Farmer Protest ಚುನಾವಣೆಯಲ್ಲಿ ಲೆಕ್ಕಾಚಾರ ಉಲ್ಟಾ, ಕೇಂದ್ರ ಬಿಜೆಪಿ ವಿರುದ್ಧ ಮತ್ತೆ ಪ್ರತಿಭಟನೆಗಳಿದ SKM ರೈತ ಸಂಘಟನೆ!

  • ರೈತ ಸಂಘಟನೆಗಳಿಂದ ಮತ್ತೆ ಕೇಂದ್ರದ ವಿರುದ್ಧ ಪ್ರತಿಭಟನೆ
  • ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಕಟ್ಟಿಹಾಕಲು ವಿಫಲ
  • ಮಾರ್ಚ್ 21 ರಂದು ಪ್ರತಿಭಟನೆ ಘೋಷಿಸಿದ ರಾಕೇಶ್ ಟಿಕಾಯತ್
SKM and Farm unions to launch protests from March 21 against BJP over PM Modi broken promises ckm

ನವದೆಹಲಿ(ಮಾ.14): ಕೃಷಿ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆಸಿದ  ಸತತ ಒಂದು ವರ್ಷಗಳ ಪ್ರತಿಭಟಟನೆಗೆ ಮಣಿದ ಕೇಂದ್ರ ಸರ್ಕಾರ ಕೃಷಿ ಮಸೂದೆ ಹಿಂಪಡೆದಿತ್ತು. ಕೃಷಿ ಕಾಯ್ದೆ ಪ್ರತಿಭಟನೆಯನ್ನು ಉತ್ತರ ಪ್ರದೇಶ ಸೇರಿದಂತೆ ಚುನಾವಣೆ ಎದುರಿಸುವ ರಾಜ್ಯಗಳಲ್ಲಿ ಅತೀ ಹೆಚ್ಚು ಬಾರಿ ಮಾಡಲಾಗಿತ್ತು. ಆದರೆ ಪಂಚ ರಾಜ್ಯ ಚುನಾವಣೆಯಲ್ಲಿ ರೈತ ಸಂಘಟನೆಗಳ ನಿರೀಕ್ಷೆ ತಕ್ಕ ಫಲಿತಾಂಶ ಬಂದಿಲ್ಲ. ಇದೀಗ ಚುನಾವಣೆಯಲ್ಲಿ ಬಿಜೆಪಿ ಒಟಕ್ಕೆ ಬ್ರೇಕ್ ಹಾಕಲು ವಿಫಲವಾಗಿರುವ ರೈತ ಸಂಘಟನೆಗಳು ಇದೀಗ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಮತ್ತೆ ಪ್ರತಿಭಟನೆ ಘೋಷಿಸಿದೆ.  ಮಾರ್ಚ್ 21 ರಿಂದ ರೈತ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಮುಖ್ಯಸ್ಥ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.

ಕೇಂದ್ರದ ವಿರುದ್ಧ ಸತತ ಪ್ರತಿಭಟನೆ ಮಾಡಲು ರಾಕೇಶ್ ಟಿಕಾಯತ್ ನಿರ್ಧರಿಸಿದ್ದಾರೆ. ಇದೀಗ ಮೋದಿ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಇದೀಗ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ವಾದಾ ಖಲೀಫಾ ಆಂದೋಲಕ್ಕೆ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ. ಮೊದಲ ಹಂತವಾಗಿ ಮಾರ್ಚ್ 21 ರಂದು ರೈತ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದು ಒಂದು ದಿನದ ಪ್ರತಿಭಟನೆಯಾಗಿದೆ.

ಪ್ರಧಾನಿ ಕ್ಷಮೆ ಯಾಚಿಸುವುದನ್ನು ರೈತರು ಬಯಸುವುದಿಲ್ಲ : ರಾಕೇಶ್‌ ಟಿಕಾಯತ್‌

ಎರಡನೇ ಹಂತದ ಪ್ರತಿಭಟನೆಗೆ ಎಪ್ರಿಲ್ 9 ರಿಂದ 17ರ ವರೆಗೆ ನಡೆಯಲಿದೆ. ದೇಶಾದ್ಯಂತ ಕೇಂದ್ರದ ವಿರುದ್ಧ ರೈತ ಪ್ರತಿಭಟನೆ ಮಾಡಲು ಸಂಯುಕ್ತ ಕಿಸಾನ್ ಮೋರ್ಚಾ  ನಿರ್ಧರಿಸಿದೆ. ಲಖೀಂಪುರ ಖೇರಿ ರೈತರ ಮೇಲೆ ದಾಖಲಾಗಿರುವ ಕೇಸ್‌ಗಳನ್ನು ವಾಪಸ್ ಪಡೆಯುವ ಕುರಿತು ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ಪ್ರತಿಭಟನೆ ಮತ್ತೆ ಆರಂಭಿಸುತ್ತಿದ್ದೇವೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಮೂರು ಕೃಷಿ ಕಾಯ್ದೆ ವಿರೋಧಿ ರೈತ ಹೋರಾಟಕ್ಕೆ 15 ತಿಂಗಳ ಬಳಿಕ ವಿದಾಯ
ಕೇಂದ್ರ ಸರ್ಕಾರ ಅಂಗೀಕರಿಸಿದ್ದ 3 ಕೃಷಿ ಕಾಯ್ದೆ ರದ್ದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ  15 ತಿಂಗಳಿನಿಂದ ರಾಜಧಾನಿ ನವದೆಹಲಿಯ ಹೊರವಲಯದ ಹಲವು ಗಡಿ ಪ್ರದೇಶಗಳಲ್ಲಿ ನಡೆಯುತ್ತಿದ್ದ ಬೃಹತ್‌ ರೈತ ಪ್ರತಿಭಟನೆ  2021ರ ಡಿಸೆಂಬರ್ ತಿಂಗಳಲ್ಲಿ ಅಂತ್ಯ ಹಾಡಲಾಗಿತ್ತು.  ಇದರೊಂದಿಗೆ ನೂರಾರು ರೈತರ ಸಾವಿಗೆ ಸಾಕ್ಷಿಯಾದ, ದೇಶ ಕಂಡ ಅತ್ಯಂತ ಸುದೀರ್ಘ ಎಂಬ ಹೆಗ್ಗಳಿಕೆ ಪಡೆದ, ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಬೃಹತ್‌ ಹೋರಾಟಕ್ಕೆ ತೆರೆಬಿದ್ದಿತ್ತು.

ಆಮಿಷ ಒಡ್ಡಿ ಪ್ರತಿಭಟನೆಗೆ ಕರೆಯಿಸಿ ಕೊಲೆ, ರೈತ ಹೋರಾಟದ ಅಸಲಿ ಕತೆ ಹೇಳಿದ ಲಕ್ಬೀರ್ ಸಿಂಗ್ ಕುಟುಂಬ!

ಮೂರು ಕೃಷಿ ಕಾಯ್ದೆ ಹಿಂದಕ್ಕೆ ಪಡೆದು, ಉಳಿದ 5 ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಸಿಂಘೂ, ಟಿಕ್ರಿ, ಗಾಜಿಪುರ ಸೇರಿದಂತೆ ಹಲವು ಗಡಿಯಲ್ಲಿ ಬೀಡುಬಿಟ್ಟಿದ್ದ ಸಾವಿರಾರು ರೈತರು, ಈ ಮೊದಲೇ ನಿರ್ಧರಿಸಿದ್ದಂತೆ ಶನಿವಾರ ಬೆಳಗ್ಗೆಯಿಂದ ತವರಿಗೆ ತೆರಳಲು ಆರಂಭಿಸಿದರು. ಅದಕ್ಕೂ ಮುನ್ನ ಪ್ರತಿಭಟನಾ ಸ್ಥಳದಲ್ಲಿ ವಿಜಯೋತ್ಸವ ರಾರ‍ಯಲಿ ನಡೆಸಿ, ಸಿಂಹಿ ಹಂಚಿ, ಭಜನೆ ಮಾಡಿ, ಭಾಂಗ್ರಾ ನೃತ್ಯ ಮಾಡಿ ರೈತರು ತಮ್ಮ ಹೋರಾಟ ಫಲಕೊಟ್ಟಿದ್ದಕ್ಕೆ ಸಂಭ್ರಮಿಸಿದರು. 3 ಕೃಷಿ ಕಾಯ್ದೆಗಳ ವಾಪಸಾತಿಯಿಂದ ರೈತರಿಗೆ ನ್ಯಾಯ ದೊರೆಯುವುದಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸಿ, ವಿದ್ಯುತ್‌ ಖಾಸಗಿಕರಣ ಮಸೂದೆಯನ್ನು ವಾಪಸ್‌ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದರು.

Latest Videos
Follow Us:
Download App:
  • android
  • ios