ಮಹಾರಾಷ್ಟ್ರದ ನಾಗ್ಪುರದ ಶಾಲೆಯೊಂದರಲ್ಲಿ ಶಿವಾಜಿಯ 350ನೇ ಪಟ್ಟಾಭಿಷೇಕ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ಭಾಗವತ್, ‘ನಮ್ಮದು ಹಿಂದೂಗಳ ದೇಶ. ಆದರೆ ಇತರ ಧರ್ಮಗಳನ್ನು ದ್ವೇಷಿಸುವುದಿಲ್ಲ. ಭಾರತ ಮತ್ತು ಹಿಂದೂ ಧರ್ಮವು ಸರ್ವ ಜನಾಂಗ, ನಂಬಿಕೆ ಮತ್ತು ಪಂಥಗಳನ್ನೂ ಗೌರವಿಸುವ ಏಕೈಕ ದೇಶ ಮತ್ತು ಧರ್ಮವಾಗಿದೆ ಎಂದಿದ್ದಾರೆ.

ನಾಗಪುರ (ಅಕ್ಟೋಬರ್ 23, 2023): ಭಾರತದಲ್ಲಿ ಕೋಮು ವಿಚಾರವಾಗಿ ಎಂದಿಗೂ ಯುದ್ಧಗಳು ನಡೆದಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿದ್ದಾರೆ. ಇಸ್ರೇಲ್‌-ಹಮಾಸ್‌ ಯುದ್ಧ ಮತ್ತು ಉಕ್ರೇನ್‌ ಯುದ್ಧದ ಪ್ರಸ್ತಾಪ ಮಾಡುವಾಗ ಮೋಹನ್‌ ಬಾಗವತ್ ಈ ಮಾತುಗಳನ್ನಾಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದ ಶಾಲೆಯೊಂದರಲ್ಲಿ ಶಿವಾಜಿಯ 350ನೇ ಪಟ್ಟಾಭಿಷೇಕ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ಭಾಗವತ್, ‘ನಮ್ಮದು ಹಿಂದೂಗಳ ದೇಶ. ಆದರೆ ಇತರ ಧರ್ಮಗಳನ್ನು ದ್ವೇಷಿಸುವುದಿಲ್ಲ. ಭಾರತ ಮತ್ತು ಹಿಂದೂ ಧರ್ಮವು ಸರ್ವ ಜನಾಂಗ, ನಂಬಿಕೆ ಮತ್ತು ಪಂಥಗಳನ್ನೂ ಗೌರವಿಸುವ ಏಕೈಕ ದೇಶ ಮತ್ತು ಧರ್ಮವಾಗಿದೆ. ಉಳಿದೆಡೆಗಳಲ್ಲೆಲ್ಲಾ ಕಲಹಗಳು ಮಿತಿಮೀರಿವೆ. ಇಸ್ರೇಲ್‌-ಹಮಾಸ್‌ ಯುದ್ಧ ಮತ್ತು ಉಕ್ರೇನ್‌ ಯುದ್ಧವನ್ನು ನಾವೀಗ ನೋಡುತ್ತಿದ್ದೇವೆ. ಇಂತಹ ಕಾರಣಗಳಿಗೆ ಭಾರತದಲ್ಲಿ ಎಂದಿಗೂ ಅಂತರ್ಯುದ್ಧ ನಡೆದಿಲ್ಲ. ಶಿವಾಜಿಯ ಕಾಲದಲ್ಲಿ ಈ ಕಾರಣಕ್ಕಾಗಿ ಕಾಳಗ ನಡೆದಿದ್ದನ್ನು ನಾವು ಸ್ಮರಿಸಬಹುದಷ್ಟೆ’ ಎಂದು ಹೇಳಿದ್ದಾರೆ.

Scroll to load tweet…

ಇದನ್ನು ಓದಿ: ಮೋದಿ ಮಾತು ಕೊಟ್ಟಂತೆ ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ಕಳಿಸಿದ ಭಾರತ ಸರ್ಕಾರ: 6.5 ಟನ್ ಔಷಧಿ, ಅಗತ್ಯ ವಸ್ತು ರವಾನೆ

ಇದನ್ನೂ ಓದಿ: 2024ಕ್ಕೆ ಮತ್ತೊಂದು ಯುದ್ಧ ಕಾದಿದೆಯಾ? ಹಮಾಸ್ ದಾಳಿ ಹಿಂದಿದೆ ಸೌದಿ - ಇಸ್ರೇಲ್‌ ದೋಸ್ತಿ ತರ್ಕ!