ಆಮಿಷ ಒಡ್ಡಿ ಪ್ರತಿಭಟನೆಗೆ ಕರೆಯಿಸಿ ಕೊಲೆ, ರೈತ ಹೋರಾಟದ ಅಸಲಿ ಕತೆ ಹೇಳಿದ ಲಕ್ಬೀರ್ ಸಿಂಗ್ ಕುಟುಂಬ!
- ಲಕ್ಬೀರ್ ಸಿಂಗ್‌ಗೆ ಅಮಿಷ ಒಡ್ಡಿ ರೈತ ಪ್ರತಿಭಟನಾ ಸ್ಥಳಕ್ಕೆ ಕರೆಸಲಾಗಿತ್ತು
- ಹತ್ಯೆಯಾದ ಲಕ್ಬೀರ್ ಸಿಂಗ್ ಕುಂಟಬಸ್ಥರ ಆರೋಪ,
- ರೈತ ಪ್ರತಿಭಟನೆ ಸ್ಥಳದಲ್ಲಿ ದಲಿತ ಕಾರ್ಮಿಕ ಲಕ್ಬೀರ್ ಸಿಂಗ್ ಕೊಲೆ
- ಕೈ ಕಾಲು ಕತ್ತರಿಸಿ ಕೊಲೆಗೈದು, ಬ್ಯಾರಿಕೇಡ್‌ಗೆ ನೇತು ಹಾಕಲಾಗಿತ್ತು
ದೆಹಲಿ(ಅ.16): ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಸ್ಥಳದ ಪಕ್ಕದಲ್ಲೇ ದಲಿತ ಕಾರ್ಮಿಕ ಲಕ್ಬೀರ್ ಸಿಂಗ್(Lakhbir Singh) ಹತ್ಯೆ ಇದೀಗ ಭಾರಿ ಸದ್ದು ಮಾಡತ್ತಿದೆ. ಕೈ ಕಾಲು ಕತ್ತರಿಸು ಬರ್ಬರವಾಗಿ ಲಕ್ಬೀರ್ ಸಿಂಗ್‌ನ್ನು ಹತ್ಯೆ ಮಾಡಲಾಗಿದೆ. ರೈತ ಪ್ರತಿಭಟನಾ ಸ್ಥಳಕ್ಕೆ ಆಮಿಷ ಒಡ್ಡಿ ಲಕ್ಬೀರ್ ಸಿಂಗ್‌ನ್ನು ಕರೆಸಲಾಗಿತ್ತು. ಇದೀಗ ಬರ್ಬರವಾಗಿ ಕೊಲೆ(Singhu Border Murder) ಮಾಡಲಾಗಿದೆ ಎಂದು ಲಕ್ಬೀರ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಿಂಘೂ ಗಡಿಯಲ್ಲಿ ಸಂಘರ್ಷ: ದಾರಿ ತಪ್ಪಿತಾ ರೈತ ಹೋರಾಟ..
ರೈತ ಪ್ರತಿಭಟನಾ ಸ್ಥಳಕ್ಕೆ ಲಕ್ಬೀರ್ ಸಿಂಗ್‌ನನ್ನು ಹಣದ ಆಣಿಷ ಒಡ್ಡಿ ಕರೆಸಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಲಕ್ಬೀರ್ ಸಿಂಗ್, ಕಷ್ಟಕ್ಕೆ ಆರ್ಥಿಕ ನೆರವಾಗಲಿದೆ ಎಂದು ಲಕ್ಬೀರ್ ಸಿಂಗ್ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದು ಲಕ್ಬೀರ್ ಕುಟುಂಬಸ್ಥರು ಪೊಲೀಸರ ಮುಂದೆ ಹೇಳಿದ್ದಾರೆ.
ಲಕ್ಬೀರ್ ಸಿಂಗ್ ಬಳಿಕ ಕೇವಲ 50 ರೂಪಾಯಿ ಇತ್ತು. ಚಬಾಲ್‌ನಲ್ಲಿ ಕೆಲಸಕ್ಕೆ ಹೋಗುವುದಾಗಿ ನಮಗೆ ತಿಳಿಸಿದ್ದರು. ಇದರ ನಡುವೆ ಪ್ರತಿಭಟನೆ ಸ್ಥಳಕ್ಕೆ ಬಂದರೆ ಹಣ ನೀಡುವುದಾಗಿ ಹಲವರು ಒತ್ತಾಯಿಸಿದ್ದಾರೆ. ಹೀಗಾಗಿ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದ ಲಕ್ಬೀರ್ ಬಲಿಯಾಗಿದ್ದಾನೆ ಎಂದು ಹತ್ಯೆಯಾದ ಲಕ್ಬೀರ್ ತಂಗಿ ರಾಜ್ ಕೌರ್ ಹೇಳಿದ್ದಾರೆ
ಪ್ರತಿಭಟನಾ ನಿರತ ರೈತರಿಂದ ತಲ್ವಾರ್ ದಾಳಿ; ಒರ್ವ ಪೊಲೀಸ್ ಗಂಭೀರ!.
ಲಕ್ಬೀರ್ ಸಿಖ್ ಪವಿತ್ರ ಗ್ರಂಥವನ್ನು ಅವಮಾನಿಸುವ ವ್ಯಕ್ತಿಯಲ್ಲ. ಸುಖಾಸುಮ್ಮನೆ ಆರೋಪ ಹೊರಿಸಿ ಹತ್ಯೆ ಮಾಡಲಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಲಕ್ಬೀರ್ ಕುಟುಂಬ ಪರಿಪರಿಯಾಗಿ ಬೇಡಿಕೊಂಡಿದೆ.
ರೈತ ಪ್ರತಿಭಟನೆಗೆ ಹಣದ ಆಮಿಷ ಒಡ್ಡಿ ಪ್ರತಿಭಟನಾಕಾರರನ್ನು ಕರೆಸಲಾಗುತ್ತಿದೆ ಅನ್ನೋ ಮಾಹಿತಿಯೂ ಲಕ್ಬೀರ್ ಕುಟುಂಬಸ್ಥರ ಆರೋಪದಿಂದ ಹೊರಬಂದಿದೆ. ಲಕ್ಬೀರ್ ಸಿಂಗ್ ಹತ್ಯೆಗೈದ ಆರೋಪಿ ನಿಹಾಂಗ್ ಸಿಖ್ ಸಮುದಾಯಕ್ಕೆ ಸೇರಿದ ಸರವಜಿತ್ ಸಿಂಗ್ ಪೊಲೀಸರಿಗೆ ಶರಣಾಗಿದ್ದಾನೆ.
ಸರವಜಿತ್ ಸಿಂಗ್ ಪೊಲೀಸರಿಗೆ ಶರಣಾದ ಬೆನ್ನಲ್ಲೇ ರೈತ ಸಂಘಟನೆಗಳು ನಿಹಾಂಗ್ ಪಂಥದಿಂದ ಅಂತರ ಕಾಯ್ದುಕೊಂಡಿದೆ. ರೈತ ಪ್ರತಿಭಟನೆಗೂ ಕೊಲೆಗೂ ಸಂಬಂಧವಿಲ್ಲ ಎಂದಿದ್ದಾರೆ. ಎಚ್ಚರಿಕೆಯಿಂದಲೇ ರೈತ ಸಂಘಟನೆ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.
ಲಕ್ಬೀರ್ ಸಿಂಗ್ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಲಕ್ಬೀರ್ ಸಿಂಗ್ ಹತ್ಯೆ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ನಿಹಾಂಗ್ ಸಮುದಾಯದ ವಿರುದ್ಧ ಆಕ್ರೋಶಗಳು ಕೇಳಿಬರುತ್ತಿದೆ. ಜನವರಿ 26 ರಂದು ಆಯೋಜಿಸಿದ ಟ್ರಾಕ್ಟರ್ ರ್ಯಾಲಿಯಲ್ಲಿ ಹಿಂಸಾಚಾರ ಮಾಡಿ ದೇಶದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದೆ ಹಾಗೂ 500ಕ್ಕೂ ಹೆಚ್ಚು ಪೊಲೀಸರಿಗೆ ಗಾಯಮಾಡಿದ್ದ ನಿಹಾಂಗ್ ಸಿಖ್ ಪಂಥ ಈ ಕೊಲೆಯ ಹಿಂದಿದೆ ಅನ್ನೋದು ಆರೋಪಿ ಶರಣಾಗತಿಯಿಂದ ಸ್ಪಷ್ಟವಾಗಿದೆ.
ನಿಹಾಂಗ್ ಪಂಥದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ರೈತ ಪ್ರತಿಭಟನೆಯನ್ನು ನಿಹಾಂಗ್ ಪಂಥ ಹೈಜಾಕ್ ಮಾಡಿದೆ. ಹೀಗಾಗಿ ದಿಕ್ಕು ದೆಸೆಯಿಲ್ಲದೆ ರೈತರು ಹೋರಾಟ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ರೈತ ಪ್ರತಭಟನೆ ನೈಜ ಅರ್ಥ ಕಳೆದುಕೊಂಡಿದೆ ಅನ್ನೋ ಮಾತುಗಳು ಬಲವಾಗುತ್ತಿದೆ.