ಸಂಭ್ರಮಕ್ಕೆ ಹಚ್ಚಿದ ಪಟಾಕಿಯಿಂದ ಮದ್ವೆ ಮನೆ ಆಯ್ತು ಸ್ಮಶಾನ: ಮಕ್ಕಳು ಸೇರಿ 6 ಜನ ಬಲಿ

 ಮದ್ವೆ ಮನೆಯೊಂದರಲ್ಲಿ ಭಾರಿ ಅಗ್ನಿ ಅನಾಹುತ ನಡೆದಿದ್ದು,  6 ಜನ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಬಿಹಾರದ ದರ್ಬಾಂಗ್‌ನಲ್ಲಿ ನಡೆದಿದೆ. 

Six people including children were killed after Firecracker burst in wedding hall at Bihars Darbhang akb

ದರ್ಬಾಂಗ್: ಮದ್ವೆ ಮನೆಯೊಂದರಲ್ಲಿ ಭಾರಿ ಅಗ್ನಿ ಅನಾಹುತ ನಡೆದಿದ್ದು,  6 ಜನ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಬಿಹಾರದ ದರ್ಬಾಂಗ್‌ನಲ್ಲಿ ನಡೆದಿದೆ.  ಮನುಷ್ಯರ ಜೊತೆ ಮೂರು ಹಸುಗಳು ಈ ಬೆಂಕಿ ದುರಂತಕ್ಕೆ ಬಲಿಯಾಗಿವೆ. ಬಿಹಾರದ ದರ್ಬಾಂಗ್ ಜಿಲ್ಲೆಯ ಬಹೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಲಿನಗರದಲ್ಲಿ ಘಟನೆ ನಡೆದಿದೆ. 

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ 11.15ರ ಸುಮಾರಿಗೆ ಮದ್ವೆ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಮದ್ವೆ ಮನೆಯಲ್ಲಿ ಸಿಡಿಸಿದ ಪಟಾಕಿಯಿಂದ ಬೆಂಕಿ ಹತ್ತಿಕೊಂಡಿದೆ. ಮದ್ವೆ ಮನೆ ಪೆಂಡಾಲ್  ಶೀಘ್ರವಾಗಿ ಉರಿಯುವಂತಹ ಕೆಲ ವಸ್ತುಗಳಿದ್ದು, ಇದು ಬೆಂಕಿ ತೀವ್ರವಾಗಿ ಹೊತ್ತಿ ಉರಿಯುವಂತೆ ಮಾಡಿದೆ. ಈ ಬೆಂಕಿ ದುರಂತದಲ್ಲಿ ಆರು ಜನ ಮೃತಪಟ್ಟಿದ್ದು, ಮೃತರನ್ನು 26 ವರ್ಷದ ಸುನೀಲ್ ಪಾಸ್ವಾನ್, 23 ವರ್ಷದ ಲೀಲಾದೇವಿ, 26 ವರ್ಷದ ಕಾಂಚನಾ ದೇವಿ ಹಾಗೂ ಮಕ್ಕಳಾದ 4 ವರ್ಷದ ಸಿದ್ದಾಂತ್ ಕುಮಾರ್, 3 ವರ್ಷದ ಶಶಾಂಕ್ ಕುಮಾರ್ ಹಾಗೂ 5 ವರ್ಷದ ಸಾಕ್ಷಿ ಕುಮಾರಿ ಎಂದು ಗುರುತಿಸಲಾಗಿದೆ. 

ಮಟನ್ ಬೇಕೇ ಬೇಕು, ಇಲ್ಲಾಂದ್ರೆ ತಾಳಿ ಕಟ್ಟಲ್ಲ; ಮದ್ವೆ ಮನೆಯಲ್ಲಿ ವರನ ಕುಟುಂಬದಿಂದ ಗಲಾಟೆ!

ಈ ಬೆಂಕಿ ದುರಂತಕ್ಕೆ ನಿಜವಾದ ಕಾರಣ ಏನು ಎಂಬುದರ ಬಗ್ಗೆ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ದುರಂತದಲ್ಲಿ  ಮಡಿದ ಸಂತ್ರಸ್ತರ ಕುಟುಂಬದ ಜೊತೆ ಜಿಲ್ಲಾಡಳಿತ ಸಂಪರ್ಕದಲ್ಲಿದೆ ವಿಪತ್ತು ನಿರ್ವಾಹಣಾ  ಮಾರ್ಗದರ್ಶನದಲ್ಲಿ ಎಲ್ಲಾ ಬೆಂಬಲ ನೀಡಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೋಶನ್ ಹೇಳಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲಾಯ್ತು, ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಗನ್ನಾಥ ರೆಡ್ಡಿ ಹೇಳಿದ್ದಾರೆ.

ಡ್ಯಾನ್ಸ್ ಮಾಡೋಕೆ ವಧುವಿನ ಕೈ ಹಿಡಿದು ಎಳೆದ ವರನ ಸ್ನೇಹಿತ, ಮದ್ವೆ ಕ್ಯಾನ್ಸಲ್!

Latest Videos
Follow Us:
Download App:
  • android
  • ios