ್ತಿದೆ. 

ಜಿಂಕೆ ಮರಿಯ ಕೊಂಬಿನಲ್ಲಿ ಸಿಲುಕಿದ್ದ ಗಿಡ ಕಿತ್ತೆಸೆದ ಜಿರಾಫೆ : ವಿಡಿಯೋ ವೈರಲ್

ಇದೊಂದು ಪರಿಪೂರ್ಣವಾದ ಸೆರೆ, ಚಿರತೆ ಹಾಗೂ ವಿಡಿಯೋಗ್ರಾಫರ್ (videoGraphy) ಇಬ್ಬರೂ ಪರಿಪೂರ್ಣವಾಗಿ ಸೆರೆ ಹಿಡಿದಿದ್ದಾರೆ. ಆದರೆ ಹೀಗೆ ಪ್ರಾಣಿಗಳ ಅಪರೂಪದ ಚಟುವಟಿಕೆಯನ್ನು ಸೆರೆ ಹಿಡಿಯಲು ಅನುಮತಿ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು 31 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ವಿಡಿಯೋ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

Latest Videos
Follow Us:
Download App:
  • android
  • ios