ರಾಮ ಮಂದಿರ ಮೇಲೆ ಪಾಕ್ ಭಯೋತ್ಪಾದಕರ ದಾಳಿ ಸಂಚು ಬಹಿರಂಗ, ಆಯೋಧ್ಯೆಯಲ್ಲಿ ಭದ್ರತೆ ಹೆಚ್ಚಳ!
ಜನವರಿ 22ರಂದು ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ. ಪ್ರಧಾನಿ ಮೋದಿ ಉದ್ಘಾಟನೆ ನಡೆಸಲಿದ್ದಾರೆ. ಇದೀಗ ರಾಮ ಮಂದಿರದ ಮೇಲೆ ಭಯೋತ್ಪಾದನಾ ದಾಳಿಗೆ ಸಂಚು ನಡೆದಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪಾಕಿಸ್ತಾನದ 2 ಭಯೋತ್ಪಾದಕ ಸಂಘಟನೆ ದಾಳಿಗೆ ಸಂಚು ರೂಪಿಸಿದೆ.
ಆಯೋಧ್ಯೆ(ನ.10) ಶ್ರೀ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ತಯಾರಿಗಳು ನಡೆಯುತ್ತಿದೆ. ಅಕ್ಷತ ಪೂಜೆ ನೇರವೇರಿಸಲಾಗಿದೆ. ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. ಜನವರಿ ಆರಂಭದಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮ ಮಂದಿರ ಉದ್ಘಾಟನೆ ಮಾಡಲಿದ್ದಾರೆ. ಆದರೆ ರಾಮ ಮಂದಿರ ಉದ್ಘಾಟನೆಗೆ 2 ತಿಂಗಳು ಬಾಕಿ ಇರುವಾಗಲೇ ಇದೀಗ ಆತಂಕದ ಮಾಹಿತಿಯೊಂದು ಹೊರಬಿದ್ದಿದೆ. ಪಾಕಿಸ್ತಾನದ ಅಲ್ ಖೈದಾ ಹಾಗೂ ಲಷ್ಕರ್ ಇ ತೈಬಾ ಉಗ್ರ ಸಂಘಟನೆ ಶ್ರೀ ರಾಮ ಮಂದಿರದ ಮೇಲೆ ಉಗ್ರ ದಾಳಿಗೆ ಸಂಚು ರೂಪಿಸಿರುವ ಮಾಹಿತಿ ಬಹಿರಂಗವಾಗಿದೆ.
ರಾಮ ಮಂದಿರದ ಮೇಲೆ ಭಯೋತ್ಪಾದಕ ದಾಳಿ ರೂಪಿಸುವ ಮೂಲಕ ಕಾಶ್ಮೀರ ರೀತಿ ಆಯೋಧ್ಯೆಯಯನ್ನು ವಿವಾದಿತ ಭೂಮಿಯನ್ನಾಗಿ ಪರಿವರ್ತಿಸುವುದು ಹಾಗೂ ಇಲ್ಲಿ ಹಿಂದೂಗಳ ಶ್ರದ್ಧ ಕೇಂದ್ರ ತಲೆಎತ್ತಿ ನಿಲ್ಲದಂತೆ ಮಾಡುವ ಹುನ್ನಾರ ನಡದಿದೆ. ಪಾಕಿಸ್ತಾನದ ಅಲ್ ಖೈದಾ ಹಾಗೂ ಲಷ್ಕರ್ ಭಯೋತ್ಪಾದಕ ಸಂಘಟನೆಗಳು ಈಗಾಗಲೇ ಮಹತ್ವದ ಚರ್ಚೆ ನಡೆಸಿ ದಾಳಿಗೆ ಸಜ್ಜಾಗಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ರಾಮಲಲ್ಲಾ ಪ್ರತಿಷ್ಠಾಪನೆಗೆ 100 ಕ್ವಿಂಟಲ್ ಅಕ್ಷತೆ ಬಳಕೆ, ಪೂಜೆ ಬಳಿಕ ದೇಶಾದ್ಯಂತ ಭಕ್ತರಿಗೆ ವಿತರಣೆ!
ರಾಮ ಮಂದಿರ ಮೇಲೆ ಭಯೋತ್ಪಾದಕ ದಾಳಿ ಮಾಹಿತಿ ಪಡೆಯುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ಭದ್ರತೆ ಹೆಚ್ಚಿಸಿದೆ. ಆಯೋಧ್ಯೆಯಲ್ಲಿ ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಲಾಗಿದೆ. ಇದೀಗ ಉತ್ತರ ಪ್ರದೇಶಕ್ಕೆ ಆಗಮಿಸುವ ವಾಹನಗಳು, ಆಯೋಧ್ಯೆನಗರ, ಹೊಟೆಲ್ ಸೇರಿದಂತೆ ಎಲ್ಲಾಾ ಕಡೆಗಳಲ್ಲಿ ತಪಾಸಣೆಗಳು ನಡೆಯುತ್ತಿದೆ.
ಕೇಂದ್ರ ಸರ್ಕಾರ ಈ ಕುರಿತು ಉತ್ತರ ಪ್ರದೇಶ ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಆಯೋಧ್ಯೆ ಸೇರಿ ಉತ್ತರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ದೇಶದ ಗಡಿಯಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಇಷ್ಟೇ ಅಲ್ಲ ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರದಲ್ಲೂ ಹದ್ದಿನ ಕಣ್ಣಿಡಲಾಗಿದೆ. ಕೋಸ್ಟಲ್ ಗಾರ್ಡ್ ಕೂಡ ಸನ್ನದ್ಧವಾಗಿದ್ದು, ಸಮುದ್ರ ಮೂಲಕ ಉಗ್ರರ ನುಸುಳುವಿಕೆ ತಡೆಯಲು ಸಜ್ಜಾಗಿದೆ.
ಆಯೋಧ್ಯೆ ರಾಮ ಮಂದಿರದ ಪೂಜಾ ಕೈಂಕರ್ಯ ಆರಂಭ, ಪ್ರತಿಯೊಬ್ಬ ಭಕ್ತರಿಗೆ ತಲುಪಲಿದೆ ಪ್ರಸಾದ!