Asianet Suvarna News Asianet Suvarna News

58ನೇ ವರ್ಷದಲ್ಲಿ ಸಿಧು ಮೂಸೆವಾಲಾ ತಾಯಿಗೆ ಐವಿಎಫ್‌, ಪಂಜಾಬ್‌ ಸರ್ಕಾರದ ವರದಿ ಕೇಳಿದ ಕೇಂದ್ರ!

ಪಂಜಾಬಿ ಗಾಯಕ ಸಿಧು ಮೂಸೆವಾಲಾ ನಿಧನದ 22 ತಿಂಗಳ ಬಳಿಕ ಅವರ ತಾಯಿ ಚರಣ್‌ ಕೌರ್‌ ತಮ್ಮ 58ನೇ ವರ್ಷದಲ್ಲಿ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು.  ಈ ಪ್ರಕರಣ ಕುರಿತಾಗಿ ವಿವರಣೆ ನೀಡುವಂತೆ ಕೇಂದ್ರ ಸರ್ಕಾರ, ಪಂಜಾಬ್‌ ಸರ್ಕಾರವನ್ನು ಕೇಳಿದೆ.

Sidhu Moosewala Mother Conceives Through IVF At 58 Centre Seeks Report From Punjab san
Author
First Published Mar 20, 2024, 4:43 PM IST

ನವದೆಹಲಿ (ಮಾ.20): ಗ್ಯಾಂಗ್‌ಸ್ಟರ್‌ನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಾಯಿ 58ನೇ ವರ್ಷದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಐವಿಎಫ್‌ ಮೂಲಕ ಅವರ ಯಶಸ್ವಿಯಾಗಿ ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಗಳು ಬಂದಿರುವ ಬೆನ್ನಲ್ಲಿಯೇ ಕೇಂದ್ರ ಸರ್ಕಾರವು ಬುಧವಾರ ಪಂಜಾಬ್ ಸರ್ಕಾರಕ್ಕೆ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಕಾನೂನಿನ ಬಗ್ಗೆ ಉತ್ತರ ಕೋರಿ ನೋಟಿಸ್ ನೀಡಿದೆ. ಪಂಜಾಬ್‌ನ ಪ್ರಸಿದ್ಧ ಗಾಯಕನ ತಾಯಿ ಮಾರ್ಚ್‌ 18 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. 22 ತಿಂಗಳ ಹಿಂದೆ ಪಂಜಾಬ್‌ನ ಮಾನ್ಸಾದಲ್ಲಿ ಸಿಧು ಮೂಸೆವಾಲಾನನ್ನು ಹತ್ಯೆ ಮಾಡಲಾಗಿತ್ತು.  28 ವರ್ಷದ ಮಗ ಸಾವು ಕಂಡ 22 ತಿಂಗಳ ಬಳಿಕ ಗಾಯಕನ ತಂದೆ ಬಲ್ಕೌರ್‌ ಸಿಂಗ್‌ ಫೇಸ್‌ಬುಕ್‌ನಲ್ಲಿ ಮಗು ಹುಟ್ಟಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.  'ಶುಭದೀಪ್ ಅವರನ್ನು ಪ್ರೀತಿಸುವ ಲಕ್ಷ ಕೋಟಿ ಜನರ ಆಶೀರ್ವಾದದೊಂದಿಗೆ ಸರ್ವಶಕ್ತನು ಶುಭ್ ಅವರ ಚಿಕ್ಕ ಸಹೋದರನೊಂದಿಗೆ ನಮಗೆ ಆಶೀರ್ವದಿಸಿದ್ದಾನೆ' ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದರು.

"ಅಸಿಸ್ಟೆಡ್‌ ರೀಪ್ರೊಡಕ್ಷನ್‌ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ, 2021 ರ ಸೆಕ್ಷನ್ 21(g) ಅಡಿಯಲ್ಲಿ, ಎಆರ್‌ಟಿ ಸೇವೆಗಳನ್ನು ಪಡೆಯಲು ಮಹಿಳೆಗೆ 21-50 ವರ್ಷದ ವಯಸ್ಸಿನ ಮಿತಿ ನೀಡಲಾಗಿದೆ. ಆ ಕಾರಣದಿಂದಾಗಿ ಈ ಪ್ರಕರಣದಲ್ಲಿ ವಿಷಯವನ್ನು ಪರಿಶೀಲನೆ ಮಾಡಿ ನಿಮ್ಮ ವರದಿಯನ್ನು ಸಲ್ಲಿಸಬೇಕು. ಎಆರ್‌ಟಿ (ನಿಯಂತ್ರಣ) ಕಾಯಿದೆ, 2021 ರ ಪ್ರಕಾರ ಈ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ವರದಿಯನ್ನು ಈ ಇಲಾಖೆಗೆ ಸಲ್ಲಿಸಲಾಗಿದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ.

ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್‌ ಸಿಂಗ್‌ ಅವರು ಪಂಜಾಬ್‌ ಸರ್ಕಾರ ತಮಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲಿಯೇ ಕೇಂದ್ರ ಸರ್ಕಾರ ಈ ನೀಟಿಸ್‌ ಜಾರಿ ಮಾಡಿದೆ. ಹುಟ್ಟಿರುವ ಮಗು, ಚರಣ್‌ ಕೌರ್‌ ಅವರಿಗೆ ಸಂಬಂಧಪಟ್ಟಿದ್ದು ಎನ್ನುವ ಮಗುವಿನ ದಾಖಳೆಗಳನ್ನು ನೀಡುವಂತೆ ಪಂಜಾಬ್‌ ಸರ್ಕಾರ ಕೇಳಿದೆ. ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಲು ಸರ್ಕಾರ ತನ್ನನ್ನು ಕೇಳುತ್ತಿದೆ ಎಂದು ಅವರು ಹೇಳಿದ್ದಾರೆ.

"ವಾಹೆಗುರುಗಳ ಆಶೀರ್ವಾದದಿಂದ ನಾವು ನಮ್ಮ ಶುಭದೀಪ್ (ಸಿದ್ದು ಮೂಸೆವಾಲ) ಅವರನ್ನು ಮರಳಿ ಪಡೆದಿದ್ದೇವೆ, ಆದರೆ, ಸರ್ಕಾರವು ಬೆಳಿಗ್ಗೆಯಿಂದ ನನಗೆ ಕಿರುಕುಳ ನೀಡುತ್ತಿದೆ, ಮಗುವಿನ ದಾಖಲೆಗಳನ್ನು ನೀಡುವಂತೆ ಕೇಳುತ್ತಿದೆ,  ಈ ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಲು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ "ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

58ನೇ ವರ್ಷದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೂಸೆವಾಲಾ ತಾಯಿ!

ರಾಜ್ಯದ ಎಎಪಿ ಸರ್ಕಾರವು ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದು, ತಮ್ಮ ಸರ್ಕಾರ ಮಗುವಿನ ವಿವರಗಳನ್ನು ಹುಡುಕುತ್ತಿಲ್ಲ ಎಂದು ಹೇಳಿದೆ. ಬಿಜೆಪಿ ಆಡಳಿತದ ಕೇಂದ್ರವು ಈ ಸಂಬಂಧ ರಾಜ್ಯ ಸರ್ಕಾರದಿಂದ ಮಾಹಿತಿಯನ್ನು ಕೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯನ್ನು ಪಂಜಾಬ್‌ನ ಎಎಪಿಯ ಎಕ್ಸ್ ಹ್ಯಾಂಡಲ್ ಸಹ ಹಂಚಿಕೊಂಡಿದೆ.

ಏಕೈಕ ಪುತ್ರನ ಸಾವಿನ ನಂತರ 58ರ ಇಳಿವಯಸ್ಸಲ್ಲಿ ಮತ್ತೆ ಗರ್ಭಿಣಿಯಾದ ಗಾಯಕ ಸಿಧು ಮೂಸೆವಾಲಾ ತಾಯಿ

"ಚರಣ್ ಸಿಂಗ್ (ದಿವಂಗತ ಸಿಧು ಮೂಸೆವಾಲಾ ಅವರ ತಾಯಿ) ಅವರೇ ಸಿಎಂ ಭಗವಂತ್ ಮಾನ್ ಅವರು ಯಾವಾಗಲೂ ಪಂಜಾಬಿಗಳ ಭಾವನೆಗಳು ಮತ್ತು ಘನತೆಯನ್ನು ಗೌರವಿಸುತ್ತಾರೆ, ಆದರೆ, ದೇಶದ ಆಡಳಿತದಲ್ಲಿರುವ ಕೇಂದ್ರ ಸರ್ಕಾರವು ಪಂಜಾಬ್ ಸರ್ಕಾರದಿಂದ ವರದಿಯನ್ನು ಕೇಳಿದೆ. ಸತ್ಯಗಳನ್ನು ನೋಡುವಂತೆ ಜನರನ್ನು ಒತ್ತಾಯಿಸಿ ಮತ್ತು ಯಾವುದೇ ವದಂತಿಗಳನ್ನು ನಂಬಬೇಡಿ" ಎಂದು ಪೋಸ್ಟ್‌ನಲ್ಲಿ ಬರೆದಿದೆ.
 

Follow Us:
Download App:
  • android
  • ios